ADVERTISEMENT

‘ದೇಶದ್ರೋಹಿಗಳ ವಿರುದ್ಧ ಜಾಗೃತರಾಗಿ’

​ಪ್ರಜಾವಾಣಿ ವಾರ್ತೆ
Published 8 ಮೇ 2017, 6:47 IST
Last Updated 8 ಮೇ 2017, 6:47 IST

ಹಗರಿಬೊಮ್ಮನಹಳ್ಳಿ: ‘ಭಯೋತ್ಪಾದನೆ ಮತ್ತು ಲವ್ ಜಿಹಾದ್‌ ಮೂಲಕ ದೇಶವನ್ನು ವಿಚ್ಛಿದ್ರಗೊಳಿಸುವ ಸಂಘಟನೆಗಳ ವಿರುದ್ಧ ಹಿಂದೂ ಧರ್ಮವನ್ನು ಜಾಗೃತಗೊಳಿಸಿ, ಸಂಘಟಿಸುವ ಹೊಣೆಯನ್ನು ಆರ್‌ಎಸ್ಎಸ್‌ ಸಮರ್ಥವಾಗಿ ನಿರ್ವಹಿಸುತ್ತಿದೆ’ ಎಂದು ಆರ್‌ಎಸ್‌ ಎಸ್‌ನ ದಕ್ಷಿಣಮಧ್ಯ ಕ್ಷೇತ್ರ ಸಂಯೋಜಕ ಕೆ.ರಘುನಂದನ ಹೇಳಿದರು.

ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಆರ್‌ಎಸ್‌ಎಸ್ ಸಂಘಶಿಕ್ಷಾವರ್ಗದ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

‘ಸಂಖ್ಯಾಶಾಸ್ತ್ರ, ಖನಿಜ ಶಾಸ್ತ್ರ, ಲೋಹಶಾಸ್ತ್ರ, ವಿಮಾನಶಾಸ್ತ್ರದ ಜತೆಗೆ ಉತ್ತಮ ಕುಟುಂಬ ಪದ್ಧತಿಯನ್ನು ದೇಶ ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ. ದೇಶವನ್ನು ವಿಶ್ವಗುರು ಸ್ಥಾನಕ್ಕೇರಿಸುವ ಗುರಿ ಹೊಂದಲಾಗಿದೆ’ ಎಂದರು.

ADVERTISEMENT

ವೀರಶೈವ ವಿದ್ಯಾವರ್ಧಕ  ಸಂಘದ ಉಪಾಧ್ಯಕ್ಷ ವೈ.ಸತೀಶ್ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ದೇಶದ ಏಕತೆ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ವರ್ಗಾಧಿಕಾರಿ ಗೋವಿಂದಪ್ಪ ಗೌಡಪ್ಪಗೋಳ ವರದಿ ವಾಚನ ಮಾಡಿದರು.

ಸಂಘದ ಉತ್ತರ ಪ್ರಾಂತ್ಯ ಸಂಚಾಲಕ ಖಗೇಷನ್ ಪಟ್ಟಣಶೆಟ್ಟಿ, ಸಂಘದ ಕಾರ್ಯವಾಹ ಟಿ.ಪ್ರಸನ್ನಕುಮಾರ್, ಶಿವಾನಂದ ಆವಟಿ ಬಿ.ಬಸವನಗೌಡ ಇದ್ದರು. ಇದಕ್ಕೂ ಮುನ್ನ ಸಂಘ ಶಿಕ್ಷಾವರ್ಗದ 400ಕ್ಕೂ ಹೆಚ್ಚು ಶಿಬಿರಾರ್ಥಿಗಳಿಂದ ಶಾರೀರಿಕ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.