ADVERTISEMENT

‘ಆಸ್ಪತ್ರೆ ಸುಧಾರಣೆಗೆ ₹ 9.50 ಕೋಟಿ’

ಉತ್ತಂಗಿಗೆ ಹೊಸ ಆಸ್ಪತ್ರೆ: ಹಡಗಲಿ, ಮಾಗಳ, ಹೊಳಗುಂದಿಯಲ್ಲಿ ವಸತಿಗೃಹ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:51 IST
Last Updated 28 ಡಿಸೆಂಬರ್ 2016, 5:51 IST

ಹೂವಿನಹಡಗಲಿ: ‘ತಾಲ್ಲೂಕಿನ ಪ್ರಮುಖ ಆಸ್ಪತ್ರೆಗಳ ಸುಧಾರಣೆಗಾಗಿ ವಿಶೇಷ ಅಭಿ ವೃದ್ಧಿ ಯೋಜನೆ ಅಡಿ ₹ 9.50 ಕೋಟಿ ಮಂಜೂರಾಗಿದೆ’ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

ಪಟ್ಟಣದ ಸಣ್ಣ ಕೈಗಾರಿಕಾ ವಸಾ ಹತು ಪ್ರದೇಶದಲ್ಲಿ ಸೋಮವಾರ ₹ 70 ಲಕ್ಷ ವೆಚ್ಚದಲ್ಲಿ ಮೂಲಸೌಕರ್ಯ ಅಭಿ ವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಸುದ್ದಿಗಾ ರರಿಗೆ ಅವರು ಮಾಹಿತಿ ನೀಡಿದರು.

ಉತ್ತಂಗಿಯಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ, ಹಡಗಲಿ ನೂರು ಹಾಸಿಗೆ ಆಸ್ಪತ್ರೆಗೆ ರಕ್ಷಣಾ ಗೋಡೆ ಸಿಬ್ಬಂದಿ ವಸತಿಗೃಹ, ಹೊಳಗುಂದಿ, ಮಾಗಳ ಗ್ರಾಮದಲ್ಲಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗೆ ವಸತಿ ಸಮುಚ್ಛಯ ನಿರ್ಮಾಣವನ್ನು ಈ ಯೋಜನೆ ಅಡಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡ ಲಾಗುವುದು ಎಂದು ತಿಳಿಸಿದರು.

ಪಟ್ಟಣದಲ್ಲಿ ಸಿ.ಸಿ.ರಸ್ತೆ, ಕುಡಿಯುವ ನೀರು, ಸಾಮೂಹಿಕ ಶೌಚಾಲಯ ಇತರೆ ಮೂಲಸೌಕರ್ಯಗಳ ಅಭಿವೃದ್ಧಿಗೆ ನಗ ರೋತ್ಥಾನ ಯೋಜನೆ ಅಡಿ ₹ 7.50 ಕೋಟಿ ಮಂಜೂರಾಗಿದೆ. ಸೋನಿಯಾ ಪ್ಯಾಕೇಜ್ ಅಡಿ ಅಪೂರ್ಣಗೊಂಡಿರುವ ಕಾಮಗಾರಿಗಳಿಗೆ ₹ 10 ಕೋಟಿ ಅನು ದಾನ ಕೋರಿ ಪ್ರಸ್ತಾವ ಸಲ್ಲಿಸಲಾದ್ದು, ಹೈ.ಕ. ಮಂಡಳಿಯಿಂದ ರಾಜ್ಯಪಾಲರ ಅನುಮೋದನೆ ಕಳಿಸಿಕೊಟ್ಟಿದೆ ಎಂದರು.

ಹಡಗಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಸರ್ಕಾರ ಏಕಕಾಲಕ್ಕೆ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಿದೆ. 2017ರ ಜೂನ್‌ ವೇಳೆಗೆ ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಪೂರ್ಣ ಗೊಳಿಸಿ ಹಸ್ತಾಂತರಿಸುವಂತೆ ಸೂಚಿಸಲಾ ಗಿದೆ. ಮರಳು ಅಕ್ರಮ ಸಾಗಣೆ ತಡೆಗಟ್ಟಿ, ಜನಸಾಮಾನ್ಯರಿಗೆ ಸುಲಭವಾಗಿ ಮರಳು ವಿತರಣೆ ಮಾಡುವಂತೆ ಟಾಸ್ಕ್‌ ಪೋರ್ಸ್‌ ಸಮಿತಿಗೆ ತಿಳಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷೆ ಆರ್.ಪವಿತ್ರಾ, ಉಪಾಧ್ಯಕ್ಷ ಕೆ.ಎಸ್.ರಹಿಮಾನ್, ಮುಖಂಡರಾದ ಎಂ.ಪರಮೇಶ್ವರಪ್ಪ, ವಾರದ ಗೌಸ್‌ಮೊಹಿದ್ದೀನ್, ಬಿ.ಹನು ಮಂತಪ್ಪ, ಚಿ.ಚಾಂದಸಾಹೇಬ್, ಅಟ ವಾಳಗಿ ಕೊಟ್ರೇಶ, ಪುರಸಭೆ ಸದಸ್ಯರಾದ ಜೆ.ದುರುಗಮ್ಮ, ಎಸ್.ತಿಮ್ಮಪ್ಪ, ಹನು ಮಂತಪ್ಪ, ಖಾಜಾಹುಸೇನ್, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಎಇಇ ಮುರಳೀಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT