ADVERTISEMENT

ಎಂಜಿನಿಯರಿಂಗ್‌ ಕಾಲೇಜು ಬಂದ್‌

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 6:15 IST
Last Updated 2 ಸೆಪ್ಟೆಂಬರ್ 2017, 6:15 IST

ಬಳ್ಳಾರಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆ ಮತ್ತು ಫಲಿತಾಂಶದ ಅವ್ಯವಸ್ಥೆಯನ್ನು ಸರಿಪಡಿ ಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಬಿಐಟಿಎಂ ಮತ್ತು ರಾವ್‌ಬಹದೂರ್‌ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಎಐಡಿಎಸ್‌ಓ ಸಂಘಟನೆಯ ನೇತೃತ್ವದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಬಂದ್‌ ಆಚರಿಸಿದರು.

‘ಅವೈಜ್ಞಾನಿಕವಾಗಿ ಪರೀಕ್ಷೆಗಳ ಫಲಿತಾಂಶಗಳನ್ನು ಹಲವು ತಿಂಗಳ ಬಳಿಕ ಪ್ರಕಟಿಸುವುದು ಹಾಗೂ ಫಲಿತಾಂಶ ವನ್ನು ತಡೆಹಿಡಿಯುವುದರಿಂದ ವಿದ್ಯಾ ರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಡಾ.ಪ್ರಮೋದ್ ಆಗ್ರಹಿಸಿದರು.

‘ವಿಶ್ವವಿದ್ಯಾಲಯದಲ್ಲಿ ಸುಮಾರು 40 ಸಾವಿರ ವಿದ್ಯಾರ್ಥಿಗಳಿದ್ದು, ವಿಶ್ವ ವಿದ್ಯಾಲಯದ ಹೊಸ ಪದ್ಧತಿಗಳಿಂದ ಭವಿಷ್ಯ ಅತಂತ್ರಗೊಳ್ಳುವ ಸನ್ನಿವೇಶ ಎದುರಾಗಿದೆ. ಸಿಬಿಸಿಎಸ್‌ ಪದ್ಧತಿಯಲ್ಲಿ ವಿದ್ಯಾರ್ಥಿ ಅನುತ್ತೀರ್ಣರಾದರೆ ಅವರ ಅಂಕಗಳನ್ನು ಪ್ರಕಟಿಸುವುದಿಲ್ಲ.

ADVERTISEMENT

2010ರ ಪಠ್ಯಕ್ರಮವನ್ನು ಓದುತ್ತಿರುವವರು ಯಾವುದಾದರೂ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾದರೆ, ಹೊಸ ಪದ್ಧತಿಯ ಪಠ್ಯಕ್ರಮವನ್ನು ಅಧ್ಯಯನ ಮಾಡ ಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ’ ಎಂದು ಸಮಿತಿಯ ಸಂಚಾಲಕ ವಿ.ಎನ್‌ಜಗದೀಶ್‌ ಆರೋಪಿಸಿದರು.

‘ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ನಡೆಸಬೇಕು. ಅನು ತ್ತೀರ್ಣರಾದವರ ಅಂಕಗಳನ್ನು ಪ್ರಕಟಿಸಬೇಕು’ ಎಂದು ಆಗ್ರಹಿಸಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ್, ವಿದ್ಯಾರ್ಥಿಗಳಾದ  ಯೋಗೇಶ್, ಪ್ರದೀಪ್, ಡಿ.ಮನೋಜ್, ಮಹೇಶ್, ಶಿವಲಿಂಗಪ್ಪ , ರೇಖಾ, ಗೀತಾಂಜಲಿ, ವಿದ್ಯಾಶ್ರೀ, ಮಂಜುನಾಥ, ಲೆನಿನ್ ಇದ್ದರು.ಬಂದ್ ಪರಿಣಾಮವಾಗಿ ಎರಡೂ ಕಾಲೇಜುಗಳು ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು.

ಬಿಕೋ ಎಂದ ಕ್ಯಾಂಪಸ್‌
ಹೊಸಪೇಟೆ:  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿ.ಟಿ.ಯು.) ಫಲಿತಾಂಶ ವಿಳಂಬದಿಂದ ವಿದ್ಯಾರ್ಥಿ ಗಳಿಗೆ ಆಗಿರುವ ಅನ್ಯಾಯ ಸರಿಪಡಿಸು ವಂತೆ ಆಗ್ರಹಿಸಿ ಅಖಿಲ ಭಾರತ ಪ್ರಜಾ ಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯು (ಎ.ಐ.ಡಿ.ಎಸ್‌.ಒ.) ಶುಕ್ರವಾರ ನಗರ ದಲ್ಲಿ ಎಂಜಿನಿಯರಿಂಗ್‌ ಕಾಲೇಜ್‌ ಬಂದ್‌ ನಡೆಸಿತು.

ವಿ.ಟಿ.ಯು ವಿದ್ಯಾರ್ಥಿಗಳ ಹೋರಾಟ ಸಮಿತಿಯು ಬಂದ್‌ಗೆ ಬೆಂಬಲ ಸೂಚಿಸಿತ್ತು. ವಿದ್ಯಾರ್ಥಿಗಳು ಬಂದ್‌ನಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ನಗರದ ಪ್ರೌಢದೇವರಾಯ ತಾಂತ್ರಿಕ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶುಕ್ರವಾರ ತರಗತಿಗಳು ನಡೆಯಲಿಲ್ಲ. ವಿದ್ಯಾರ್ಥಿಗಳಿಲ್ಲದೇ ಇಡೀ ಕಾಲೇಜಿನ ಕ್ಯಾಂಪಸ್‌ ಬಿಕೋ ಎನ್ನುತ್ತಿತ್ತು. 

‘ಫಲಿತಾಂಶ ವಿಳಂಬದಿಂದ ಸುಮಾರು 15 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಆಗಿರುವ ಅನ್ಯಾಯ ಸರಿಪಡಿ ಸುವಂತೆ ಹಲವು ಸಲ ಮನವಿ ಸಲ್ಲಿಸಿ ದ್ದರೂ ಪ್ರಯೋಜನವಾಗಿರಲಿಲ್ಲ. ಅನಿ ವಾರ್ಯವಾಗಿ ಕಾಲೇಜು ಬಂದ್‌ಗೆ ಕರೆ ಕೊಡಲಾಯಿತು’ ಎಂದು ಸಂಘಟನೆಯ ಸುರೇಶ್‌ ತಿಳಿಸಿದರು. ‘ವಿ.ಟಿ.ಯು. ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂಬ ರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.