ADVERTISEMENT

ಪೊಲೀಸರಿಂದ ಹೆಲ್ಮೆಟ್ ಜಾಗೃತಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 8:40 IST
Last Updated 8 ಫೆಬ್ರುವರಿ 2018, 8:40 IST

ಗುಳೇದಗುಡ್ಡ: ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕಳೆದ ಒಂದು ವಾರದಿಂದ ಹೆಲ್ಮೆಟ್ ಇಲ್ಲದೆ ಸಂಚರಿಸುವರ ಬೈಕ್ ಸವಾರರ ಮತ್ತು ನಾಲ್ಕು ಚಕ್ರಗಳ ವಾಹನ ಚಾಲಕರನ್ನು ತಪಾಸಣೆ ಮಾಡುವ ಕಾರ್ಯ ಭರದಿಂದ ನಡೆಸಿದೆ.

ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸುವ ಬೈಕ್ ಸವಾರರನ್ನು ನಿಲ್ಲಿಸಿ, ಹೆಲ್ಮೆಟ್ ಧರಿಸುವಂತೆ ತಿಳುವಳಿಕೆ ನೀಡುವುದು ಹಾಗೂ ನಾಲ್ಕು ಚಕ್ರಗಳ ವಾಹನದ ಕಾಗದಪತ್ರಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ಎ.ಎಸ್.ಐ ವೈ.ಎನ್. ಕುಂಬಾರ, ಬಿ.ಎಸ್. ಸಂಕೊಂಡ ಹಾಗೂ ಸಿಬ್ಬಂದಿ ಕಾರ್ಯ ತೊಡಗಿದ್ದಾರೆ.

ಪೊಲೀಸ್ ಸಿಬ್ಬಂದಿಯವರೇ ಹೇಳುವ ಹಾಗೆ ದಿನಕ್ಕೆ ನೂರು ಪ್ರಕರಣಗಳು ದಾಖಲಿಸುತ್ತಿವೆ. ಸಾರ್ವಜನಿಕರಲ್ಲಿ ಕಾನೂನಿನ ತಿಳಿವಳಿಕೆ ನೀಡುವುದು ಮತ್ತು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುವ ಕಾರ್ಯ ನಡೆಸಿದೆ ಎಂದು ಪಿ.ಎಸ್.ಐ. ಬಸವರಾಜ ಲಮಾಣಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.