ADVERTISEMENT

ಮಲ್ಟಿ ಜಿಮ್‌ನಲ್ಲಿ ವ್ಯಾಯಾಮದ ಖುಷಿ!

ಕೆ.ನರಸಿಂಹ ಮೂರ್ತಿ
Published 24 ಏಪ್ರಿಲ್ 2017, 6:28 IST
Last Updated 24 ಏಪ್ರಿಲ್ 2017, 6:28 IST

ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣ ಮತ್ತು ಅಲ್ಲಿಯೇ ಇರುವ ಕ್ರೀಡಾ ಸಂಕೀರ್ಣದ ಮಲ್ಟಿ ಜಿಮ್‌ನಲ್ಲಿ ಈಗ ಯುವಜನರ ಉತ್ಸಾಹದ ಕಸರತ್ತು ನಡೆದಿದೆ. ಜಿಲ್ಲಾ  ಕ್ರೀಡಾಂಗಣದಲ್ಲಿ ಬೆಳಕಾಗುವ ಮುನ್ನವೇ ನೆರೆಯುವ ಚಿಣ್ಣರು, ಬಾಲಕ–ಬಾಲಕಿಯರು, ಕಾಲೇಜು ವಿದ್ಯಾರ್ಥಿಗಳು ಹಾಗೂ ರಾಜ್ಯ ಮಟ್ಟದ ಕ್ರೀಡಾಪಟುಗಳು ಬಿಸಿಲೇರುವ ಮುನ್ನವೇ ಬೆವರಳಿಸುತ್ತಿ ದ್ದಾರೆ, ಕೆಲವೇ ದಿನಗಳ ಹಿಂದೆ ಆರಂಭವಾಗಿರುವ ಅಥ್ಲೆಟಿಕ್ಸ್‌ ಉಚಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಅವರು ಬೇಸಿಗೆ ಕಾಲದ ವ್ಯಾಯಾಮ ದಲ್ಲಿ ಬಸವಳಿದಿಲ್ಲ. ಬದಲಿಗೆ, ಉತ್ತೇಜನಗೊಂಡಿದ್ದಾರೆ. ಬರಲಿರುವ ಹೊಸ ಶೈಕ್ಷಣಿಕ ವರ್ಷ ಅವರ ಮುಂದೆ ಕ್ರೀಡಾ ಸಾಧನೆಯ ಹೊಸ ಹಾದಿಯನ್ನೂ ತೆರೆಯಲಿದೆ.

ವಿದ್ಯಾರ್ಥಿಗಳಷ್ಟೇ ಅಲ್ಲದೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲಿದ್ದು, ಅದಕ್ಕಾಗಿ ದೈಹಿಕ ಕ್ಷಮತೆ ಪರೀಕ್ಷೆಯನ್ನು ಎದುರಿಸಬೇಕಾಗಿರುವ ಹತ್ತಾರು ಯುವಜನ ಕೂಡ ವೈಜ್ಞಾನಿಕ ತರಬೇತಿಯನ್ನು ಪಡೆಯುತ್ತಿರುವುದು ವಿಶೇಷ.ಜಿಲ್ಲಾ ಅಥ್ಲೆಟಿಕ್ಸ್‌ ತರಬೇತುದಾರ ರಾದ ಕೆ.ಎನ್‌.ರಾಮಸ್ವಾಮಿ ಅವರ ಮಾರ್ಗದರ್ಶನದಲ್ಲಿ ಶಿಬಿರ ನಡೆಯು ತ್ತಿದ್ದು, ಈಗಾಗಲೇ ಅವರ ಮಾರ್ಗ ದರ್ಶನದಲ್ಲಿ ತರಬೇತಿ ಪಡೆದು ಸ್ಪರ್ಧೆ ಗಳಲ್ಲಿ ವಿಜೇತರಾದವರೂ ಪಾಲ್ಗೊಳ್ಳುತ್ತಿದ್ದಾರೆ.

ಫಿಟ್‌ನೆಸ್‌ ಮುಖ್ಯ: ‘ಯಾವುದೇ ಕ್ರೀಡೆಯನ್ನು ಅಭ್ಯಾಸ ಮಾಡುವವರಿಗೆ ದೇಹದ ಫಿಟ್‌ನೆಸ್‌ ಮುಖ್ಯ, ಹೀಗಾಗಿ ಓಟ, ಜಿಗಿತ ಮತ್ತು ಎಸೆತದ ಅಭ್ಯಾಸ ಮಾಡಿಸುವ ಮುನ್ನ ದೈಹಿಕ ಕ್ಷಮತೆ ಯನ್ನು ಗಟ್ಟಿಗೊಳಿಸುವಂಥ ಚಟುವಟಿಕೆ ಗಳಿಗೆ ಆದ್ಯತೆ ನೀಡಲಾಗಿದೆ’ ಎಂದು ರಾಮಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.‘ಬಿಸಿಲೇರುವ ಮುನ್ನವೇ ಆಟೋಟ ಗಳಲ್ಲಿ ಪಾಲ್ಗೊಳ್ಳುತ್ತಿರುವುದು ಖುಷಿ ತಂದಿದೆ’ ಎಂದು ತರಬೇತಿ ಪಡೆಯು ತ್ತಿರುವ ಪಲ್ಲವಿ, ವೆಂಕಟೇಶ್‌ ಅಭಿಪ್ರಾಯಪಟ್ಟರು.

