ADVERTISEMENT

ಅಂಚೆ ಇಲಾಖೆಯಿಂದ ಜನಸ್ನೇಹಿ ಸೇವೆ

ಖುಷಿ ಕೌಂಟರ್, ಮಿಲೆಪ್ ಸೇವೆ ಉದ್ಘಾಟನೆ, ಗೋವಿಂದರಾಜ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:44 IST
Last Updated 23 ಮಾರ್ಚ್ 2017, 9:44 IST

ಕೂಡ್ಲಿಗಿ: ದೇಶದ ಅಂಚೆ ಇಲಾಖೆಯನ್ನು ಜನ ಸ್ನೇಹಿಯನ್ನಾಗಿ ಮಾಡಲು ಕೇಂದ್ರ ಸರ್ಕಾರ ವಿವಿಧ ಯೋಜನೆಗಲನ್ನು ಜಾರಿ ಮಾಡಿದ್ದು, ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ಅಂಚೆ ಪಾಲಕ ಗೋವಿಂದರಾಜ್ ಹೇಳಿದರು.

ಅವರು ಪಟ್ಟಣದ ಪ್ರಧಾನ ಅಂಚೆ ಕಚೇರಿಯಲ್ಲಿ ಮಂಗಳವಾರ ಹ್ಯಾಪಿ ಕೌಂಟರ್ ಹಾಗೂ ಮೇಲ್ ಮಿಲೆಪ್ ಸೇವೆಗಳ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ  ಆಶಯದಂತೆ ಅಂಚೆ ಇಲಾಖೆಯನ್ನು ಮತ್ತಷ್ಟು ಜನ ಸ್ನೇಹಿಯಾಗಿ ಮಾಡಲು ದೇಶದಾದ್ಯಂತ ಹ್ಯಾಪಿ ಕೌಂಟರ್ ಹಾಗೂ ಮೇಲ್ ಮಿಲೆಪ್ ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ. ಅದರ ಭಾಗವಾಗಿ  ಪಟ್ಟಣದ ಪ್ರಧಾನ ಅಂಚೆ ಕಚೇರಿಯಲ್ಲಿ ಈ ಸೇವೆಗಳನ್ನು ಸಾರ್ವಜನರಿಕರಿಗೆ ಸಮರ್ಪಿಸಲಾಗಿದೆ.

ಅಂಚೆ ಸೇವೆಗಳ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಬರೆದು  ಪೆಟ್ಟಿಗೆಯಲ್ಲಿ ಹಾಕಬಹುದು ಎಂದರು. ಅಂಚೆ ನೀರಿಕ್ಷಕ ದೇವರಚಂದ್ ಕ್ಯಾತಿ ಹ್ಯಾಪಿ ಕೌಂಟರ್ ಹಾಗೂ ಮೇಲ್ ಮಿಲೆಪ್ ಸೇವೆಗಳ ಚಾಲನೆ ನೀಡಿದರು. ಸಹಾಯಕ ಅಂಚೆ ಪಾಲಕರಾದ ವೆಂಕಟೇಶ್, ಎಸ್, ನಾಗರಾಜ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.