ADVERTISEMENT

ರಕ್ತದಾನಕ್ಕೊಂದು ಹೊಸ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 18 ಮೇ 2017, 6:55 IST
Last Updated 18 ಮೇ 2017, 6:55 IST
ರಕ್ತದಾನಕ್ಕೊಂದು ಹೊಸ ಆ್ಯಪ್‌
ರಕ್ತದಾನಕ್ಕೊಂದು ಹೊಸ ಆ್ಯಪ್‌   

ಬಳ್ಳಾರಿ: ನಗರದ ಇಸ್ಲಾಮಿಕ್‌ ದಾವಾ ಅಂಡ್‌ ಗೈಡೆನ್ಸ್‌ ಸರ್ವಿಸಸ್‌ ಸಂಸ್ಥೆಯು ರಕ್ತದಾನಿಗಳ ಮಾಹಿತಿಯುಳ್ಳ ನಜರತ್‌ ಆ್ಯಪ್‌ಅನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದೆ.

www.najaath.com ಮೂಲಕ ರಕ್ತದಾನಿಗಳು ಹೆಸರು ನೋಂದಾಯಿಸಬಹುದು. IDGS ಆ್ಯಪ್‌ಅನ್ನು ಡೌನ್‌ ಲೋಡ್‌ ಮಾಡಿಕೊಳ್ಳುವ ಮೂಲಕವೂ ನೋಂದಾಯಿಸಬಹುದು. ರಕ್ತದ ಅಗತ್ಯವುಳ್ಳವರು ಇದೇ ಆ್ಯಪ್‌ನಲ್ಲಿ ಮಾಹಿತಿಯನ್ನು ಪಡೆದು ರಕ್ತದಾನಿಗಳನ್ನು ಸಂಪರ್ಕಿಸಬಹುದು ಎಂದು ಐಡಿಜಿಎಸ್‌ ಸಂಸ್ಥೆಯ ಅಧ್ಯಕ್ಷ ಎಂ.ಐ. ನಿಸಾರ್‌ ಅಹ್ಮದ್‌ ಮತ್ತು ಸಲಹೆಗಾರ ಅಬ್ದುಲ್ ಹೈ ಎಮ್ರಿ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೌಲ್‌ಬಜಾರ್‌ ಪ್ರದೇಶದಲ್ಲಿ ಕೆಲವು ತಿಂಗಳ ಹಿಂದೆ ರಕ್ತದಾನಿಗಳಿಗಾಗಿ ವ್ಯಕ್ತಿಯೊಬ್ಬರು ಹುಡುಕಾಟ ನಡೆಸಿದ್ದ ದೃಶ್ಯವು ಮನಕಲಕಿ ತಾವು ಆ್ಯಪ್‌ ಅಭಿವೃದ್ಧಿಪಡಿಸಲು ಪ್ರೇರಣೆ ನೀಡಿತು ಎಂದು ನಿಸಾರ್‌ ಅಹ್ಮದ್‌ ಸ್ಮರಿಸಿದರು.

ADVERTISEMENT

ಯಾವುದೇ ಗುಂಪಿನ ರಕ್ತದಾನಿಗಳ ಮಾಹಿತಿ ಅವರ ಹೆಸರು ಮತ್ತು ದೂರ ವಾಣಿ ಸಂಖ್ಯೆಯೊಂದಿಗೆ ದೊರಕಲಿದೆ.

ಆಸಕ್ತರು ಮಾತ್ರ ಹೆಸರು ದಾಖಲಿಸುವುದರಿಂದ, ಬೇಡಿಕೆಗೆ ಸ್ಪಂದನೆಯೂ ದೊರಕುವ ವಿಶ್ವಾಸವಿದೆ ಎಂದರು.

ಮೇ 14ರಂದು ಆ್ಯಪ್‌ ಅನ್ನು ಬಿಡುಗಡೆ ಮಾಡಿದ್ದು, ಇದುವರೆಗೆ 25 ರಕ್ತದಾನಿಗಳು ಹೆಸರು ನೋಂದಾಯಿಸಿ ದ್ದಾರೆ. ಆ್ಯಪ್‌ ಬಗ್ಗೆ 12ಕ್ಕೂ ಹೆಚ್ಚು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲೂ ಮಾಹಿತಿ ಹರಡಿದ್ದು, ರಕ್ತದಾನಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್‌ ಮುಬೀನ್‌, ಖಚಾಂಚಿ ಅತಾ ಉರ್‌ ರಹಮಾನ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.