ADVERTISEMENT

ಹಂಪಿಯಲ್ಲಿ ಸ್ಮಾರಕ ಜೀರ್ಣೋದ್ಧಾರ ಪರ್ವ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 27 ಜುಲೈ 2017, 6:43 IST
Last Updated 27 ಜುಲೈ 2017, 6:43 IST
ಹಂಪಿಯ ಬಡವಿಲಿಂಗ ಸ್ಮಾರಕ ಎದುರಿನ ಮಂಟಪದ ಜೀರ್ಣೋದ್ಧಾರ ನಡೆಯುತ್ತಿರುವುದು
ಹಂಪಿಯ ಬಡವಿಲಿಂಗ ಸ್ಮಾರಕ ಎದುರಿನ ಮಂಟಪದ ಜೀರ್ಣೋದ್ಧಾರ ನಡೆಯುತ್ತಿರುವುದು   

ಹೊಸಪೇಟೆ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ (ಎ.ಎಸ್‌.ಐ.) ಹಂಪಿಯಲ್ಲಿ ಸ್ಮಾರಕಗಳ ಜೀರ್ಣೋದ್ಧಾರ ಪರ್ವ ಶುರುವಾಗಿದೆ. ಎ.ಎಸ್‌.ಐ. ನಿಯಮಗಳ ಅಡಿಯಲ್ಲಿ ಸ್ಮಾರಕಗಳ ಜೀರ್ಣೋದ್ಧಾರ ಕೆಲಸ ನಡೆಯುತ್ತಿದೆ. ನೂರಾರು ವರ್ಷಗಳ ಹಳೆಯ ಸ್ಮಾರಕಗಳಿಗೆ ಹೊಸ ಮೆರಗು ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಪ್ರವಾಸಿ ಗರ ಅನುಕೂಲಕ್ಕಾಗಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ.

ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರ, ಕೃಷ್ಣ ದೇವಸ್ಥಾನ, ಉಗ್ರ ನರಸಿಂಹ, ಬಡವಿಲಿಂಗ ಸ್ಮಾರಕಗಳ ಜೀರ್ಣೋ ದ್ಧಾರ ಕಳೆದ ಕೆಲವು ದಿನಗಳಿಂದ ಭರದಿಂದ ನಡೆಯುತ್ತಿದೆ.

ಉಗ್ರ ನರಸಿಂಹ, ಬಡವಿಲಿಂಗ ಎರಡೂ ಸ್ಮಾರಕಗಳ ಪರಿಸರದಲ್ಲಿ ಹಾಸುಗಲ್ಲು ಹಾಕಲಾಗುತ್ತಿದೆ. ಮಳೆ ನೀರು ಹರಿದು ಹೋಗಲು ಅಲ್ಲಿರುವ ಕಿರು ಕಾಲುವೆ ದುರಸ್ತಿ ಮಾಡಲಾಗುತ್ತಿದೆ. ಮುಖ್ಯರಸ್ತೆಯಿಂದ ಸ್ಮಾರಕಗಳಿಗೆ ಸಂಪರ್ಕ ಬೆಸೆಯುವ ಪಥ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಂಡೆಗಲ್ಲಿನಿಂದ ನಿರ್ಮಿಸಿರುವ ಮಾರ್ಗ ಮಧ್ಯದ ಮಂಟಪವನ್ನು ಸುವ್ಯವಸ್ಥಿತವಾಗಿ ಮರು ಜೋಡಣೆ ಮಾಡಲಾಗುತ್ತಿದೆ. ಈ ಕೆಲಸಕ್ಕೆ ಕ್ರೇನ್‌ ಉಪಯೋಗಿಸಲಾಗು ತ್ತಿದೆ.

ADVERTISEMENT

ಸ್ವಲ್ಪ ಮಳೆ ಬಂದರೂ ಉಗ್ರ ನರಸಿಂಹ ಸ್ಮಾರಕಕ್ಕೆ ಹೋಗುವ ದಾರಿ ಕೊಚ್ಚೆಯಾಗಿ ಮಾರ್ಪಡುತ್ತದೆ. ಇದರಿಂದ ಪ್ರವಾಸಿಗರಿಗೆ ತೊಂದರೆ ಯಾಗುತ್ತಿದೆ. ಇದನ್ನು ಮನಗಂಡು ಹಾಸುಗಲ್ಲಿನಿಂದ ಪಥ ನಿರ್ಮಿಸಲು ತೀರ್ಮಾನಿಸಲಾಗಿದೆ. ‘ಹಂಪಿಯ ಅಪ ರೂಪದ ಸ್ಮಾರಕ ಗಳಲ್ಲಿ ಉಗ್ರ ನರಸಿಂಹ, ಬಡವಿಲಿಂಗ ಕೂಡ ಸೇರಿವೆ.

