ADVERTISEMENT

‘ರಸ್ತೆ ನಿರ್ಮಾಣ ಬೇಜವಾಬ್ದಾರಿ ಕಾರಣ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 5:10 IST
Last Updated 18 ಮಾರ್ಚ್ 2017, 5:10 IST
‘ರಸ್ತೆ ನಿರ್ಮಾಣ ಬೇಜವಾಬ್ದಾರಿ ಕಾರಣ’
‘ರಸ್ತೆ ನಿರ್ಮಾಣ ಬೇಜವಾಬ್ದಾರಿ ಕಾರಣ’   

ಬಳ್ಳಾರಿ: ‘ನಗರದ ಕಪ್ಪಗಲ್‌ ಮುಖ್ಯ ರಸ್ತೆಯ ಬಿ.ಎಸ್‌.ಕಾಂಪೌಂಡ್‌ ರಸ್ತೆಯಲ್ಲಿ ಮ್ಯಾನ್‌ಹೋಲ್‌ಗೆ ಇಳಿದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಮಿಕರು ಸ್ವಚ್ಛತಾ ಕಾರ್ಯ ನಡೆಸಿರುವುದಕ್ಕೆ ಮಂಡಳಿ ಜವಾಬ್ದಾರಿ ಅಲ್ಲ. ಕಾಂಕ್ರೀಟ್ ‌ ರಸ್ತೆಯನ್ನು ನಿರ್ಮಿಸುವ ಮುನ್ನ ಲೋಕೋಪಯೋಗಿ ಇಲಾ ಖೆಯು ಮಂಡಳಿಗೆ ಮಾಹಿತಿ ನೀಡಿಲ್ಲ. ಭಾರಿ ವಾಹನ ಬಳಸಿದ್ದರಿಂದ ಮ್ಯಾನ್‌ ಹೋಲ್‌ ಒಡೆದಿತ್ತು’ ಎಂದು  ಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಜೆ.ವೀರನಗೌಡ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.

‘ಮುಂಜಾಗ್ರತೆ ಇಲ್ಲದೆ ರಸ್ತೆ ನಿರ್ಮಾಣ ಮಾಡುವ ಸಮಯದಲ್ಲಿ ಭಾರಿ ತೂಕದ ಯಂತ್ರವಾಹನವನ್ನು ಬಳಸಿ ಒಳಚರಂಡಿ ವ್ಯವಸ್ಥೆಯ ಮ್ಯಾನ್‌ ಹೋಲ್‌ನ ಅರ್ಧದಷ್ಟನ್ನು ಭಾಗವನ್ನು ಒಡೆದುಹಾಕಲಾಗಿತ್ತು. ಪರಿಣಾಮವಾಗಿ ಮ್ಯಾನ್‌ಹೋಲ್‌ ಒಳಗೆ ಅಪಾರ ಪ್ರಮಾಣದ ಕಾಂಕ್ರೀಟ್ ಬಿದ್ದು, ಒಳಚರಂಡಿ ನೀರಿನ ಹರಿವು ಪೂರ್ಣ ಸ್ಥಗಿತ  ಗೊಂಡಿತ್ತು. ಅಲ್ಲಿ ತ್ಯಾಜ್ಯ ನೀರು ಇರಲಿಲ್ಲ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಸೂಚನೆ: ‘ಸಮಸ್ಯೆ ಏರ್ಪಟ್ಟಿದ್ದರಿಂದ, ಮ್ಯಾನ್‌ಹೋಲ್‌ ಒಳಗೆ ಬಿದ್ದ ಕಾಂಕ್ರೀಟ್‌ ಅನ್ನು ಕೂಡಲೇ ತೆರವುಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡ ಲಾಗಿತ್ತು. ಕಾಂಕ್ರೀಟ್ ಅನ್ನು ತೆರವುಗೊ ಳಿಸಿದ ಬಳಿಕ, ಮಂಡಳಿಯ ನೌಕರರು ಸುರಕ್ಷಾ ಕ್ರಮಗಳೊಂದಿಗೆ ಸ್ಥಳದಲ್ಲಿ ಹಾಜರಿದ್ದರು’ ಎಂದು ತಿಳಿಸಿದ್ದಾರೆ.

ADVERTISEMENT

ಸಕ್ಕಿಂಗ್‌ ಯಂತ್ರ: ‘ಒಳಚರಂಡಿ ವ್ಯವಸ್ಥೆ ನಿರ್ವಹಣೆಗಾಗಿ ಪಾಲಿಕೆಯು ಮಂಡಳಿಗೆ ಒಂದು ಜೆಟ್ಟಿಂಗ್‌ ಯಂತ್ರ, ಸಕ್ಕಿಂಗ್‌ ಯಂತ್ರ ಹಾಗೂ ಎರಡೂ ಕಾರ್ಯ ಮಾಡುವ ಮತ್ತೊಂದು ಯಂತ್ರ ವಾಹನ ವನ್ನು ನೀಡಿದೆ. ನಗರದ ಯಾವುದೇ ಪ್ರದೇಶದಿಂದ ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿದ ದೂರುಗಳು ಬಂದ ಬಳಿಕ, ಈ ಯಂತ್ರಗಳನ್ನು ಬಳಸಿಯೇ ಕಾರ್ಯಾಚರಣೆ ನಡೆಸಲಾಗುತ್ತದೆ. ಯಾವುದೇ ಕಾರ್ಮಿಕರನ್ನು ಮ್ಯಾನ್‌ ಹೋಲ್‌ಗೆ ಇಳಿಸಿ ಸ್ವಚ್ಛತಾ ಕಾರ್ಯ ನಡೆ ಸುವುದಿಲ್ಲ’ ಎಂದಿದ್ದಾರೆ.

‘ಬಿ.ಎಸ್‌.ಕಾಂಪೌಡ್‌ ರಸ್ತೆಯಲ್ಲಿ ಒಳ ಚರಂಡಿ ನೀರಿನ ಹರಿವು ನಿಂತು ಮನೆ ಗಳಿಗೆ ತ್ಯಾಜ್ಯ ನೀರು ನುಗ್ಗಿ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ದೂರು ನೀಡಿದ್ದರು. ಮಂಡಳಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ, ಸಮಸ್ಯೆ ಬೆಳಕಿಗೆ ಬಂತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.