ADVERTISEMENT

ಅರ್ಚಕರಿಗೆ ಆಗಮಿಕ ತರಬೇತಿ: ಪರಿಶೀಲನೆ

ದೊಡ್ಡಬೆಳವಂಗಲ: ವಿದ್ಯಾರ್ಥಿ ವೇತನ ಹಾಗೂ ಹಿರಿಯ ಅರ್ಚಕರ ಸನ್ಮಾನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 5:42 IST
Last Updated 17 ಜುಲೈ 2017, 5:42 IST

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ‘ಅರ್ಚಕರಿಗೆ ಆಗಮಿಕ ತರಬೇತಿ ಮೊದಲಾದ ಉದ್ದೇಶಗಳಿಗಾಗಿ ಅರ್ಚಕರ ಆಗಮಿಕರ ಸಂಘದ ವತಿಯಿಂದ ನಿವೇಶನಕ್ಕೆ ಮನವಿ ಮಾಡಿರುವ ಕುರಿತಂತೆ ತಹಶೀಲ್ದಾರರ ಹಾಗೂ ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ತಾಲ್ಲೂಕು ಮುಜರಾಯಿ ದೇವಾಲ ಯಗಳ ಅರ್ಚಕರ ಆಗಮಿಕರ ಸಂಘದ ವತಿಯಿಂದ ತಾಲ್ಲೂಕಿನ ದೊಡ್ಡಬೆಳವಂ ಗಲದ ವೀರಭದ್ರಸ್ವಾಮಿ ಕಲ್ಯಾಣ ಮಂಟ ಪದಲ್ಲಿ ಭಾನುವಾರ ನಡೆದ ಅರ್ಚಕರ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮತ್ತು ವಿದ್ಯಾರ್ಥಿ ವೇತನ ಹಾಗೂ ಹಿರಿಯ ಅರ್ಚಕರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ  ಮಾತನಾಡಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅರ್ಚಕರ ಹಲವಾರು ಮನವಿಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಅರ್ಚಕರಿಗೆ ನೀಡಲಾ ಗುತ್ತಿದ್ದ ಹಣವನ್ನು ₹ 3 ರಿಂದ  4,000ಕ್ಕೆ ಏರಿಸಲಾಗಿದೆ’ ಎಂದು ಹೇಳಿದರು.

ADVERTISEMENT

ತಾಲ್ಲೂಕಿನಲ್ಲಿ ಎಲ್ಲಾ ವರ್ಗದ ಜನರಿಗೆ ವಿವಿಧ ಸೌಲಭ್ಯ ಹಾಗೂ ವಸತಿ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶ ದಲ್ಲಿನ ಅರ್ಚಕರು ನಿವೇಶನ ಹೊಂದಿ ದ್ದರೆ ಅವರಿಗೆ ಮನೆ ನೀಡಲಾಗುವುದು. ದೇವಾಲಯಗಳು ಅಭಿವೃದ್ಧಿಯಾಗಬೇಕಾದರೆ ಅರ್ಚಕರ ಪಾತ್ರವೂ ಮುಖ್ಯವಾಗಿದೆ ಎಂದು ಹೇಳಿದರು.

ಖಾನಿಮಠದ ಬಸವರಾಜ ಸ್ವಾಮಿ ಮಾತನಾಡಿ, ‘ಮಾನವ ಜನ್ಮ ಶ್ರೇಷ್ಠವಾ ಗಿದ್ದು ಸತ್ಕಾರ್ಯ, ಸೇವಾ ಕಾರ್ಯಗ ಳೊಂದಿಗೆ ಜಗತ್ತಿಗೆ ಒಳಿತನ್ನು ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕಿದೆ. ಸೇವಾ ಕಾರ್ಯಗಳನ್ನು ಮಾಡುವುದು ಸಹ ಭಗವಂತನ ಸಾಕ್ಷಾತ್ಕಾರ ಮಾಡಿ ಕೊಳ್ಳುವ ಹಾದಿಯಾಗಿದೆ’ ಎಂದು ಹೇಳಿದರು.

‘ನಮ್ಮ ಭಾರತೀಯ ಸಾಂಸ್ಕೃತಿಕ ಪರಂಪರೆ ವಿಶ್ವ ಶ್ರೇಷ್ಠವಾಗಿದೆ. ಈ ದಿಸೆ ಯಲ್ಲಿ  ಧಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ ಮಾತನಾಡಿ, ‘ಭಕ್ತರು ಹಾಗೂ ಭಗವಂತನ ನಡುವಿನ ಉತ್ತಮ ಬಾಂಧವ್ಯಕ್ಕೆ ಸೇತುವೆಯಾಗಿರುವ ಅರ್ಚಕ ವೃತ್ತಿ ಶ್ರೇಷ್ಠವಾಗಿದ್ದು, ಇದರ ಘನತೆಯನ್ನು ಎತ್ತಿ ಹಿಡಿಯಬೇಕಿದೆ ಎಂದರು.

ಖಾದಿ ಗ್ರಾಮೋದ್ಯೋಗ ಮಂಡಳಿ ಸದಸ್ಯ ಡಿ.ಜಿ. ರಾಜಗೋಪಾಲ್, ಅರ್ಚಕರ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್, ಮುಜರಾಯಿ ಇಲಾಖೆ ಅಧಿಕಾರಿ ಲೀಲಾವತಿ, ತಾಲ್ಲೂಕು ಮುಜರಾಯಿ ದೇವಾಲಯ ಅರ್ಚಕರ ಆಗಮಿಕರ ಸಂಘದ ಅಧ್ಯಕ್ಷ ಕೆ.ವಿ.ಸುರೇಶ್‌ಮೂರ್ತಿ, ಗೌರವ ಅಧ್ಯಕ್ಷ ಶ್ರೀನಿವಾಸರಾಘವನ್, ಉಪಾಧ್ಯಕ್ಷ ಶೇಷಾಚಾರ್, ಸೋಮಶೇಖರ ಆರಾಧ್ಯ, ನರಸಿಂಹ ಭಟ್ಟ, ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಗೋಪಿನಾಥ್, ಖಜಾಂಚಿ ರವಿ ಪ್ರಕಾಶ್, ಕಾರ್ಯದರ್ಶಿ ಶ್ರೀನಿವಾಸ್, ರಮೇಶ್, ಗೋಪಾಲಾಚಾರ್ ಇದ್ದರು.

***

ಅರ್ಚಕರು ಸಮಾಜದ ಒಳಿತನ್ನು ಬಯಸುವ ಮೂಲಕ ಇತರರಿಗೆ ಮಾದರಿಯಾಗಬೇಕಿದೆ. ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಕಲಿಸಬೇಕಿದೆ
–ಬಸವರಾಜ ಸ್ವಾಮಿ, ಖಾನಿಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.