ADVERTISEMENT

‘ಶಿಷ್ಯವೇತನ ಹೆಚ್ಚಿಸುವವರೆಗೆ ಪ್ರತಿಭಟನೆ’

ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ: ರಾಜ್ಯದಾದ್ಯಂತ ವೈದ್ಯ ವಿದ್ಯಾರ್ಥಿಗಳ ಮುಷ್ಕರ ಆರಂಭ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 10:25 IST
Last Updated 1 ಸೆಪ್ಟೆಂಬರ್ 2015, 10:25 IST

ಬಳ್ಳಾರಿ: ಶಿಷ್ಯವೇತನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಎದುರು ಸೋಮವಾರದಿಂದ ಕಿರಿಯ ವೈದ್ಯ ಸಂಘದ ಸದಸ್ಯರು ಅನಿರ್ದಿಷ್ಟಾ ವಧಿ ಧರಣಿ–ಪ್ರತಿಭಟನೆ ಆರಂಭಿಸಿದರು.

ಆಸ್ಪತ್ರೆಯ ಆವರಣದಲ್ಲಿ ನೆರೆದ ನೂರಾರು ವಿದ್ಯಾರ್ಥಿಗಳು ಸೂಕ್ತ ಶಿಷ್ಯ ವೇತನವನ್ನು ಹೆಚ್ಚಿಸುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂಸ್ಥೆಯಲ್ಲಿ ಅಧ್ಯ ಯನ ಮಾಡುತ್ತಿರುವ ವಿದ್ಯಾರ್ಥಿಗಳು ಕರ್ನಾಟಕ ಅಸೋಸಿಯೇಷನ್‌ ಆಫ್‌ ರೆಸಿಡೆಂಟ್‌ ಡಾಕ್ಟರ್ಸ್‌ ಸಂಸ್ಥೆಯ ಸದಸ್ಯರಾ ಗಿದ್ದು, ಈ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಧರಣಿ ಹಮ್ಮಿಕೊಳ್ಳ ಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು 2011ರಲ್ಲಿ ಶಿಷ್ಯವೇತನವನ್ನು ₨ 14 ಸಾವಿರದಿಂದ ₨ 25 ಸಾವಿರಕ್ಕೆ ಹೆಚ್ಚಿಸಿತ್ತು. ಆದರೆ ಇದುವರೆಗೂ ಮತ್ತೆ ಹೆಚ್ಚಿಸಿಲ್ಲ. ಆ ಬಗ್ಗೆ ಸಲ್ಲಿಸಿದ ಮನವಿಗಳಿಗೂ ಸ್ಪಂದಿಸಿಲ್ಲ ಎಂದು ಅವರು ದೂರಿದರು. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಕಾಲೇಜು ಗಳ ಪ್ರವೇಶಾತಿ ಶುಲ್ಕವೂ ಹೆಚ್ಚಳವಾಗಿದೆ. ಶಿಷ್ಯ ವೇತನ ಸಾಕಾಗುತ್ತಿಲ್ಲ ಎಂದು ಅವರು ಆರೋಪಿಸಿದರು. 

ದೆಹಲಿ, ಮಹಾರಾಷ್ಟ್ರ, ಗುಜರಾತ್ ಇತರೆ ರಾಜ್ಯ ಗಳಿಗಿಂತಲೂ ಕರ್ನಾಟಕದಲ್ಲೆ ಅತ್ಯಂತ ಕಡಿಮೆ ಶಿಷ್ಯವೇತನವನ್ನು ನೀಡಲಾಗು ತ್ತಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ₨ 40 ಸಾವಿರ, ಸೂಪರ್‌ ಸ್ಪೆಷಾಲಿಟಿ ವಿದ್ಯಾ ರ್ಥಿಗಳಿಗೆ ₨ 50 ಸಾವಿರ ಮತ್ತು ಗೃಹ ವೈದ್ಯರಿಗೆ ₨ 20 ಸಾವಿರ ಶಿಷ್ಯವೇತನ ವನ್ನು ನೀಡಬೇಕು ಎಂದು ಒತ್ತಾಯಿಸಿದರು.

ರೋಗಿಗಳ ಪರದಾಟ: ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಧರಣಿ ಆರಂಭವಾಗುತ್ತಿದ್ದಂತೆ, ಆಸ್ಪತ್ರೆ ಯಲ್ಲಿ ರೋಗಿಗಳು ಚಿಕಿತ್ಸೆಗೆ ಪರದಾಡು ತ್ತಿದ್ದ ದೃಶ್ಯಗಳು ಕಂಡು ಬಂದವುು. ಪ್ರತಿ ನಿತ್ಯ ರೋಗಿಗಳ ತಪಾಸಣೆ, ಚಿಕಿತ್ಸೆ ನಡೆ ಸುತ್ತಿದ್ದ ವೈದ್ಯ ವಿದ್ಯಾರ್ಥಿಗಳು ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ್ದರಿಂದ ರೋಗಿಗಳ ಪರದಾಟ ತೀವ್ರವಾಗಿತ್ತು.

ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ರೋಹಿತ್ ಜುರಾಲಬಂಡ, ಡಾ.ಲಕ್ಷ್ಮಿ ನಾರಾಯಣರೆಡ್ಡಿ, ಡಾ.ಹರೀಶ್, ಡಾ. ಪುನೀತ್, ಡಾ.ನಂದೀಶ್, ಡಾ.ಪ್ರಸಾದ್, ಡಾ.ಪವಿತ್ರಾ, ಡಾ.ದೀಪ್ತಿ, ಡಾ.ಪ್ರೀತಿ ಧರಣಿಯ ನೇತೃತ್ವ ವಹಿಸಿದ್ದರು.

* ಕಿರಿಯ ವೈದ್ಯರು ಮುಷ್ಕರ ಹೂಡಿರು ವುದರಿಂದ ಏರ್ಪಟ್ಟಿರುವ ಸನ್ನಿವೇಶ ನಿಭಾಯಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗಿದೆ

ಶ್ರೀನಿವಾಸ್
ವಿಮ್ಸ್ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT