ADVERTISEMENT

ತೋಟಗಾರಿಕೆ ಬೆಳೆಗಳಿಗೂ ಕುತ್ತು!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 6:28 IST
Last Updated 19 ಏಪ್ರಿಲ್ 2017, 6:28 IST

ಕುರುಗೋಡು: ಮಳೆಯಾಗದೆ ತೀವ್ರ ಬರಗಾಲದ ಛಾಯೆ ಆವರಿಸಿರುವ ಬೆನ್ನಲ್ಲೆ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ ಉಂಟಾಗಿ ತೋಟಗಾರಿಕೆ ಬೆಳೆ ಗಾರರು ಆತಂಕಕ್ಕೆ ಒಳಗಾಗಿದ್ದಾರೆ.ಮಳೆಯ ಕೊರತೆ ಮತ್ತು ಕಾಲುವೆ ನೀರಿನ ಅಭಾವದಿಂದ ತೊಂದರೆ ಎದುರಿಸುತ್ತಿದ್ದ ರೈತರು ಸಂಪ್ರದಾಯಿಕ ಕೃಷಿಗೆ ಶರಣುಹೊಡೆದು ತೋಟಗಾರಿಕೆ ಬೆಳೆಗಳಾದ ಅಂಜೂರ, ದಾಳಿಂಬೆ, ಪಪ್ಪಾಯ ಬೆಳೆಗಳತ್ತ ಮುಖಮಾಡಿದ್ದರು. ಕೆಲವು ವರ್ಷಗಳಿಂದ ಲಾಭದ ಸಿಹಿ ಕಂಡಿದ್ದ ತೋಟಗಾರಿಕೆ ಬೆಳೆಗಾರರಿಗೆ ಅಂತರ್ ಜಲ ಕುಸಿತದಿಂದ ಬೆಳೆ ಸಂರಕ್ಷಣೆ ಮಾಡಿಕೊಳ್ಳುವುದು ಹೇಗೆ? ಎನ್ನುವ ಪ್ರಶ್ನೆ ಕಾಡತೊಡಗಿದೆ.

150ರಿಂದ 200 ಅಡಿ ಕೊರೆಸಿದರೆ ನೀರು ದೊರೆಯುತ್ತಿತ್ತು. ಕಳೆದ ವರ್ಷ 300 ಅಡಿವರೆಗೆ ಕೊರೆಸಿದರೂ ನೀರು ದೊರೆಯಲಿಲ್ಲ. ಈ ವರ್ಷ ಪ್ರಾರಂಭ ದಿಂದಲೂ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ 800 ಅಡಿವರೆಗೆ ಕೊರೆ ದರೂ 2 ಇಂಚು ನೀರು ಕೊರೆಯುತ್ತಿಲ್ಲ. ಭೂಮಿಯಿಂದ ನೀರು ಬಳಸಿಕೊಳ್ಳುವ ರೈತರು ಜಲ ಮರುಪೂರ್ಣದ ಬಗ್ಗೆ ಜಾಗೃತಿ ವಹಿಸದೇ ಇರುವುದು ಈ ಪರಿ ಸ್ಥಿತಿಗೆ ಕಾರಣ ಎನ್ನುತ್ತಾರೆ ಅಂಜೂರ ಬೆಳಗಾರ ಶ್ರೀನಿವಾಸ ಕ್ಯಾಂಪಿನ ರಮೇಶ್ ಬಾಬು. ಅಂಜೂರ ಬೆಳೆಗೆ ಪ್ರತಿನಿತ್ಯ ನೀರು ಪೂರೈಸಬೇಕು. ಇಲ್ಲದಿದ್ದರೆ ಗಿಡ ಬೆಳವಣಿಗೆಯಾಗುವುದಿಲ್ಲ. ಅದರಲ್ಲಿ ಬಿಡುವ ಹಣ್ಣು ಗುಣಮಟ್ಟ ಕಡಿಮೆ ಆಗುತ್ತದೆ. ಅಂತರ್ಜಲ ಕುಸಿತದಿದಿಂದ ಬೋರ್ ವೆಲ್ಲಗಳಲ್ಲಿ ನೀರಿನ ಮಟ್ಟ ಕಡಿಮೆ ಆಗಿದೆ. ಬೆಳೆಗೆ ದಿನಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ. 
ಬಿಸಿಲಿನ ತಾಪ ಹೆಚ್ಚಾಗಿರುವುದ ರಿಂದ ಪೂರೈಸುತ್ತಿರುವ ನೀರು ಸಾಲದೆ ಗಿಡಗಳು ಒಣಗತೊಡಗಿವೆ.

