ADVERTISEMENT

ಒಗ್ಗಟ್ಟಿನ ಹೋರಾಟದಿಂದ ಏಕೀಕರಣ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 5:26 IST
Last Updated 6 ನವೆಂಬರ್ 2017, 5:26 IST

ಬಳ್ಳಾರಿ: ‘ಮದ್ರಾಸ್‌, ಹೈದರಾಬಾದ್ ಹಾಗೂ ಮುಂಬೈ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ನಾಡು ಒಗ್ಗಟ್ಟಿನ ಹೋರಾಟದಿಂದ ಏಕೀಕರ ಣಗೊಂಡಿತು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಲ್ಲಂ ಪ್ರಶಾಂತ್ ಹೇಳಿದರು.

ಕರ್ನಾಟಕ ರಾಜ್ಯೋತ್ಸವ ಸಮಿತಿ ಹಾಗೂ ಆಟೋ ಚಾಲಕರ ಸಂಘ ಪದಾಧಿಕಾರಿಗಳು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯೋತ್ಸವ ದಲ್ಲಿ ಭುವನೇಶ್ವರಿ ಹಾಗೂ ನಟ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ವೈವಿಧ್ಯ ಸಾಂಸ್ಕೃತಿಕ ಪರಂಪರೆಯುಳ್ಳ ರಾಜ್ಯದ ಅನನ್ಯತೆ ಸಾರುವುದು ಎಲ್ಲ ಕನ್ನಡಿಗರ ಆದ್ಯ ಕರ್ತವ್ಯ. ಏಕೀಕರಣಕ್ಕಾಗಿ ಹೋರಾಡಿ ಜೀವತೆತ್ತ ಮಹನೀಯರನ್ನು ಸದಾ ಸ್ಮರಿಸಬೇಕು’ ಎಂದರು.

ADVERTISEMENT

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ್, ಮುಖಂಡರಾದ ಅದ್ದಿಗೇರಿ ರಮಣ ಸ್ವಾಮಿ, ಪಿ.ಗಾದೆಪ್ಪ, ಮೇಕಲ ಈಶ್ವರರೆಡ್ಡಿ, ವಿರೂಪಾಕ್ಷಯ್ಯ ಸ್ವಾಮಿ, ಸಿಂಗಾಪೂರ್ ನಾಗರಾಜ್, ಕೃಷ್ಣ, ಬಿ.ಎಂ.ಪಾಟೀಲ್, ಬಸವರಾಜ್, ಜೆ.ವಿ.ಮಂಜುನಾಥ, ರವಿಕುಮಾರ್, ಜಯರಾಮ್, ಸಿದ್ದ, ಗಾದಿಲಿಂಗ, ಮೆಹ ಬೂಬ್, ಸಂತೋಷ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.