ADVERTISEMENT

ಸಂಭ್ರಮದ ಚೌಡೇಶ್ವರಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 26 ಮೇ 2017, 9:50 IST
Last Updated 26 ಮೇ 2017, 9:50 IST

ಕಮತಗಿ (ಅಮೀನಗಡ): ಪಟ್ಟಣದ ಸುಕ್ಷೇತ್ರ ಶ್ರೀ ರಾಮಲಿಂಗ– ಚೌಡೇಶ್ವರಿ ಜಾತ್ರಾ ಮಹೋತ್ಸವ ಅಪಾರ ಜನ ಸ್ತೋಮದ ಮಧ್ಯೆ ಸಡಗರ ಸಂಭ್ರಮದಿಂದ ಗುರುವಾರ ಜರುಗಿತು. ಹಿಂದಿನ ದಿನ ರಾತ್ರಿವಿಡೀ  ಭಜನಾ ಪದ ಜರುಗಿದವು. ಬೆಳಿಗ್ಗೆ ಶ್ರೀ ರಾಮಲಿಂಗ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ ನಡೆದವು.

ಭಕ್ತರು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಹೋಳಿಗೆ ಶೀಕರಣಿ, ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ದರ್ಶನ ಪಡೆದು ಕೃತಾರ್ಥರಾದರು. ಸಂಜೆ 4:15 ಗಂಟೆಗೆ ದೇವಿಯ ಭಕ್ತರಾದ ಚಂದ್ರು ಅಳ್ಳಿಮನಿಯವರು ದೇವಿಯ ಮುಖವನ್ನು ಹಾಕಿಕೊಂಡು ದೇವಸ್ಥಾನದ ಮುಂದೆ ಭಕ್ತರೊಂದಿಗೆ ಕೋಲಾಟ ಪ್ರದರ್ಶಿಸಿದರು.

ರಾಮಲಿಂಗ–ಚೌಡೇಶ್ವರಿ ನಿನ್ನ ಪಾದಕ ಶಂಬೂಕೋ, ಆದಿ   ಪರಮೇಶ್ವರಿ ನಿನ್ನ ಪಾದಕ ಶಂಬೂಕೋ ಎಂದು  ಜಯ ಘೋಷ ಹಾಕಿ ಸಂಭ್ರಮಿಸಿದರು. ನಂತರ ಸುಮಂಗಲಿಯರ ಕಳಸ ದಾರತಿ, ಸಕಲ ವಾದ್ಯಗೋಷ್ಠಿಗಳೊಂ ದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬರುವ ಅಂಗಡಿಗಳಲ್ಲಿ, ಮನೆಗಳಲ್ಲಿ ಭಕ್ತರಿಂದ ಉಡಿ ತುಂಬಿಸಿಕೊಳ್ಳುತ್ತಾ  ಬನಶಂಕರಿ ದೇವಿ ದೇವಸ್ಥಾನಕ್ಕೆ ತಲುಪಿ ಅಲ್ಲಿ ಕೋಲಾಟ ಕಾರ್ಯಕ್ರಮ ನಡೆಯಿತು.

ADVERTISEMENT

ಅಲ್ಲಿಂದ ಶ್ರೀ ದಾನಮ್ಮದೇವಿ ದೇವ ಸ್ಥಾನಕ್ಕೆ ಬೇಟಿ ನೀಡಿ ಗಾಂಧೀಚೌಕಿಗೆ ಬಂದು ಅಲ್ಲಿ ಕಾಯಿಗಳ ಸವಾಲು ನಡೆ ಯಿತು. ನಂತರ ಶ್ರೀ ಪಾರ್ವತಿಪರ ಮೇಶ್ವರ ದೇವಸ್ಥಾನಕ್ಕೆ ತೆರಳಿ ಉಡಿ ತುಂಬಿ ಕೊಂಡು ಗಂಗೆ ದರ್ಶನ ಪಡೆದು ದೇವಸ್ಥಾನಕ್ಕೆ ಮರಳಿ ಪ್ರತಿಷ್ಠಾಪನೆ ಗೊಂಡಿತು.

ಜಾತ್ರಾ ಮಹೋತ್ಸವ ಮೆರವಣಿಗೆ ಯಲ್ಲಿ ಶ್ರೀ ದೇವಾಂಗ ಸಮಾಜ   ಅಭಿವೃದ್ದಿ ಸಮಿತಿ ಅಧ್ಯಕ್ಷ ಹೇಮಂತ ಮಾಡಬಾಳ, ಹಿರಿಯ ಮುಖಂಡ ವೀರಭದ್ರಪ್ಪ ಆರಿ, ರಾಮಣ್ಣ ವನಕಿ, ರಾಮಣ್ಣ ದಂಡಾವತಿ, ಗುರುನಾಥ ಶಿನ್ನೂರ, ರವಿಂದ್ರ ಶಿನ್ನೂರ, ಅರ್ಜುನಪ್ಪ ಹೋಟಿ, ಲಕ್ಷ್ಮಣ್ಣ ಯರಗಲ್ಲ, ಶಿವಯೋಗೆಪ್ಪ ಶಿನ್ನೂರ, ಸಂಗಣ್ಣ ಶಿನ್ನೂರ, ವಿಠ್ಠಪ್ಪ ಬಳ್ಳಾ, ಚಂದ್ರು ಹೋಟಿ, ಸುಭಾಷ್ ರೂಗಿ, ಜಂಪಣ್ಣ ಹೋಟಿ, ಸಂಗಣ್ಣ ಶಿನ್ನೂರ, ಸುರೇಶ ಹುಲಮನಿಗೌಡ್ರ. ನಾಗಪ್ಪ ಗುಡ್ಡದ, ವಿಠ್ಠಪ್ಪ ಬಳ್ಳಾ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.