ADVERTISEMENT

ವೈಜ್ಞಾನಿಕ ತರಬೇತಿ: ಇದೇ ವೇಳೆ, ಕ್ರೀಡಾ ಸಂಕೀರ್ಣದ ಆವರಣದಲ್ಲಿ ಫೆಬ್ರುವರಿಯಿಂದ ಆರಂಭವಾಗಿರುವ ಮಲ್ಟಿ ಜಿಮ್‌ ಎರಡು ತಿಂಗಳ ಅವಧಿ ಯಲ್ಲೇ ನೂರಾರು ಯುವಜನ ರನ್ನು ಹಾಗೂ ಮಹಿಳೆಯರನ್ನು ಆಕರ್ಷಿಸಿರುವುದು ವಿಶೇಷ.ಬೆಳಿಗ್ಗೆ 5.30ರಿಂದ 9ರವರೆಗೆ ಮತ್ತು ಸಂಜೆ 4ರಿಂದ 8 ರವರೆಗೆ ಕಾರ್ಯನಿರ್ವಹಿಸುವ ಜಿಮ್‌ನಲ್ಲಿ ಮಹಿಳೆಯರಿಗೆಂದೇ ಬೆಳಿಗ್ಗೆ 8ರಿಂದ 9ರ ಅವಧಿಯನ್ನು ಮೀಸಲಿರಿಸಲಾಗಿದೆ.

ಜಿಮ್‌ನಲ್ಲಿ 384 ಸದಸ್ಯರಿದ್ದು, ಅವರ ಪೈಕಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಸಂಖ್ಯೆ 70ಕ್ಕೂ ಹೆಚ್ಚಿರುವುದು ವಿಶೇಷ. ಮಧ್ಯ ವಯಸ್ಕರಿಗೂ ಜಿಮ್‌ ಈಗ ಆಕರ್ಷಕ ತಾಣವಾಗಿದೆ. ಮಾರ್ಚ್‌ನಿಂದ ತರ ಬೇತುದಾರರಾಗಿ ಕಾರ್ಯ ನಿರ್ವಹಿಸು ತ್ತಿರುವ ಬಿ.ಎಸ್‌. ರಾಘವೇಂದ್ರ ಠಾಕೂರ್‌ ಅವರ ಕಾಳಜಿಯೇ ಅದಕ್ಕೆ ಕಾರಣ ಎಂಬುದು ವಿಶೇಷ.‘ಜಿಮ್‌ಗೆ ಬರುವ ಪ್ರತಿಯೊಬ್ಬರ ಅಗತ್ಯ ಮತ್ತು ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತ್ಯೇಕವಾದ ತರಬೇತಿಯನ್ನು ರಾಘವೇಂದ್ರ ಅವರು ನೀಡುತ್ತಿರು ವುದು ಮೆಚ್ಚಬೇಕಾದ ಅಂಶ’ ಎಂದು ಜೆ.ಎಸ್‌.ಇಸಾಕ್‌ ಅಹ್ಮದ್‌ ಮತ್ತು ಶಾಷಾ ವಲಿ ತಿಳಿಸಿದರು.

‘ಜಿಮ್‌ನಲ್ಲಿ ಅತ್ಯಾಧುನಿಕ ಸಾಮಗ್ರಿ ಗಳಿದ್ದರಷ್ಟೇ ಸಾಲದು. ಅವುಗಳನ್ನು ಸಮರ್ಪಕವಾಗಿ ಬಳಸುವುದು ಹೇಗೆ ಎಂದು ಬದ್ಧತೆಯಿಂದ ಹೇಳಿಕೊಡು ವವರು ಇರಬೇಕು. ಹಲವು ಜಿಮ್‌ಗಳಲ್ಲಿ ತರಬೇತುದಾರರಿದ್ದರೂ ಸೂಕ್ತ ಮಾರ್ಗದರ್ಶನ ದೊರಕುವುದು ಅಪರೂಪ. ಆದರೆ ಕ್ರೀಡಾ ಸಂಕೀರ್ಣದ ಜಿಮ್‌ ಅದಕ್ಕೆ ಹೊರತಾಗಿದೆ. ಇಲ್ಲಿಗೆ ದಿನವೂ ಬರಲು ಖುಷಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ವ್ಯಾಯಾಮದ ಮೂಲಕ ಕೆಲವರಿಗೆ ತೂಕ ಇಳಿಸುವುದೇ ಮುಖ್ಯ. ಇನ್ನು ಕೆಲವರಿಗೆ ದೇಹದ ಕೊಬ್ಬು ಕರಗಿಸಬೇಕು. ತೂಕ ಇಳಿಯಬಾರದು. ಹಲವರಿಗೆ ಉತ್ತಮ ದೇಹದಾರ್ಢ್ಯ ಹೊಂದುವಾಸೆ. ಹೀಗಾಗಿ ಅವರವರ ಅಗತ್ಯಕ್ಕೆ ತಕ್ಕಂತೆ ತರಬೇತಿ ನೀಡ ಲಾಗುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬ ಸದಸ್ಯರ ವೈಯಕ್ತಿಕ ಮಾಹಿತಿಯುಳ್ಳ ಡೈರಿಯನ್ನೂ ನಿರ್ವಹಿಸುತ್ತಿರುವೆ’ ಎಂದು ರಾಘವೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.