ADVERTISEMENT

ಪಕ್ಷ ಬಿಡುವವರು ಅಧಿಕಾರವನ್ನೂ ಬಿಡಲಿ

ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಕಿಡಿ; ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 7:22 IST
Last Updated 20 ಮಾರ್ಚ್ 2017, 7:22 IST

ಹೊಸಪೇಟೆ: ‘ಯಾರೇ ಪಕ್ಷ ತೊರೆಯ ಬೇಕಾದರೆ ಅವರು ತಾವಿರುವ ಅಧಿಕಾರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗ ಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಹೇಳಿದರು.

ಶ್ರೀರಾಮ್ ಫೌಂಡೇಷನ್‌ನಿಂದ ಭಾನುವಾರ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾ ರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾ ರರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ಹೊಸಪೇಟೆ ನಗರಸಭೆ ಅಧ್ಯಕ್ಷ ಸೇರಿ 13 ಜನ ಸದಸ್ಯರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂ ರಪ್ಪ ಹಾಗೂ ಮುಖಂಡ ಆರ್‌. ಅಶೋಕ್‌ ಅವರನ್ನು ಭೇಟಿಯಾಗಿರುವ ವಿಚಾರ ಗಮನಕ್ಕೆ ಬಂದಿದೆ. ಆದರೆ, ಅನುದಾನ ತರುವ ಉದ್ದೇಶಕ್ಕಾಗಿ ಅವ ರನ್ನು ಭೇಟಿ ಮಾಡಿದ್ದೇವೆ ಎಂದು ತಿಳಿಸಿ ದ್ದಾರೆ ಎಂದು ಪ್ರತಿಕ್ರಿಯಿಸಿದರು.

ಒಂದುವೇಳೆ ಯಾರಾದರೂ ಪಕ್ಷ ತೊರೆಯಬೇಕು ಅಂದುಕೊಂಡರೆ ಅವರು ಮೊದಲು ತಮ್ಮ ಸ್ಥಾನಕ್ಕೆ ರಾಜೀ ನಾಮೆ ಕೊಡಬೇಕು. ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಚಿಹ್ನೆ ಅಡಿ ಗೆಲುವು ಸಾಧಿಸಿ, ಅಧಿಕಾರದ ರುಚಿ ಅನುಭವಿ ಸುತ್ತ ಬೇರೆ ಪಕ್ಷಕ್ಕೆ ಹೋಗುವುದು ಸರಿಯಲ್ಲ ಎಂದು ಹೇಳಿದರು.

ಈ ಪಕ್ಷ ಬಿಟ್ಟು ಹೋಗುವವರು ಇನ್ನೊಂದು ಪಕ್ಷದಲ್ಲಿ ಎಷ್ಟು ದಿನ ಉಳಿಯುತ್ತಾರೆ ಎನ್ನುವುದಕ್ಕೆ ಏನೂ ಗ್ಯಾರಂಟಿ ಇದೆ. ರತನ್‌ ಸಿಂಗ್‌ ಅವರು ಯಾಕೆ ಕಾಂಗ್ರೆಸ್‌ ತ್ಯಜಿಸಿದರೂ ಎನ್ನು ವುದು ತಿಳಿದಿಲ್ಲ. ಪಕ್ಷ ತೊರೆಯುವು ದಕ್ಕೂ ಮುನ್ನ ಅವರು ನನ್ನ ಜತೆ ಮಾತನಾಡಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲೆಯಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದೇನೆ ಎಂದರು.

ಯಶಸ್ಸಿನ ವ್ಯಾಖ್ಯಾನ:‘ಯಾರು ಸಂಕಷ್ಟದ ಸಮಯದಲ್ಲಿ ಅದನ್ನು ಮೆಟ್ಟಿ ನಿಂತು, ಕಠಿಣ ಪರಿಶ್ರಮದಿಂದ ಮೇಲೆದ್ದು ಬರು ತ್ತಾರೆ ಅವರೇ ನಿಜವಾದ ಯಶಸ್ವಿ ವ್ಯಕ್ತಿ ಗಳು’ ಎಂದು ಸಂತೋಷ ಲಾಡ್‌ ಹೇಳಿದರು.