ಸ್ವಲ್ಪ ಮಳೆ ಬಂದರೂ ಈ ಸ್ಮಾರಕದ ಸುತ್ತ ಕೆಸರಾ ಗುತ್ತಿತ್ತು. ಜನರಿಗೆ ಹೋಗಿ ಬರಲು ಸಮಸ್ಯೆ ಆಗುತ್ತಿತ್ತು. ಹಾಗಾಗಿ ಸ್ಮಾರಕದ ಸುತ್ತಮುತ್ತ ಹಾಸುಗಲ್ಲು ಹಾಕಲಾಗುತ್ತಿದೆ. ಜನ ನಡೆದು ಹೋಗಲು ಪಥ ಅಭಿವೃದ್ಧಿ ಪಡಿಸಲಾಗು ತ್ತಿದೆ’ ಎನ್ನುತ್ತಾರೆ ಎ.ಎಸ್‌.ಐ. ಹಂಪಿ ವೃತ್ತದ ಪ್ರಭಾರ ಸೂಪರಿಟೆಂಡೆಂಟ್‌ ಕೆ. ಮೂರ್ತೇಶ್ವರಿ.

‘ಬಡವಿಲಿಂಗ ಸ್ಮಾರಕದ ಬಳಿ ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿರುವ ಕಿರು ಸೇತುವೆ ಇದೆ. ಆ ಸ್ಥಳವನ್ನು ಈಗ ಅಭಿವೃದ್ಧಿ ಪಡಿಸಲಾಗು ತ್ತಿದೆ. ಹಿಂದೆ ನಿರ್ಮಿಸಿದ ರೀತಿಯಲ್ಲಿಯೇ ಕಾಲುವೆಯನ್ನು ನಿರ್ಮಿಸಿ, ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಸ್ಮಾರಕಗಳಿಗೆ ಹೋಗುವ ಪಥವನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಪಡಿಸಿದರೆ ವೀಲ್‌ ಚೇರ್‌ನಲ್ಲಿ ಓಡಾಡುವ ಅಂಗವಿಕಲರಿಗೂ ಅನುಕೂಲವಾಗುತ್ತದೆ. ಹೀಗಾಗಿ ಎಲ್ಲರನ್ನೂ ದೃಷ್ಟಿ ಯಲ್ಲಿ ಇಟ್ಟುಕೊಂಡು ಕೆಲಸ ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದರು.

ಬಡವಿಲಿಂಗ ಸ್ಮಾರಕ ಹಿಂದಿನ ಖಾಲಿ ಪ್ರದೇಶವನ್ನು ಸಂರಕ್ಷಿಸಲು ಅದರ ಸುತ್ತಮುತ್ತ ಕಾಂಪೌಂಡ್‌ ನಿರ್ಮಿಸಲಾಗು ತ್ತಿದೆ. ಕಮಲಾಪುರ ಪ್ರವಾಸಿ ಮಂದಿರ ಹಿಂದಿನ ಜಾಗ ರಕ್ಷಣೆಗೂ ಗೋಡೆ ನಿರ್ಮಿಸಲಾಗುತ್ತಿದೆ. ವಿರೂಪಾಕ್ಷ ದೇವ ಸ್ಥಾನದ ಬಿಷ್ಟಪ್ಪಯ್ಯ ಗೋಪುರಕ್ಕೆ ಕಟ್ಟಿಗೆ ಗಳಿಂದ ಮೆಟ್ಟಿಲುಗಳನ್ನು ನಿರ್ಮಿಸಿ ಕೊಂಡಿದ್ದು, ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿದೆ. ಅದೇ ರೀತಿ ಕೃಷ್ಣ ದೇವ ಸ್ಥಾನದ ಗೋಪುರ ಕೂಡ ಅಭಿವೃದ್ಧಿ ಪಡಿಸಲಾಗುತ್ತಿದೆ.

‘ಹಂಪಿಯಲ್ಲಿ ಮೂಲಸೌಕರ್ಯ ಕಲ್ಪಿಸುವುದು ಬಹಳ ಜರೂರಿನ ಕೆಲಸವಾಗಿತ್ತು. ತಡವಾಗಿಯಾದರೂ ಆ ಕೆಲಸ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗ ಬಹುದು’ ಎನ್ನುತ್ತಾರೆ ಪ್ರಾಧ್ಯಾಪಕ ರಮೇಶ.

* * 

ಹಂಪಿ ವಿಶ್ವ ಪಾರಂಪರಿಕ ತಾಣ. ದೇಶ–ವಿದೇಶಗಳಿಂದ ಪ್ರವಾಸಿ ಗರು ಬರುತ್ತಾರೆ. ಮೂಲ ಸೌಕರ್ಯ ಕಲ್ಪಿಸಿ, ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡುವುದು ಅವಶ್ಯಕವಾಗಿತ್ತು
ಕೆ. ಮೂರ್ತೇಶ್ವರಿ, ಪ್ರಭಾರ ಸೂಪರಿಟೆಂಡೆಂಟ್‌, ಎ.ಎಸ್‌.ಐ. ಹಂಪಿ ವೃತ್ತಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.