ADVERTISEMENT

‘ಸಾಲ ಸೌಲಭ್ಯ ಸದುಪಯೋಗವಾಗಲಿ’

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 7:06 IST
Last Updated 7 ಅಕ್ಟೋಬರ್ 2015, 7:06 IST

ಬಳ್ಳಾರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಉತ್ತಮ ಶ್ರೇಣಿಯ ಸ್ವಸಹಾಯ ಗುಂಪುಗಳನ್ನು ಗುರುತಿಸಿ ಸಾಲ ಸೌಲಭ್ಯ ನೀಡುವಂತೆ ಸಂಬಂಧಿಸಿದ ಬ್ಯಾಂಕುಗಳಿಗೆ ಶಿಫಾರಸು ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ  ಎಂದು ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ವಲಯದ ನಿರ್ದೇಶಕ ಕೆ.ಬೂದಪ್ಪಗೌಡ ವಿವರಿಸಿದರು.

ನಗರದ ಡಾ.ಜೋಳದರಾಶಿ ದೊಡ್ಡ ನಗೌಡ ರಂಗಮಂದಿರದಲ್ಲಿ ಮಂಗಳ ವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ, ಪ್ರಗತಿಕೃಷ್ಣಾ ಗ್ರಾಮೀಣ ಬ್ಯಾಂಕ್ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂ ಟದ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ವ ಉದ್ಯೋಗ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಾಭಿವೃದ್ಧಿ ಯೋಜನೆಯು ಸಂಘಗಳಿಗೆ ಸಾಲ ವಿತರಿಸುತ್ತದೆ ಎನ್ನುವುದು ತಪ್ಪು ಕಲ್ಪನೆ. ಯೋಜನೆಯು ಬ್ಯಾಂಕುಗಳ ಮತ್ತು ಸ್ವ ಸಹಾಯ ಗುಂಪುಗಳ ನಡುವೆ ಸೌಹಾರ್ದ ಭಾವನೆ ಮೂಡಿಸುವ ಕಾರ್ಯವನ್ನು ಮಾಡುತ್ತದೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುತ್ತಿದೆ’ ಎಂದು ತಿಳಿಸಿದರು.

ಜಿಲ್ಲೆಯ ಸ್ವಸಹಾಯ ಗುಂಪುಗಳ ಸದಸ್ಯೆಯರು ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಪಾವತಿಸಬೇಕು. ಆಗ ಮತ್ತಷ್ಟು ಸಾಲ ಸೌಲಭ್ಯ ಪಡೆಯಬಹುದಾಗಿದೆ. ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಯೋಜನೆಯು ಸೀಮಿತ ಬ್ಯಾಂಕುಗಳ ಜೊತೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಜಿಲ್ಲೆಯಲ್ಲಿ ಪ್ರಗತಿಕೃಷ್ಣಾ ಗ್ರಾಮೀಣ ಬ್ಯಾಂಕಿನ ಜೊತೆ ಗುರುತಿಸಿಕೊಳ್ಳಲಾಗಿದೆ ಎಂದರು.

‘ಯೋಜನೆಯು ರಾಜ್ಯದ 25 ಜಿಲ್ಲೆಗಳಲ್ಲಿ ಪ್ರಸ್ತುತವಾಗಿ ಕಾರ್ಯನಿರ್ವ ಹಿಸುತ್ತಿದ್ದು, ಸ್ವಸಹಾಯ ಗುಂಪುಗಳ ರಚನೆ, ಬ್ಯಾಂಕಿನೊಂದಿಗೆ ಸಂಪರ್ಕ ಸೇರಿ ಅನೇಕ ಯೋಜನೆಗಳ ಕುರಿತು ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

100 ಸ್ವಸಹಾಯ ಗುಂಪುಗಳ ಸದಸ್ಯರು ಪಾಲ್ಗೊಂಡಿದ್ದರು.  ಯಾಂತ್ರೀ ಕರಣ ಬಳಸಿ ಕುಟುಂಬದಲ್ಲಿ ಸ್ವ ಉದ್ಯೋಗ ಅಳವಡಿಕೆ ವಿಷಯ ಕುರಿತು ಸಿಂಡ್‌ ಗ್ರಾಮೀಣ ಸ್ವ ಉದ್ಯೋಗ ತರ ಬೇತಿ ಸಂಸ್ಥೆಯ ನಿರ್ದೇಶಕ ಎಂ.ಚಂದ್ರ ಶೇಖರ್, ರಾಜ್ಯ ಆಧಾರ ಫೌಂಡೇಷನ್ ಅಧ್ಯಕ್ಷ ಎನ್‌. ಜರ್ನಾದನರೆಡ್ಡಿ ಉಪ ನ್ಯಾಸ ನೀಡಿದರು.

ಯೋಜನೆಯ ನಿರ್ದೇಶಕ ವಿನಯ ಕುಮಾರ್, ಪ್ರಗತಿಕೃಷ್ಣಾ ಗ್ರಾಮೀಣ ಬ್ಯಾಂಕಿನ ಅಧಿಕಾರಿ ವಿನಾಯಕ ಕಾರ್ಯಕ್ರಮದ ಅಧ್ಯಕ್ಷತೆವ ಹಿಸಿದ್ದರು. ಜಿಲ್ಲಾ ಕೈಗಾರಿಕೆ ಕೇಂದ್ರದ ಉತ್ತೇಜನಾ ಧಿಕಾರಿ ಸಿ.ಕೆ.ನಾಗರಾಜ, ಅಶ್ವಿನಿ ಕಾಟನ್ ಜಿನ್ನಿಂಗ್ ಕಾರ್ಖಾನೆಯ ಮಾಲೀಕ ಕೆ.ಸಿ. ಸುರೇಶಬಾಬು, ಯೋಜನೆಯ ಸಿಬ್ಬಂದಿ ಶಂಕರಯ್ಯ, ಮಂಜಯ್ಯ, ಸೇವಾ ಪ್ರತಿನಿಧಿಗಳಾದ ಶಿವಲೀಲಾ, ಕೌಸರ್, ಏಸಯ್ಯ, ಸರಸ್ವತಿ, ನಾಗಮಣಿ, ಉಮಾ ದೇವಿ, ವೇದಾವತಿ, ಎಸ್‌್.ವಸಂತ್‌, ವಸಂತಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.