ADVERTISEMENT

ಸರ್ಕಾರದಿಂದ ಮಲತಾಯಿ ಧೋರಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 9:02 IST
Last Updated 23 ಮೇ 2017, 9:02 IST

ಮುಧೋಳ: ರಾಜ್ಯ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವುದರ ಮೂಲಕ ಉತ್ತರ ಕರ್ನಾ ಟಕ ಕುರಿತು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಶಾಸಕ ಗೋವಿಂದ ಕಾರಜೋಳ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಕಣಿವಿಯ ಕಬಿನಿ, ಹೇಮಾವತಿ, ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಕೊಡಲು ಸಾಧ್ಯವಾಗಿಲ್ಲ. ಆದರೆ ಅವರಿಗೆ ಅವರು ಬೆಳೆಯುತ್ತಿರುವ ಬೆಳೆಗೆ ಸೂಕ್ತ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿದೆ. ಅದೇ ರೀತಿ ಉತ್ತರ ಕರ್ನಾಟಕದ ಘಟಪ್ರಭಾ, ಮಲಪ್ರಭಾ, ತುಂಗಭದ್ರಾ ಅಚ್ಚು ಕಟ್ಟು ಪ್ರದೇಶಕ್ಕೂ ನೀರು ನೀಡಿಲ್ಲ ಹಾಗೂ ಪರಿಹಾರವನ್ನು ನೀಡಿಲ್ಲ.

ಕೂಡಲೇ ಸರ್ಕಾರ ಈ ಭಾಗದ ರೈತರಿಗೂ ಪರಿಹಾರ ನೀಡುವುದರ ಮೂಲಕ ಮಲತಾಯಿ ಧೋರಣೆ ಅನು ಸರಿಸುತ್ತಿಲ್ಲ ಎಂಬು ವುದನ್ನು ನಿರೂಪಿಸಬೇಕು. ಇಲ್ಲದಿದ್ದರೆ ಈ ಭಾಗದ ರೈತರು ಸರ್ಕಾರವನ್ನು  ಎಂದೂ ಕ್ಷಮಿಸುವುದಿಲ್ಲ ಎಂದು ಹೇಳಿದರು.

ADVERTISEMENT

ಬರ ನಿರ್ವಹಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ₹ 4633 ಕೋಟಿ ನೀಡಿದೆ. ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಸ್ವಾತಂತ್ರ್ಯ ನಂತರದ ಯಾವ ಕೇಂದ್ರ ಸರ್ಕಾರ ನೀಡಿರಲಿಲ್ಲ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ರೈತರಿಗೆ ಪರಿಹಾರ ನೀಡುವುದರಲ್ಲಿ ವಿಳಂಬವಾ ಗಿದೆಂದು ಒಪ್ಪಿಕೊಂಡಿದ್ದಾರೆ ಎಂದರು.

ರಾಜ್ಯದ ರೈತರಲ್ಲಿ ಆತ್ಮವಿಶ್ವಾಸ ತುಂಬಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅದಕ್ಕಾಗಿ 1600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ನೇರವಿಗೆ ಧಾವಿಸಬೇಕಿದ್ದ ರಾಜ್ಯಸರ್ಕಾರ ನಿರ್ಲಕ್ಷ ಉದಾಸೀನ ನೀತಿ ಅನುಸರಿಸಿತು ಎಂದರು.

ನಮ್ಮ ಸರ್ಕಾರ ಇದ್ದ ಸಮಯದಲ್ಲಿ ₹ 5 ರಿಂದ 6 ಸಾವಿರಕ್ಕೆ ಒಂದು ಲೋಡ್ ಸಿಗುತ್ತಿದ್ದ ಮರಳು ಈ ಸರ್ಕಾರದ ಬೇಜವಾಬ್ದಾರಿ ನೀತಿಯಿಂದ ₹ 50 ರಿಂದ 60 ಸಾವಿರಕ್ಕೆ ಸಿಗುವಂತಾಗಿದೆ. ಅಖಂಡ ವಿಜಯಪುರ ಜಿಲ್ಲೆಯಲ್ಲಿ     ಐದು ನದಿಗಳು ಹರಿದಿವೆ. ಈ ಅವಳಿ ಜಿಲ್ಲೆಗೆ ಮರಳಿನ ಅಭಾವವೇ ಆಗಬೇಕಿಲ್ಲ. ಆದರೆ ಸರ್ಕಾರದ ಅವೈಜ್ಞಾನಿಕ ನೀತಿ ಯಿಂದ ಸರ್ಕಾರದ ನೀರಾವರಿ ಯೋಜನೆ ಸರ್ಕಾರದ ಕಟ್ಟಡ ಹಾಗೂ ಖಾಸಗಿ ಕಟ್ಟಡಗಳು ಮರಳಿಲ್ಲದೆ ಅರ್ಧಕ್ಕೆ ನಿಂತಿವೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ, ಬಿ.ಎಚ್.ಪಂಚಗಾಂವಿ, ಚಂದ್ರಕಾಂತ ಹಿತ್ತಲಮನಿ, ಬಸವರಾಜ ಮಳಲಿ, ನಾಗಪ್ಪ ಅಂಬಿ, ಕಲ್ಲಪ್ಪಣ್ಣ ಸಬರದ, ಅರುಣ ಕಾರಜೋಳ ಮುಂತಾದವರು ಇದ್ದರು.ಪ್ರಜಾವಾಣಿ ವಾರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.