ADVERTISEMENT

21ನೇ ವರ್ಷಕ್ಕೆ ಬ್ಯಾಂಕ್ ಪದಾರ್ಪಣೆ

ಸಂಸ್ಥೆಯ ಯಶಸ್ಸಿಗೆ ಗ್ರಾಹಕರ ಸಹಕಾರ ಕಾರಣ: ಎಸ್‌.ಆರ್‌. ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:29 IST
Last Updated 12 ಜುಲೈ 2017, 6:29 IST

ಬೀಳಗಿ: ‘ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಬಾಧಿತಗೊಂಡು ಆರ್ಥಿಕ ತೊಂದರೆಯಲ್ಲಿದ್ದ ಬೀಳಗಿ ತಾಲ್ಲೂಕಿನ ಜನತೆಯ ಆರ್ಥಿಕ ನೆರವಿಗಾಗಿ ಸ್ಥಾಪನೆಗೊಂಡ ಬ್ಯಾಂಕು ಜನತೆಯ ಸಹಕಾರದಿಂದ 20 ವರ್ಷಗಳಲ್ಲಿ ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಬೆಳೆದಿದ್ದು ನಿಜಕ್ಕೂ ಸಂತಸದ ಸಂಗತಿ ಯಾಗಿದೆ’ ಎಂದು ಬ್ಯಾಂಕ್‌ ಸಂಸ್ಥಾಪಕ ಅಧ್ಯಕ್ಷ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.

ಮಂಗಳವಾರ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ 20ನೇ ವಾರ್ಷಿಕೋತ್ಸವದ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾತನಾಡಿದರು.

‘1997ರಲ್ಲಿ ಕೇವಲ 1,100 ಷೇರುದಾರರ ₹11 ಲಕ್ಷ ಷೇರು ಬಂಡವಾಳದಿಂದ ಪ್ರಾರಂಭಗೊಂಡ ಬ್ಯಾಂಕು ಇಂದು 12 ಸಾವಿರ ಷೇರುದಾರರು, ₹ 5.71ಕೋಟಿ ಷೇರು ಬಂಡವಾಳ ಹೊಂದಿದೆ. ₹158 ಕೋಟಿ ಸಾಲ ವಿತರಿಸಿದೆ. ₹ 221ಕೋಟಿ ಠೇವಣಿ ಹಾಗೂ ₹250ಕೋಟಿ ದುಡಿಯುವ ಬಂಡವಾಳ ಹೊಂದಿದೆ’ ಎಂದು ಹೇಳಿದರು.

ADVERTISEMENT

‘ಪ್ರಧಾನ ಕಚೇರಿಯೊಂದಿಗೆ ಬೇರೆಬೇರೆ ಜಿಲ್ಲೆಗಳಲ್ಲಿ 11 ಶಾಖೆಗಳನ್ನು ಹೊಂದಿದೆ. ಐವರು ಸಿಬ್ಬಂದಿಯಿಂದ ಪ್ರಾರಂಭಗೊಂಡ  ಬ್ಯಾಂಕಿನಲ್ಲಿ ಈಗ 79 ಸಿಬ್ಬಂದಿ ಸೇವೆಯಲ್ಲಿದ್ದಾರೆ. ಇನ್ನೂ 7 ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್‌ ಬ್ಯಾಂಕಿನಿಂದ ಅನುಮತಿ ಪಡೆಯಲಾಗಿದೆ’ ಎಂದು ತಿಳಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಎಸ್.ಆರ್. ಮೇಲ್ನಾಡ, ನಿರ್ದೇಶಕ ಮಂಡಳಿ ಸದಸ್ಯರಾದ ಎಚ್.ಎ.ಕೊಪ್ಪಳ, ಕೆ.ಎಸ್. ಪತ್ರಿ, ಎಸ್.ಸಿ.ಕೆರೂರ, ಡಿ.ಬಿ. ಮಮದಾ ಪೂರ, ಪಿ.ಎಸ್.ಪಾಟೀಲ, ಬಿ.ಬಿ.ಕೋಟಿ, ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತ ಕೋಟಿ, ವ್ಯವಸ್ಥಾಪಕರಾದ ಶಾಹೀರ ಬೀಳಗಿ, ಜಿ.ಎಸ್.ಬನಹಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.