ADVERTISEMENT

ಜೈನ ದೀಕ್ಷೆ: ವೈಭವದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 6:38 IST
Last Updated 23 ಏಪ್ರಿಲ್ 2017, 6:38 IST

ಕಂಪ್ಲಿ:  ಜೈನ ದೀಕ್ಷೆ ಪಡೆಯುವ ಮುನ್ನ ಕಲ್ಪನಾ ಸಿಂಘ್ವಿ ಅವರ ಮೆರವಣಿಗೆ  ಪಟ್ಟಣದಲ್ಲಿ ವೈಭವದಿಂದ ನಡೆಯಿತು.ಜೈನ ಮಂದಿರದಿಂದ ಆರಂಭಗೊಂಡ ಮೆರವಣಿಗೆ ರಾಜಕುಮಾರ್ ಮುಖ್ಯರಸ್ತೆ, ಅಂಬೇಡ್ಕರ್‌ ವೃತ್ತದ ಮೂಲಕ ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲಾ ಆವರಣ ತಲುಪಿತು.

ಮೆರವಣಿಗೆಯಲ್ಲಿ ಆನೆ, ಬೆಳ್ಳಿರಥಗಳು, ಕುದುರೆ, ರಾಜಸ್ಥಾನಿ ವಾದ್ಯ, ತಾಷಾರಾಂಡೋಲ್, ಬುಲ್‌ಬುಲ್ ತಾರಾ, ಭಜನಾ ವೃಂದ ಪಾಲ್ಗೊಂಡಿದ್ದವು. ಜೈನ ಗುರು ಆಚಾರ್ಯ ಭಗವಂತ ಅಜಿತ್ ಶೇಖರ್ ಸೂರೀಶ್ವರ್‌ಜೀ  ಮೆರವಣಿಗೆ ನೇತೃತ್ವ ವಹಿಸಿದ್ದರು. ದೀಕ್ಷೆ ಸ್ವೀಕರಿಸಲಿರುವ ಕಲ್ಪನಾ ಜತೆಗೆ ಮುಂದಿನ ದಿನಗಳಲ್ಲಿ ಜೈನ ದೀಕ್ಷೆ ತೆಗೆದುಕೊಳ್ಳುವ ದಾವಣಗೆರೆಯ ಪೂನಂ, ರಕ್ಷಾ ಕುಂದನ್ ಮತ್ತು ನೀಶಾ ಅವರ ಮೆರವಣಿಗೆಯೂ ಬೆಳ್ಳಿ ರಥದಲ್ಲಿ ನಡೆಯಿತು.

ಸಂಸದ ಬಿ. ಶ್ರೀರಾಮುಲು ಮಾತನಾಡಿ,  ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಮುನಿ ನಾಡಿಗೆ ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಶಾಸಕ ಟಿ.ಎಚ್. ಸುರೇಶ್‌ಬಾಬು, ಸಿಂಘ್ವಿ ಕುಟುಂಬದ ಪ್ರಕಾಶಿಬಾಯಿ ಜಯರಾಜ್, ಕಮಲೇಶ್, ರಾಮಲಾಲ್, ಶಾಂತಿಲಾಲ್, ಮನೋಜ್ ಕುಮಾರ್, ಫತೆಕುಮಾರ್, ಮುಖಂಡರಾದ ಅಸಲ್‌ಚಂದ್ ರಾಂಕಾ, ಶಾಂತಿಲಾಲ್ ಬಾಲಾರ್, ಕಾಂತಿಲಾಲ್ ಬಾಗ್ರೇಚಾ, ರಾಜೇಶ್ ಜೈನ್, ಮೋಹನ್‌ಲಾಲ್ ರಾಂಕಾ ಸೇರಿದಂತೆ ರಾಜಸ್ಥಾನದಿಂದ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.