ಇದರಿಂದ ಹಣ್ಣಿನ ಗುಣಮಟ್ಟ ಮತ್ತು ಇಳುವರಿಯ ಮೇಲೆ ದುಷ್ಟಪರಿ ಣಾಮ ಬೀರಿದೆ ಎಂದು ಅವರು ಎದುರಿ ಸುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.ಶ್ರೀನಿವಾಸ ಕ್ಯಾಂಪ್, ಲಕ್ಷ್ಮೀಪುರ ಮತ್ತು ಕಲ್ಲುಕಂಭ ಗ್ರಾಮಗಳ ಸುತ್ತಲಿನ ಗುಡ್ಡಗಳಲ್ಲಿ ಗಣಿಗಾರಿಕೆ ನಡೆಯುತ್ತಿರು ವುದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿಯಲು ಕಾರಣವಾಗಿದೆ. ಮಳೆಗಾಲದಲ್ಲಿ ಗುಡ್ಡದ ಮೇಲೆ ಬೀಳುವ ನೀರು ಸಂಗ್ರಹವಾಗದೆ ಹರಿದು ಹೋಗಿ ಪೋಲಾಗುತ್ತಿದೆ. ಮಳೆ ನೀರು ಸಂಗ್ರಹಿ ಸಲು  ಬೆಟ್ಟದ ಸುತ್ತಮುತ್ತ ಚೆಕ್ ಡ್ಯಾಮ್ ನಿರ್ಮಿಸುವ ಅಗತ್ಯವಿದೆ. ಪ್ರತಿಯೊಬ್ಬ ರೈತರೂ ತಮ್ಮ ಹೊಲಗಲ್ಲಿ ಕೆರೆ ನಿರ್ಮಿಸಿಕೊಂಡು ನೀರು ಸಂಗ್ರಹಿಸಬೇಕು. ಬೇಸಿಗೆಯಲ್ಲಿ ಕೊಳಬೆಬಾವಿಗಳಲ್ಲಿ ಅಂತ ರ್ಜಲ ಕಡಿಮೆ ಆಗದಂತೆ ನೋಡಿಕೊಳ್ಳ ಬಹುದು ಎನ್ನುತ್ತಾ ರಮೇಶ್‌ಬಾಬು.           

ADVERTISEMENT

ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆ ಆಗಿರುವುದು ಒಂದು ಸಮಸ್ಯೆಯಾದರೆ ಲಭ್ಯವಿರುವ ನೀರು ಬಳಕೆಮಾಡಿ ಕೊಂಡು ಬೆಳೆ ಉಳಿಸಿಕೊಳ್ಳೋಣ ಎಂದು ಕೊಂಡರೆ ವಿದ್ಯುತ್ ಸಮಸ್ಯೆ ಮತ್ತೊಂದು ತಲೆನೋವಾಗಿ ಕಾಡತೊಡಗಿದೆ. ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿರುವ ಪರಿ ಣಾಮ ಅಂಜೂರ ಹಣ್ಣಿತ ಬೆಲೆ ಕುಸಿತ ಕಂಡಿದೆ.  1ಕೆ.ಜಿ. ₹  25 ರಿಂದ ₹  30 ದೊರೆಯುತ್ತಿತ್ತು. ಪ್ರಸ್ತುತ ₹  20ಕ್ಕೆ ಕುಸಿತ ಕಂಡಿದೆ. ಬೆಲೆ ಕುಸಿತ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ಎಂ. ಭೀಮೇಶ್.

ಕಾಲುವೆ ನೀರಿನ ಸಮಸ್ಯೆ ಮತ್ತು ಮಳೆಯ ಅಭಾವದಿಂದ ಕೃಷಿಯಿಂದ ವಿಮುಖರಾಗಿ ಕಡಿಮೆ ನೀರಿನಲ್ಲಿ ಬೆಳೆ ಯಬಹುದಾದ ಅಂಜೂರ, ದಾಳಿಂಬೆ, ಪಪ್ಪಾಯದಂತೆ ತೋಟಗಾರಿಕೆ ಬೆಳೆ ಯಲು ಮುಂದಾಗಿದ್ದ ರೈತರಿಗೆ ಈ ವರ್ಷ ಅಂತರ್ ಜಲದ ಸಮಸ್ಯೆ ಉಂಟಾಗಿ ಬೆಂಕಿಯಿಂದ ಬಾಣಲಿಗೆ ಬಿದ್ದಂತಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.