ADVERTISEMENT

ರಂಗು ಕಳೆದುಕೊಂಡ ರಂಗಮಂದಿರ

ಎಸ್.ಎಂ.ಗುರುಪ್ರಸಾದ ಕೊಟ್ಟೂರು
Published 4 ಸೆಪ್ಟೆಂಬರ್ 2017, 6:06 IST
Last Updated 4 ಸೆಪ್ಟೆಂಬರ್ 2017, 6:06 IST

ಕೊಟ್ಟೂರು: ‘ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾದ ಕೊಟ್ಟೂರಿನ ಎಲ್‌.ಬಿ.ಶಾಸ್ತ್ರಿ ಬಡಾವಣೆಯಲ್ಲಿ 2001–12ನೇ ಸಾಲಿನಲ್ಲಿ ಸ್ಥಳೀಯ ಆಡಳಿತ ನಿರ್ಮಿಸಿದ ರಂಗ ಮಂದಿರ ಸೂಕ್ತ ನಿರ್ವಹಣೆಯಿಲ್ಲದೇ ಅನೈತಿಕ ಚಟು ವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ರಂಗಮಂದಿರ ನಿರ್ಮಾಣದ ಮೂಲ ಉದ್ದೇಶ ಈಡೇರದೇ ಅವ ಸಾನದ ಅಂಚಿಗೆ ತಲುಪಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕೊಟ್ಟೂರು ಕಲೆಗಳ ತವರೂರು. ಇಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿರು ತ್ತವೆ. ಇದನ್ನರಿತ ಸ್ಥಳೀಯ ಆಡಳಿತ ಸುಸಜ್ಜಿತ ರಂಗಮಂದಿರ ನಿರ್ಮಿಸಿತ್ತು.

ಆದರೆ, ಈಗ ನಿರ್ವಹಣೆ ಕೊರತೆಯಿಂದ ರಂಗಮಂದಿರದ ಆವರಣದಲ್ಲಿ ಜಾಲಿ ಗಿಡ, ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಅಕ್ಷರಶಃ ಭೂತ ಬಂಗಲೆಯಂತೆ ಗೋಚರಿಸುತ್ತಿದೆ. ಇದರ ಲಾಭ ಪಡೆದ ದುಷ್ಕರ್ಮಿಗಳು ಅನೈತಿಕ ಚಟುವಟಿಕೆ ಗಳಿಗೆ ಬಳಸಿಕೊಂಡಿದ್ದಾರೆ. ಈ ಅವ್ಯವಸ್ಥೆಯನ್ನು ಕಂಡೂ ಕಾಣದಂತೆ ಆಡಳಿತ ವರ್ಗ ವರ್ತಿಸುತ್ತಿದೆ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ಹೇಳಿದರು.

ADVERTISEMENT

‘ರಂಗಮಂದಿರದಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲದಿರುವ ಕಾರಣ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ’ ನಾಟಕ ನಿರ್ದೇಶಕ ಶ್ರೀಕಾಂತ್‌ ಬೇಸರ ವ್ಯಕ್ತಪಡಿಸಿದರು.

‘ಪಟ್ಟಣದಲ್ಲಿ ರಂಗಮಂದಿರದ ಕೊರತೆಯಿಂದ ಎಪಿಎಂಸಿ ಹಾಗೂ ಇತರೆ ಮೈದಾನಗಳಲ್ಲಿ ಕಾರ್ಯಕ್ರಮ ಏರ್ಪಡಿ ಸಲಾಗುತ್ತಿದೆ. ಆಯೋಜಕರಿಗೆ ಇದರಿಂದ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ. ಪಟ್ಟಣದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಿದರೆ ಹೆಚ್ಚೆಚ್ಚು ಕಾರ್ಯಕ್ರಮ ಗಳನ್ನು ಆಯೋಜಿಸಲು ಸಾಧ್ಯವಾಗು ತ್ತದೆ’ ಎಂದು ಮುಖ್ಯಶಿಕ್ಷಕ ಮತ್ತಿಹಳ್ಳಿ ಪ್ರಕಾಶ್ ಅಭಿಪ್ರಾಯಪಟ್ಟರು.

ಕೊಟ್ಟೂರಿನಲ್ಲಿ ಅನಾದಿ ಕಾಲ ದಿಂದಲೂ ದೊಡ್ಡಾಟ, ಸಣ್ಣಾಟ, ಬಯ ಲಾಟ, ಜನಪದ ಕಲೆಗಳು ಪ್ರದರ್ಶನ ಗೊಳ್ಳುತ್ತಿವೆ. ವಿವಿಧ ಕಲಾ ಸಂಘಗಳು ಹಾಗೂ ಪ್ರಖ್ಯಾತ ರಂಗಭೂಮಿ ಕಲಾ ವಿದರು ಇಂದಿಗೂ ಕಲಾಸೇವೆಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ರಂಗ ಮಂದಿರ ಕಟ್ಟಡವು ನಿರುಪಯುಕ್ತವಾಗಿರುವುದು ಕಲಾಪ್ರೇಮಿಗಳ ಪಾಲಿಗೆ ನೋವಿನ ಸಂಗತಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.