ADVERTISEMENT

ಧರ್ಮದಿಂದ ಸುಭಿಕ್ಷೆ: ಆನಂದ ಗುರೂಜಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 6:55 IST
Last Updated 20 ನವೆಂಬರ್ 2017, 6:55 IST
ಸಂಡೂರಿನ ಯಶವಂತವಿಹಾರ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಕುಬೇರಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು ಕುಬೇರಲಕ್ಷ್ಮಿಗೆ ಆರತಿ ಬೆಳಗಿದರು
ಸಂಡೂರಿನ ಯಶವಂತವಿಹಾರ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಕುಬೇರಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು ಕುಬೇರಲಕ್ಷ್ಮಿಗೆ ಆರತಿ ಬೆಳಗಿದರು   

ಸಂಡೂರು: ‘ದೇಶವು ಧರ್ಮದ ತಳಹದಿಯಲ್ಲಿ ನಿಂತರೆ ಮಾತ್ರ ಸುಭಿಕ್ಷವಾಗಿರಲು ಸಾಧ್ಯ’ ಎಂದು ಮಹರ್ಷಿ ಆನಂದ ಗುರೂಜಿ ಹೇಳಿದರು. ಪಟ್ಟಣದ ಯಶವಂತವಿಹಾರ ಕ್ಲಬ್ ಆವರಣದಲ್ಲಿ ಮಹರ್ಷಿ ಆನಂದ ಗುರೂಜಿ ಅಭಿಮಾನಿ ಬಳಗವು ಭಾನುವಾರ ಏರ್ಪಡಿಸಿದ್ದ ಕುಬೇರಲಕ್ಷ್ಮಿ ಅನುಷ್ಠಾನ ಹಾಗೂ ಗುರೂಜಿ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕುಬೇರ ಲಕ್ಷ್ಮಿ ಅನುಷ್ಠಾನದಿಂದ ಸಂಕಷ್ಟಗಳು ಇಲ್ಲದಂತಾಗುತ್ತದೆ. ಪಾಲಕರು ದೇವರ ಸಮಾನ. ಅವರನ್ನು ಆಶ್ರಮವಾಸಿಗಳನ್ನಾಗಿ ಮಾಡಬಾರದು. ಗೋವುಗಳನ್ನು ಕಸಾಯಿಖಾನೆಗೆ ದೂಡಬಾರದು. ಅವುಗಳನ್ನು ಪೂಜಿಸಿ ರಕ್ಷಿಸಬೇಕು. ವಿದ್ಯಾವಂತರು ದೇಶದ ಆಸ್ತಿಯಾಗಿದ್ದಾರೆ. ಹೀಗಾಗಿ ಎಲ್ಲೂರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು’ ಎಂದರು.

ಕುಬೇರ ಲಕ್ಷ್ಮಿ ಪೂಜೆ: ಕಾರ್ಯಕ್ರಮ\ದಲ್ಲಿ ಭಾಗವಹಿಸಿದ್ದ ಭಕ್ತರು ಆನಂದ ಗುರೂಜಿ ಅವರ ನೇತೃತ್ವದಲ್ಲಿ ಕುಬೇರ ಲಕ್ಷ್ಮಿ ಅನುಷ್ಠಾನವನ್ನು ಮಾಡಿದರು. ಇದೇ ವೇಳೆಯಲ್ಲಿ ಬಳಗದ ಅಧ್ಯಕ್ಷ ಎನ್. ಸೋಮಪ್ಪ ಕುರೆಕುಪ್ಪ ದಂಪತಿಗಳು ಗುರೂಜಿ ಅವರಿಗೆ ಬೆಳ್ಳಿ ಕಿರೀಟವನ್ನು ಸಮರ್ಪಿಸಿದರು.

ADVERTISEMENT

ಇದಕ್ಕೂ ಮೊದಲು ಇಲ್ಲಿನ ಉಡಚಲ ಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಗುರೂಜಿ ಅವರನ್ನು ಭಕ್ತರು ರಥದಲ್ಲಿ ಇಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಪ್ರಭುಸ್ವಾಮೀಜಿ, ಅಜಯ್ ಘೋರ್ಪಡೆ, ಸೂರ್ಯಪ್ರಭಾ ಘೋರ್ಪಡೆ, ಹನುಮಂತಪ್ಪ, ಎಂ. ಪುಷ್ಪಾ, ಎನ್. ನಾಗಲಿಂಗಪ್ಪ, ಯರಿಯಪ್ಪ, ಕೆ. ರಮೇಶ್, ಜಲಂದರ್, ಪ್ರಮಿಳಾಬಾಯಿ, ಚಂದ್ರಕಾಂತ್, ಪಂಪನಗೌಡ, ಕೆ. ಭೀಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.