ADVERTISEMENT

ರಾಷ್ಟ್ರಧ್ವಜಕ್ಕೆ ಅವಮಾನ: ದೂರು

​ಪ್ರಜಾವಾಣಿ ವಾರ್ತೆ
Published 23 ಮೇ 2017, 9:04 IST
Last Updated 23 ಮೇ 2017, 9:04 IST

ಕೆರೂರ: ಸ್ಥಳೀಯ ಪೆಂಡಾರಿ ಗಲ್ಲಿಯ ಯುವಕ ರಾಜಾ ಮೋಮಿನ್ ರಾಷ್ಟ್ರಧ್ವಜ ವನ್ನು ಅವಮಾನಕಾರಿ ರೀತಿಯಲ್ಲಿ ಚಿತ್ರಿಸಿ, ದೇಶ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆ ಗಳ ಮುಖಂಡರು ದೂರು ದಾಖಲಿಸಿ ದ್ದಾರೆ.

ನಂತರ ಇದನ್ನು ಫೇಸ್‌ಬುಕ್‌ನಲ್ಲಿ ಗಮನಿಸಿದ ಹಿಂದೂ ಸಂಘಟನೆಗಳ ಮುಖಂಡರು ರಾಚೋಟೇಶ್ವರ ದೇವಸ್ಥಾ ನದ ಬಳಿ ಸಭೆ ಸೇರಿ ರಾಷ್ಟ್ರಧ್ವಜವನ್ನು ಅವಮಾನಕಾರಿ ರೀತಿಯಲ್ಲಿ ಚಿತ್ರಿಸಿದ ಯುವಕನ ದುಷ್ಕೃತ್ಯವನ್ನು ಖಂಡಿಸಿದ ರಲ್ಲದೇ ಕೂಡಲೇ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದರು.

ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾ ಯಿಸಿ ಪ್ರತಿಭಟನೆಯ ಹಾದಿ ಹಿಡಿದರು. ಈ ಸಂದರ್ಭದಲ್ಲಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.

ADVERTISEMENT

ವಾಗ್ವಾದ: ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗದೇ ಹಿಂದೂ ಸಂಘಟನೆಗಳ ಯುವಕರ ಮೇಲೆ ಕೆರೂರ ಪಿಎಸ್ಐ ಎಸ್.ಎಂ.ಅವಜಿ ಹಾಗೂ ಕೆಲ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿ ಸ್ಥಳೀಯ ಹಲವು ಮುಖಂಡರು ಪಿಎಸ್ಐ ಜೊತೆಗೆ ತೀವ್ರ ಮಾತಿನ ಚಕಮಕಿ, ವಾಗ್ವಾದ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಪ್ರಜಾವಾಣಿಗೆ ತಿಳಿಸಿದ್ದಾರೆ.ಈ ಘಟನೆ ಭಾನುವಾರ ಬೆಳಕಿಗೆ ಬಂದಿದ್ದರೂ ಮಧ್ಯರಾತ್ರಿ 11 ರ ನಂತರ ವಿಳಂಬವಾಗಿ ದೂರು ದಾಖಲು ಮಾಡಲಾಯಿತು ಎಂದು ಧುರೀಣರು ಆರೋಪಿಸಿದರು.

ನಾಲ್ಕನೇ ಪ್ರಕರಣ: ಕಳೆದ ಏಳೆಂಟು ತಿಂಗಳಲ್ಲಿ ಫೇಸಬುಕ್‌ನಲ್ಲಿ ಅಕ್ಷೇಪಾರ್ಹ ಚಿತ್ರ ಅಪ್‌ಲೋಡ್ ಮಾಡಿ ಅನ್ಯ ಸಮಾ ಜಗಳ ಕೆಂಗಣ್ಣಿಗೆ ಗುರಿಯಾಗಿ ಬಂಧನಕ್ಕೆ ಒಳಗಾದ ನಾಲ್ಕನೇ ಪ್ರಕರಣ ಇದಾಗಿದ್ದು ಸಾರ್ವಜನಿಕರಲ್ಲಿ ತೀವ್ರ ಕಳವಳ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.