ಶ್ರೀರಾಮ್‌ ಫೌಂಡೇಶನ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಾರಿ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲೇ ಮಕ್ಕಳು ಒಳ್ಳೆಯ ವಿಚಾರಗಳನ್ನು ಹೊಂದಬೇಕು. ಅಷ್ಟೇ ಅಲ್ಲ, ತಮ್ಮ ವಿಚಾರಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು.

ನಮ್ಮ ವಿಚಾರಗಳು ಸರಿಯಾಗಿದ್ದಲ್ಲಿ ನಮ್ಮ ಆತ್ಮ ಪರಿಶುದ್ಧ ವಾಗಿರುತ್ತದೆ. ಇದು ಭವಿಷ್ಯದಲ್ಲಿ ಯಶ ಸ್ಸಿಗೆ ಕಾರಣವಾಗುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು ಎಂದು ನೆನಪಿಸಿದರು.

ಅಂಕ ಗಳಿಸುವುದೊಂದೆ ನಮ್ಮ ಯಶಸ್ಸಿಗೆ ಮಾನದಂಡ ಆಗಿರಬಾರದು. ಆತ್ಮಸ್ಥೈರ್ಯ ಎಲ್ಲಕ್ಕಿಂತ ಮುಖ್ಯವಾ ದುದು. ಎಂತಹುದೇ ಪರಿಸ್ಥಿತಿಯಲ್ಲೂ ಮೇಲೆದ್ದು ಬರುವ ಎದೆಗಾರಿಕೆ ಬೆಳೆಸಿ ಕೊಳ್ಳಬೇಕು ಎಂದರು.

ಶ್ರೀರಾಮ್‌ ಫೌಂಡೇಶನ್‌ ಪ್ರಾದೇಶಿಕ ವ್ಯಾಪಾರ ವಿಭಾಗದ ಉಪಾಧ್ಯಕ್ಷ ಶ್ರೀಧರ್‌ ಮಠಂ ಮಾತನಾಡಿ, ಶೇ 60ಕ್ಕಿಂತ ಹೆಚ್ಚು ಅಂಕ ಪಡೆದ ಏಳರಿಂದ ಹತ್ತನೇ ತರಗತಿ ವರೆಗಿನ ಲಾರಿ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಚಾಲಕರ ಅನೇಕ ಮಕ್ಕಳು ಪ್ರತಿಭಾವಂತ ರಿದ್ದಾರೆ. ಅವರ ವ್ಯಾಸಂಗಕ್ಕೆ ನೆರವಾಗಲು ಪ್ರತಿ ವರ್ಷ ವಿದ್ಯಾರ್ಥಿ ವೇತನ ವಿತರಿಸ ಲಾಗುತ್ತಿದೆ ಎಂದು ಹೇಳಿದರು.

ಬಳ್ಳಾರಿ, ಸಂಡೂರು, ತೋರಣಗಲ್ ಹಾಗೂ ಹೊಸಪೇಟೆಯ 1,200 ವಿದ್ಯಾರ್ಥಿಗಳಿಗೆ ತಲಾ ಮೂರು ಸಾವಿರ ರೂಪಾಯಿ ಚೆಕ್‌ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೆಂಕಟ್‌ ರೆಡ್ಡಿ ಹಾಜರಿದ್ದರು.

ರಾಜ್ಯದ 30 ಲಕ್ಷ ಚಾಲಕರಿಗೆ ವಿಮೆ
‘ರಾಜ್ಯದ 30 ಲಕ್ಷ ಚಾಲಕರು ಮತ್ತು ಕ್ಲೀನರ್‌ಗಳಿಗೆ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

ವಿವಿಧ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಹನಗಳ ಚಾಲಕರು ಮತ್ತು ಕ್ಲೀನರ್‌ಗಳು ವಿಮೆ ವ್ಯಾಪ್ತಿಗೆ ಬರುವರು. ಇದರಿಂದ ಅವರ ಕುಟುಂಬಕ್ಕೆ ಭದ್ರತೆ ಸಿಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT