ADVERTISEMENT

‘ಕೃಷ್ಣೆಗೆ ನೀರು ಬಿಜೆಪಿಯ ಸಾಧನೆ’

​ಪ್ರಜಾವಾಣಿ ವಾರ್ತೆ
Published 4 ಮೇ 2016, 9:26 IST
Last Updated 4 ಮೇ 2016, 9:26 IST

ಬನಹಟ್ಟಿ: ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 1 ಟಿಎಂಸಿ ನೀರು ಬಿಡಿ ಸುವಲ್ಲಿ ಬಿಜೆಪಿಯ ಪಾತ್ರ ಮಹತ್ವದ್ದಾಗಿದೆ ಎಂದು ತೇರದಾಳ ಮಾಜಿ ಶಾಸಕ ಸಿದ್ದು ಸವದಿ ತಿಳಿಸಿದರು.

ಸಮೀಪದ ಕೃಷ್ಣಾ ನದಿಯ ನೀರು ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ಕೃಷ್ಣಾ ನದಿಗೆ ನೀರು ಎಲ್ಲಿಂದ, ಎಷ್ಟು ಟಿಎಂಸಿ, ಯಾವ ಬ್ಯಾರೇಜ್‌ನಿಂದ ಬಂದದ್ದು? ಎಂಬ ಯಾವುದೆ ವಿಷಯದ ಅರಿವಿಲ್ಲದೆ, ನದಿಗೆ ನೀರು ಬಂದ ತಕ್ಷಣ ಕಾಂಗ್ರೆಸ್‌ನವರೆ  ಬಿಡಿಸಿದ್ದು ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಸಚಿವೆ ಉಮಾಶ್ರೀ ಅವರ ವಿರುದ್ಧ ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದೆ. ತಮ್ಮ ಪಕ್ಷದ ಆಡಳಿತ ಇರುವಾಗ  ಎರಡು ತಿಂಗಳ ಹಿಂದೆಯೆ ನೀರು ಬಿಡಿಸ ಬೇಕಿತ್ತು. ಆಡಳಿತ ನಡೆಸತ್ತಿರುವ ಸರ್ಕಾ ರವು ನೀರು ಬಿಡುಗಡೆಗೊಳಿಸುವಲ್ಲಿ ವಿಫಲಗೊಂಡ ಕಾರಣ ವಿರೋಧ ಪಕ್ಷ ಬಿಜೆಪಿಯು ಅನಿವಾರ್ಯವಾಗಿ ಮಹಾ ರಾಷ್ಟ್ರದ ಮುಖ್ಯಮಂತ್ರಿ  ಜೊತೆಗೆ ಮಾತುಕತೆ ನಡೆಸಿ 4 ಟಿಎಂಸಿಯಷ್ಟು ನೀರು ನೀಡ ಬೇಕೆಂದು ವಿನಂತಿಸಿತ್ತು. ಅದರಂತೆ 1 ಟಿಎಂಸಿ ನೀರು ಈಗಾಗಲೆ ಬಿಡುಗಡೆಗೊಳಿಸಿದ್ದು, ಸದ್ಯವೇ ಮತ್ತೊಂದು ಟಿಎಂಸಿ ನೀರು            ಬಿಡುಗಡೆ ಮಾಡಲಿದೆ ಎಂದು ಸವದಿ ತಿಳಿಸಿದರು.

ಜನರು ನೀರಿಗಾಗಿ ಪರಿತಪಿಸುತ್ತಿ ದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಮುಖಂಡರು ತಮ್ಮ ಸ್ವಂತ ಮನೆ ಹಾಗೂ ತೋಟಗಳ ಬಳಕೆಗೆ ಸರ್ಕಾರಿ ಕೊಳವೆ ಬಾವಿಗಳನ್ನು ಬಳಕೆ ಮಾಡಿಕೊಳ್ಳುತ್ತಿ ದ್ದಾರೆ ಎಂದು ಸವದಿ ದೂರಿದರು.

ತೇರದಾಳ ವಿಧಾನಸಭಾ ಕ್ಷೇತ್ರದ ಬರ ಪರಸ್ಥಿತಿಯ ಪರಿಶೀಲನಾ ಸಭೆ ಯನ್ನು ಸಚಿವೆ ಉಮಾಶ್ರೀ ಜಮಖಂಡಿ ಯಲ್ಲಿ ನಡೆಸಿದ್ದು ಖಂಡನೀಯ ಎಂದು ಸವದಿ ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ತೆಗ್ಗಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ನಗರಸಭಾ ಮಾಜಿ ಅಧ್ಯಕ್ಷ ಕಣೆಪ್ಪ ಹಾರೂಗೇರಿ, ನಗರಸಭಾ ಸದಸ್ಯ ರಾಜು  ಬಾಣಕಾರ, ಸಂಜಯ ತೆಗ್ಗಿ, ಭೂಪಾಲ ಫಿರೋಜಿ, ಈಶ್ವರ ಪಾಟೀಲ, ಪಿ.ಈ. ಕಾಖಂಡಕಿ, ಬಿಜೆಪಿ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ರಾಜು ಅಂಬಲಿ, ಈರಣ್ಣ ಚಿಂಚಖಂಡಿ, ರವಿ ಚನಪನ್ನವರ, ಶಿವಾನಂದ ಬುದ್ನಿ, ಶಿವಾನಂದ ಕಾಗಿ, ರಮೇಶ ಮಂಡಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.