ADVERTISEMENT

ಪೂರ್ವಸಿದ್ಧತೆ ಇಲ್ಲದೆ ಮರಳು ಆನ್‌ಲೈನ್‌ ಕೇಂದ್ರ: ಆರೋಪ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:38 IST
Last Updated 28 ಡಿಸೆಂಬರ್ 2016, 5:38 IST

ಕಂಪ್ಲಿ: ಇಲ್ಲಿಗೆ ಸಮೀಪದ ಅರಳಿಹಳ್ಳಿ ತಾಂಡಾ ಬಳಿಯ ತುಂಗಭದ್ರಾ ನದಿ ಮರಳು ಗಣಿಗಾರಿಕೆ ಸ್ಥಳದಿಂದ ಮರಳು ಸಂಗ್ರಹ ಕೇಂದ್ರಕ್ಕೆ ರವಾನಿಸಬೇಕಾದ ಮರಳನ್ನು ಟ್ರ್ಯಾಕ್ಟರ್ ಮೂಲಕ ಅಕ್ರಮ ವಾಗಿ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ರೈತ ಮುಖಂಡ ಸಣಾಪುರ ಕನಕಗಿರಿ ರೇಣು ಕಪ್ಪ ಆರೋಪಿಸಿದರು.

ಗಣಿಗಾರಿಕೆ ಸ್ಥಳದಿಂದ ಮರಳು ತೆಗೆದು ಟ್ರ್ಯಾಕ್ಟರ್‌ ಟ್ರ್ಯಾಲಿಯಲ್ಲಿ ತುಂಬಿ ಬೆಳಗೋಡುಹಾಳು, ಸಣಾಪುರ ಮಾರ್ಗದ ಮೂಲಕ ಹಾಡುಹಗಲೇ ಸಾಗಿಸಲಾಗು ತ್ತಿದೆ ಎಂದು ಮಂಗಳವಾರ ದೂರಿದರು.

ಲೋಕೋಪಯೋಗಿ ಇಲಾಖೆ ಸುಪ ರ್ದಿಗೆ ಒಳಪಟ್ಟಿರುವ ಮರಳು ಸಂಗ್ರಹ ಕೇಂದ್ರದಲ್ಲಿ ಆನ್‌ಲೈನ್‌ ವ್ಯವಸ್ಥೆಗಾಗಿ ಬೃಹತ್‌ ಕ್ಯಾಬಿನ್‌ ಸ್ಥಾಪಿಸಲಾಗಿದೆ. ಅಲ್ಲಿ ಇಂಟರ್‌ನೆಟ್‌ ಪ್ರೋಟೋಕಾಲ್‌, ಸಿಸಿ ಟಿವಿ ಕ್ಯಾಮೆರಾ, ಅಳವಡಿಸುವುದಾಗಿ ತಿಳಿಸಿದ್ದ ಅಧಿಕಾರಿಗಳು ಇದೀಗ ಯಾವ ವ್ಯವಸ್ಥೆ ಕಲ್ಪಿಸದೆ ಡಿ. 26ರಿಂದ ಏಕಾಏಕಿ ಮರಳು ಗಣಿಗಾರಿಕೆ ಆರಂಭಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.

ಮರಳು ತೆಗೆಯಲು ಮಾನವ ಸಂಪ ನ್ಮೂಲ ಬಳಸಬೇಕು ಎಂದು ನಿಯಮ ಇದ್ದರೂ ಜೆಸಿಬಿ ಯಂತ್ರ ಬಳಸುತ್ತಿರುವ ಕ್ರಮವನ್ನು ಖಂಡಿಸಿದರು. ಮರಳು ಅಕ್ರಮ ತಡೆಯಲು ಟೆಂಡರ್‌ ಪದ್ಧತಿ ಜಾರಿಗೊಳಿಸಬೇಕು ಎಂದರು.

ಸ್ಪಷ್ಟನೆ: ಬಳ್ಳಾರಿ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಜಿ. ಬಸವರೆಡ್ಡಿ ಪ್ರತಿಕ್ರಿಯಿಸಿ, ಅರಳಹಳ್ಳಿ ತಾಂಡಾ ಮರಳು ಗಣಿಗಾರಿಕೆಯನ್ನು ಡಿ. 26ರಿಂದ ಪ್ರಾಯೋಗಿಕವಾಗಿ ಆರಂಭಿಸ ಲಾಗಿತ್ತು. ಆದರೆ ಸಾರ್ವಜನಿಕರ ದೂರು ಕಾರಣ ತುಂಗಭದ್ರಾ ನದಿಯಲ್ಲಿ ಮರಳು ತೆಗೆಯುವುದನ್ನು ಸದ್ಯ ಸ್ಥಗಿತಗೊಳಿಸ ಲಾಗಿದೆ. ಮರಳು ಸಂಗ್ರಹ ಕೇಂದ್ರದಲ್ಲಿ ಆನ್‌ಲೈನ್‌ ವ್ಯವಸ್ಥೆ, ಇಂಟರ್‌ನೆಟ್‌ ಪ್ರೋಟೋಕಾಲ್‌, ಸಿಸಿ ಟಿವಿ ಕ್ಯಾಮೆರಾ, ಟ್ರ್ಯಾಕ್ಟರ್‌ಗಳಿಗೆ ಜಿಪಿಎಸ್ ಅಳವಡಿಸಿದ ನಂತರ ಮರಳು ತೆಗೆಯಲು ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.