ADVERTISEMENT

ಕುಡಿಯುವ ನೀರಿಗೆ ಪ್ರಥಮ ಆದ್ಯತೆ

ನಗರೋತ್ಥಾನದಲ್ಲಿ ಹಗರಿಬೊಮ್ಮನಹಳ್ಳಿ ಪುರಸಭೆಗೆ ₹10 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:57 IST
Last Updated 19 ಜನವರಿ 2017, 6:57 IST
ಕುಡಿಯುವ ನೀರಿಗೆ ಪ್ರಥಮ ಆದ್ಯತೆ
ಕುಡಿಯುವ ನೀರಿಗೆ ಪ್ರಥಮ ಆದ್ಯತೆ   

ಹಗರಿಬೊಮ್ಮನಹಳ್ಳಿ: ಸರ್ಕಾರದಿಂದ ನಗರೋತ್ಥಾನ ಯೋಜನೆ ಅಡಿಯಲ್ಲಿ ಪಟ್ಟಣದ ಪುರಸಭೆಗೆ ₹10ಕೋಟಿ ಅನುದಾನ ಬಿಡುಗಡೆಯಾಗಲಿದೆ. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಸ್‌.ಭೀಮಾನಾಯ್ಕ ತಿಳಿಸಿದರು. ಪುರಸಭೆ ಕಚೇರಿ ಆವರಣದಲ್ಲಿ ಬುಧವಾರ ಹಲವು ಅಭಿವೃದ್ಧಿ ಕಾಮ ಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕಿನ 80 ಗ್ರಾಮಗಳಿಗೆ ತುಂಗ ಭದ್ರಾ ನದಿಯಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರ ದಲ್ಲೆ ಪೂರ್ಣಗೊಳ್ಳಲಿದೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು ಎಂದರು.

ತಂಬ್ರಹಳ್ಳಿ ಆದರ್ಶ ಗ್ರಾಮ ಯೋಜ ನೆಯಲ್ಲಿ ಇದುವರೆಗೂ ಬಿಡಿಗಾಸು ಬಿಡು ಗಡೆಯಾಗಿಲ್ಲ, ಗ್ರಾಮ ಅಭಿವೃದ್ಧಿಗೊಂಡು ಸಿಂಗಾಪುರ ಆಗುತ್ತದೆ ಎಂದು ಕನಸು ಕಂಡಿದ್ದವರಿಗೆ ನಿರಾಸೆ ಆಗಿದೆ ಎಂದು ಲೇವಡಿ ಮಾಡಿದರು.

ಈ ಭಾಗದಲ್ಲಿ ₹ 40 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ₹ 1.63 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಪುರಸಭೆ ಅಧ್ಯಕ್ಷ ಜೋಗಿ ಹನು ಮಂತಪ್ಪ ಸ್ವಾಗತಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಯು. ಬಾಬುವಲಿ, ಸದಸ್ಯರಾದ ಟಿ.ರಾಘವೇಂದ್ರ, ಕನಕಪ್ಪ, ಹಂಚಿನ ಮನಿ ಹನುಮಂತಪ್ಪ, ಸರಸ್ವತಿ ಹನು ಮಂತಪ್ಪ, ಸಂಜೋತಾ ನವೀನ್‌ ಕುಮಾರ್‌, ಕಲ್ಪನಾ ಕೊಟ್ರೇಶ್‌, ಕಾಡಾ ನಿರ್ದೇಶಕ ಹೆಗ್ಡಾಳ್ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್‌.ಎ. ಕೊಟ್ರೇಶ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್‌, ನೆಲ್ಲು ಇಸ್ಮಾ ಯಿಲ್‌, ತಹಶೀಲ್ದಾರ್ ಆನಂದಪ್ಪ ನಾಯಕ, ತಾಲ್ಲೂಕು ಪಂಚಾಯಿತಿ ಇಓ ಬಿ.ಮಲ್ಲಾನಾಯ್ಕ, ಪುರಸಭೆ ಮುಖ್ಯಾಧಿ ಕಾರಿ ಪ್ರಕಾಶ್ ಚನ್ನಪ್ಪನವರ, ಟಿಎಚ್ಓ ಡಾ.ಸುಲೋಚನಾ ಇದ್ದರು.

ಅಸಮಾಧಾನ, ಅವ್ಯವಸ್ಥೆ:  ಪುರಸಭೆ ಯಿಂದ ನಡೆದ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಚಾಲನೆ ಸಮಾರಂಭದಲ್ಲಿ  ಉಪಾಧ್ಯಕ್ಷೆ ಬಲ್ಲಾಹುಣ್ಸಿ ಹುಲಿಗೆಮ್ಮ ಸಹಿತ 14 ಜನ ಸದಸ್ಯರು ಗೈರು ಹಾಜ ರಾಗುವ ಮೂಲಕ ಒಳಗೊಳಗೆ ಹೊಗೆ ಆಡುತ್ತಿದ್ದ ಅಸಮಧಾನವನ್ನು ಬುಧ ವಾರ ಹೊರಹಾಕಿದರು. ಪುರಸಭೆ ಆಡ ಳಿತ ಪಕ್ಷದ ಅಲ್ಲಾಭಕ್ಷ, ಜಾಹೇದಾ ರೆಹ ಮಾನ್‌, ಜರೀನಾಬಿ ಸೇರಿ ಬಿಜೆಪಿ ಎಲ್ಲ ಸದಸ್ಯರು ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ಪುರಸಭೆಯಲ್ಲಿ ಸದಸ್ಯರ ಮಧ್ಯೆ ಹೊಂದಾಣಿಕೆ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾದಂತಿತ್ತು.’

ವೆಂಕಟೇಶ್ವರ ಜಾತ್ರೆ ಕುರಿತು ಚರ್ಚೆ: ಇದೇ ವೇದಿಕೆಯಲ್ಲಿ ಫೆ. 1ರಂದು ಪಟ್ಟಣದಲ್ಲಿ ಜರುಗುವ ವೆಂಕಟೇಶ್ವರ ಜಾತ್ರೋತ್ಸವ ಕುರಿತ ಪೂರ್ವಭಾವಿ ಯಾಗಿ ಚರ್ಚಿಸಲಾಯಿತು. ಪಟ್ಟಣದ ಎಲ್ಲ 23 ವಾರ್ಡ್‌ಗಳಿಗೆ ಸಮಸ್ಯೆ ಆಗ ದಂತೆ ಟ್ಯಾಂಕರ್‌ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಶಾಕಸ ಹೇಳಿದರು.

ಎಲ್ಲ ವಾರ್ಡ್‌ಗಲ್ಲಿ ಫಾಗಿಂಗ್‌, ಬ್ಲೀಚಿಂಗ್ ಪೌಡರ್ ಸಿಂಪ ರಣೆ ಮಾಡಿ  ಸ್ವಚ್ಛತೆಗೆ ಗಮನ ಹರಿಸ ಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿ ಸಿದರು. ರಥ ಸಾಗುವ ಮಾರ್ಗದಲ್ಲಿ ವಿದ್ಯುತ್‌ ಸಂಪರ್ಕವನ್ನು ಭೂಮಿಯ ಒಳಗೆ ಕಲ್ಪಿಸುವ ಕುರಿತಂತೆ ಚರ್ಚಿಸಲಾ ಯಿತು. ಸಾಂಕ್ರಾಮಿಕ ರೋಗ ಹರಡ ದಂತೆ ಅಗತ್ಯ ಕ್ರಮ ವಹಿಸುವಂತೆ ಆರೋಗ್ಯಾಧಿಕಾರಿಗೆ ಸೂಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT