ADVERTISEMENT

ರಸ್ತೆ ವಿಸ್ತರಣೆ ವೇಳೆ ಪುರಾತನ ಕಾಲದ ಕಂಬ ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 10:21 IST
Last Updated 16 ಜುಲೈ 2017, 10:21 IST

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಕೆರೆ ಏರಿಯ ಮೇಲೆ ಶನಿವಾರ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಶಿಲ್ಪಕಲೆ ಕೆತ್ತನೆ ಹೊಂದಿರುವ ಪುರಾತನ ಕಂಬಗಳು ಪತ್ತೆಯಾಗಿವೆ.
ಕಂಬಗಳ ಮೇಲೆ ಸಾಲು ಆನೆಗಳ ಕೆತ್ತನೆ ಇದೆ. ಈ ಕಂಬಗಳು ವಿಜಯನಗರ ಸಾಮ್ರಾಜ್ಯದ ಕಾಲದ್ದು ಇರಬಹುದು ಎಂದು ಅಂದಾಜಿಸಲಾಗಿದೆ.

‘ಕಮಲಾಪುರ ಕೆರೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಸಹಜವಾಗಿಯೇ ವಿಜಯನಗರ ಸಾಮ್ರಾಜ್ಯ ಕಾಲದ ಅನೇಕ ಕುರುಹುಗಳು ಅಲ್ಲಲ್ಲಿ ಇವೆ. ಈಗ ಸಿಕ್ಕಿರುವ ಕಲ್ಲುಗಳು ಕೂಡ ಆ ಕಾಲದ್ದೇ ಇರಬಹುದು’ ಎನ್ನುತ್ತಾರೆ ಪತ್ರಕರ್ತ ಹಾಗೂ ಜನಸಂಗ್ರಾಮ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸದಸ್ಯ ಶಿವಕುಮಾರ ಮಾಳಗಿ. ‘ಕೂಡಲೇ ಸ್ಥಳಕ್ಕೆ ವಾಸ್ತು ತಜ್ಞರನ್ನು ಕರೆಸಬೇಕು. ಎಲ್ಲವನ್ನೂ ಪರಿಶೀಲಿಸಿದ ನಂತರ ರಸ್ತೆ ಕೆಲಸಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT