ADVERTISEMENT

ಗೌರವಧನ ಹೆಚ್ಚಳ: ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 11:08 IST
Last Updated 16 ಏಪ್ರಿಲ್ 2017, 11:08 IST

ಕಂಪ್ಲಿ:  ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡಿದ ಕಾರಣ ಸಿಪಿಎಂ ನೇತೃತ್ವದಲ್ಲಿ ಅಂಗನವಾಡಿ ಸಿಬ್ಬಂದಿ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ಸಂಭ್ರಮಿಸಿದರು.

ಬಿ.ಕೆ.ಉಮಾದೇವಿ ಮಾತನಾಡಿ, ನಿರಂತರ ಹೋರಾಟದ ಫಲವಾಗಿ ಗೌರವಧನ ಹೆಚ್ಚಳವಾಗಲು ಸಾಧ್ಯವಾ ಯಿತು ಎಂದರು.ಸಿಐಟಿಯು ಕಂಪ್ಲಿ ನಗರ ಘಟಕ ಪ್ರಧಾನ ಕಾರ್ಯದರ್ಶಿ ಬಂಡಿ ಬಸವ ರಾಜ ಮಾತನಾಡಿ, ಅಂಗನವಾಡಿ ನೌಕರ ರಿಗೆ ಕನಿಷ್ಠ ₹ 15 ಸಾವಿರ ಮಾಸಿಕ ವೇತನ ಜೊತೆಗೆ ನೌಕರಿಯನ್ನು ಕಾಯಂ ಗೊಳಿಸುವಂತೆ ಆಗ್ರಹಿಸಿದರು. ಅಂಗನ ವಾಡಿ ಕಾರ್ಯಕರ್ತೆಯರಾದ ಎಚ್. ಮಂಜುಳಾ, ಗುರುಪಾದಮ್ಮ, ಸಿ.ರಾಧಾ ಬಾಯಿ, ಗಿರಿಜಮ್ಮ, ಹುಲಿಗೆಮ್ಮ, ತಿಪ್ಪಮ್ಮ, ಶಂಕ್ರಮ್ಮ, ಸಿಐಟಿಯು ಅಧ್ಯಕ್ಷ ಡಿ.ಮುನಿಸ್ವಾಮಿ, ಉಪಾಧ್ಯಕ್ಷ ಮಾನ್ವಿ ಮಹೇಶ್, ಸಹ ಕಾರ್ಯದರ್ಶಿ ಎಸ್.ಕೃಷ್ಣ ಸ್ವಾಮಿ, ರಾಜಭಕ್ಷಿ, ಕನಕಪ್ಪ, ಶಿವಕುಮಾರ ಗೌಡ, ನಾಗರಾಜ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT