ADVERTISEMENT

‘ಸಂವಿಧಾನವೇ ದೇಶದ ಪವಿತ್ರ ಗ್ರಂಥ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 11:14 IST
Last Updated 16 ಏಪ್ರಿಲ್ 2017, 11:14 IST

ಬಳ್ಳಾರಿ: ಸಂವಿಧಾನವೇ ಈ ದೇಶದ ಏಕೈಕ ಪವಿತ್ರ ಗ್ರಂಥ ಎಂದು ಲೇಖಕಿ ಡಾ.ಎಚ್.ಎಸ್.ಅನುಪಮ ಹೇಳಿದರು.ನಗರದ ಮುನಿಸಿಪಲ್‌ ಕಾಲೇಜು ಮೈದಾನದಲ್ಲಿ ಶುಕ್ರವಾರ ರಾತ್ರಿ ಜಿಲ್ಲಾಡ ಳಿತ ಏರ್ಪಡಿಸಿದ್ದ ಬಿ.ಆರ್‌.ಅಂಬೇಡ್ಕರ್‌ 126ನೇ ಜಯಂತಿಯಲ್ಲಿ ಮಾತನಾಡಿದ ಅವರು,  ರಾಜಕೀಯ ಮೀಸಲಾತಿ ಯನ್ನಷ್ಟೇ ನೀಡಿ ಉಳಿದ ಮೀಸಲಾತಿಗ ಳನ್ನು ನೀಡದೆ ವಂಚಿಸಲಾಗುತ್ತಿದೆ. ಸ್ವಾತಂತ್ರ್ಯ ಎಂಬ ಸಿಪ್ಪೆಯನ್ನು ಮಾತ್ರ ತೋರಿಸಿ, ನಿಜವಾದ ತಿರುಳನ್ನು ಜನ ರಿಂದ ದೂರವಿಡಲಾಗಿದೆ ಎಂದರು.
20ನೇ ಶತಮಾನದ ಜ್ಞಾನಸೂರ್ಯ ಅಂಬೇಡ್ಕರ್ ವಕೀಲಿ ವೃತ್ತಿಯನ್ನು ಈ ನೆಲದ ಜನರ ಹಕ್ಕುಗಳಿಗಾಗಿ ಮತ್ತು ಅವರ ಉದ್ಧಾರಕ್ಕಾಗಿ ಬಳಸಿಕೊಂಡ ಮಹಾನುಭಾವರು ಎಂದರು.

ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಶಾಸಕ ಅನಿಲ್ ಲಾಡ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ವೆಂಕಟರಮಣ, ಉಪಮೇಯರ್ ಉಮಾದೇವಿ, ಪಾಲಿಕೆ ಸದಸ್ಯ ಬಸವರಾಜ, ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಪಿ.ದೀನಾ, ಸಿಇಓ ಡಾ.ಕೆ.ವಿ.ರಾಜೇಂದ್ರ, ಸದಸ್ಯರಾದ ಅಲ್ಲಂ ಪ್ರಶಾಂತ್‌, ಮುಂಡರಗಿ ನಾಗರಾಜ, ನಿರಾಶ್ರಿತರ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎ.ಮಾನಯ್ಯ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್.ಗಿರಿಮಲ್ಲಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಚೇತನ್, ಹೆಚ್ಚು ವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಪಾಲಿಕೆ ಆಯುಕ್ತ ಎಂ.ಕೆ. ನಲ್ವಡಿ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಎಚ್.ತಿಪ್ಪೆಸ್ವಾಮಿ ಇದ್ದರು. ಇದೇ ಸಂದರ್ಭದಲ್ಲಿ ಪಾಲಿಕೆ ವತಿಯಿಂದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.

ಪ್ರಗತಿಕೃಷ್ಣ ಬ್ಯಾಂಕ್‌: ಇಲ್ಲಿನ ಗಾಂಧಿನಗರ ಲ್ಲಿರುವ ಪ್ರಗತಿಕೃಷ್ಣಾ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಅಂಬೇ ಡ್ಕರ್‌ ಜಯಂತಿಯಲ್ಲಿ ‘ಪತ್ರಕರ್ತ ಅಂಬೇ ಡ್ಕರ್‌’ ಕುರಿತು ಉಪನ್ಯಾಸಕ ಸಿ.ಮಂಜು ನಾಥ್‌ ಉಪನ್ಯಾಸ ನೀಡಿದರು. ಟಿ.ಕೆ. ಗಂಗಾಧರ ಪತ್ತಾರ ಅವರು ಅಂಬೇ ಡ್ಕರ್ ಕುರಿತು ಕವನ ಓದಿದರು.ಬ್ಯಾಂಕಿನ ಮಹಾಪ್ರಬಂಧಕರಾದ ಜಿ.ಎಸ್‌.ರವಿಸುಧಾಕರ, ಗೋಪಾಲ ನಾಯ್ಕ, ಡಿ.ಸುರೇಂದ್ರನ್‌, ಸಹಾಯಕ ಮಹಾಪ್ರಬಂಧಕ ಜಿ.ಕೃಷ್ಣ ಹೇರ್ಳೆ, ಮುಖ್ಯ ಪ್ರಬಂಧಕ ಅನಂತಮಯ್ಯ, ಅಧಿಕಾರಿ ಟಿ.ರಾಮಚಂದ್ರಪ್ಪ, ಪ್ರಾದೇ ಶಿಕ ಕಚೇರಿಯ ಮುಖ್ಯಸ್ಥ ಗಂಗಾಧರಪ್ಪ, ಬ್ಯಾಂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘದ ಅಧ್ಯಕ್ಷ ಪಾಪಣ್ಣ, ಸಿಬ್ಬಂದಿ ಬಿ.ಶಿವಕುಮಾರ್, ರಾಜೇಶ, ಲೇಖಕ ವೆಂಕಟಯ್ಯ ಅಪ್ಪಗೆರೆ ಇದ್ದರು.

ADVERTISEMENT

ಛಲವಾದಿ ಮಹಾಸಭಾದ ಜಿಲ್ಲಾ ಘಟಕ: ಇಲ್ಲಿನ ಅಂಬೇಡ್ಕರ್ ಭವನದ ಆವರಣ ದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನರಸಪ್ಪ ಹೂಮಾಲೆ ಹಾಕಿ ನಮಿಸಿ ದರು. ಪದಾಧಿಕಾರಿಗಳಾದ ಶಿವಕುಮಾರ್, ಡಿ.ಎಚ್‌.ಹನುಮೇಶಪ್ಪ, ಎಂ.ಹಂಪಯ್ಯ, ಜೆ.ಎಸ್‌.ಶ್ರೀನಿವಾಸಲು, ಟಿ.ಸುಂಕಪ್ಪ, ರಾಜು, ಸಿದ್ಧಬಸಪ್ಪ, ಯಂಕಪ್ಪ, ತಿಪ್ಪೇಸ್ವಾಮಿ, ರಂಗನಾಥ, ಕೆ.ನಾಗೇಂದ್ರ, ಸಿ.ಶ್ರೀನಿ ವಾಸ, ವಸಂತ, ಸಿ.ಶಂಕರ, ಸಿ.ಈಶ್ವರ ರಾವ್‌, ಗೋವಿಂದ, ಪರಮೇಶಿ, ಪ್ರಸಾದ, ಶಿಕ್ಷಕ ಗೂಳೆಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.