ADVERTISEMENT

ಶೇ 31 ರಷ್ಟು ಸದಸ್ಯರು ಅನಕ್ಷರಸ್ಥರು!

ಬಾಗಲಕೋಟೆ ತಾಲ್ಲೂಕು: ಗ್ರಾಮ ಪಂಚಾಯ್ತಿ 143 ಸದಸ್ಯರು ಶಾಲೆಯ ಮೆಟ್ಟಿಲೇ ಹತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:35 IST
Last Updated 19 ಜನವರಿ 2017, 6:35 IST
ಬಾಗಲಕೋಟೆ ತಾಲ್ಲೂಕಿನ ಶಿರೂರು ಗ್ರಾಮ ಪಂಚಾಯ್ತಿ ಕಟ್ಟಡ
ಬಾಗಲಕೋಟೆ ತಾಲ್ಲೂಕಿನ ಶಿರೂರು ಗ್ರಾಮ ಪಂಚಾಯ್ತಿ ಕಟ್ಟಡ   

ಬಾಗಲಕೋಟೆ: ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳಿಗೆ 2015ರಲ್ಲಿ ಚುನಾ ಯಿತರಾದ ಜನಪ್ರತಿನಿಧಿಗಳಲ್ಲಿ ಶೇ 31 ಮಂದಿ ಶಾಲೆಯ ಮೆಟ್ಟಿಲು ಹತ್ತಿಲ್ಲ!
ಸಾಕ್ಷರ ಭಾರತ್ ಮಿಷನ್‌ನ ಅಂಗವಾದ ಲೋಕ ಶಿಕ್ಷಣ ಸಮಿತಿ ಈ ಬಗ್ಗೆ ಸಮೀಕ್ಷೆ ನಡೆಸಿದ್ದು, ತಾಲ್ಲೂಕು ಪಂಚಾ ಯ್ತಿಯಿಂದ ಸಮಿತಿಗೆ ನೀಡಲಾದ ಮಾಹಿ ತಿಯಲ್ಲಿ ಈ ಸಂಗತಿ ಬಹಿರಂಗ ಗೊಂಡಿದೆ. ತಾಲ್ಲೂಕಿನ ಒಟ್ಟು 30 ಗ್ರಾಮ ಪಂಚಾಯ್ತಿಗಳಲ್ಲಿ 449 ಸದಸ್ಯರಿದ್ದಾರೆ.

ಅವರಲ್ಲಿ 90 ಮಹಿಳೆಯರು ಹಾಗೂ 53 ಪುರುಷ ಸದಸ್ಯರು ಸೇರಿದಂತೆ 143 ಮಂದಿ ಶಾಲೆಯ ಮೆಟ್ಟಿಲನ್ನು ಹತ್ತಿಲ್ಲ. ಇವರಲ್ಲಿ 55 ಪರಿಶಿಷ್ಟ ಜಾತಿ, 17 ಪರಿಶಿಷ್ಟ ಪಂಗಡ, 41 ಹಿಂದುಳಿದ ವರ್ಗ, 4 ಅಲ್ಪಸಂಖ್ಯಾತ ಹಾಗೂ 26 ಇತರೆ ವರ್ಗಕ್ಕೆ ಸೇರಿದವರಾಗಿದ್ದಾರೆ.

ಬೆನಕಟ್ಟಿ, ಚಿಕ್ಕ ಮ್ಯಾಗೇರಿ, ದೇವನಾಳ, ಕದಾಂ ಪುರ, ಕಲಾದಗಿ, ಸೀಮಿಕೇರಿ ಪಂಚಾಯ್ತಿ ಗಳಲ್ಲಿನ ಎಲ್ಲ ಸದಸ್ಯರು ಅಕ್ಷರಸ್ಥರಾಗಿ ದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಪಂಚಾಯ್ತಿಗಳಿಗೆ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದು ತಾಲ್ಲೂಕು ಸಾಕ್ಷರತಾ ಸಂಯೋಜಕ ಬಸನಗೌಡ ಪಾಟೀಲ ತಿಳಿಸಿದರು. ಕೆಲ ಸದಸ್ಯರು ಶಾಲೆಗೆ ಹೋಗದಿದ್ದರೂ ಸಹಿ ಮಾಡಲು ಹಾಗೂ ಅಲ್ಪ–ಸ್ವಲ್ಪ ಓದುವ ಸಾಮರ್ಥ್ಯ ಹೊಂದಿ ದ್ದಾರೆ. ಅವರನ್ನು ಈ ವರದಿಯಲ್ಲಿ ಪರಿಗಣಿಸಿಲ್ಲ ಎಂದು ಅವರು ಹೇಳಿದರು.
–ಜಗದೀಶ. ಎಚ್‌.ಭಜಂತ್ರಿ

*
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಸದಸ್ಯರಿಗೆ ಮುಂದಿನ ಚುನಾ ವಣೆಯಲ್ಲಿ ವಿದ್ಯಾರ್ಹತೆ ನಿಗದಿ ಮಾಡ ಬೇಕು
–ಚನ್ನನಗೌಡ ಪರನಗೌಡರ,
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.