ADVERTISEMENT

ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 8:47 IST
Last Updated 24 ಅಕ್ಟೋಬರ್ 2014, 8:47 IST

ದೇವನಹಳ್ಳಿ: ರಾಜ್ಯ ಸರ್ಕಾರ ಕಳೆದ ತಿಂಗಳಿಂದ ರಾಜ್ಯಾದ್ಯಂತ ಸರ್ಕಾರಿ ಭೂಮಿ ಅಕ್ರಮ ಒತ್ತುವರಿ ತೆರವು­ಗೊಳಿಸುವಂತೆ ಸ್ಪಷ್ಟ ಸೂಚನೆ ನೀಡಿ–ದ್ದರೂ ಗ್ರಾಮಾಂತರ ಜಿಲ್ಲಾಧಿಕಾರಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಪ್ರಜಾ­ವಿಮೋಚನಾ ಚಳುವಳಿ ರಾಜ್ಯಾ­ಧ್ಯಕ್ಷ ಆನೇಕಲ್ ಕೃಷ್ಣಪ್ಪ ಆರೋಪಿಸಿದರು.

ಭೂಮಿ ಬೆಲೆ ಏರುತ್ತಿರುವ ತಾಲ್ಲೂಕಿನಲ್ಲಿ ಬಲಾಡ್ಯರಿಗೆ ಸ್ಥಳಿಯ ಅಧಿ­ಕಾರಿಗಳು ಬೆಂಬಲ ನೀಡಿ ಕೋಟ್ಯಂ­ತರ ಮೌಲ್ಯದ ಸರ್ಕಾರಿ ಸ್ವತ್ತು ಕಬಳಿ­ಕೆಯಾಗುತ್ತಿದೆ. ಈಗಾಗಲೇ ನಗರ ಜಿಲ್ಲೆ­ಯಲ್ಲಿ ₨ 1500 ಕೋಟಿ ಮೌಲ್ಯದ ಒತ್ತುವರಿ ಭೂಮಿ ತೆರವುಗೊಳಿಸ­ಲಾ­ಗಿದೆ, ಆದರೆ ಗ್ರಾಮಾಂತರ ಜಿಲ್ಲಾ­ಧಿಕಾರಿ ಮೌನವಹಿಸಿರುವುದು ಅನು­ಮಾ­ನಕ್ಕೆ ಕಾರಣವಾಗಿದೆ. ಎ.ಟಿ.ರಾಮ­ಸ್ವಾಮಿ ವರದಿ ಅನ್ವಯ ಒತ್ತುವರಿ ತೆರುವುಗೊಳಿಸಿ ಕಠಿಣ ಕ್ರಮ ತೆಗೆದು­ಕೊಳ್ಳಬೇಕು ಎಂದು ಬುಧವಾರ ಪತ್ರಿಕಾ­ಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯಾದ್ಯಂತ ಪ್ರತಿ ಜಿಲ್ಲೆಗೆ ಎರಡು ಉಪವಿಭಾಗ ಕೇಂದ್ರ ಕಾರ್ಯ­ನಿರ್ವ­ಹಿಸುತ್ತಿವೆ, ಆದರೆ ಸರ್ಕಾರ ಇತ್ತೀಚೆ­ಗಷ್ಟೇ ನಗರದಲ್ಲಿದ್ದ ಉಪವಿಭಾಗ ಕೇಂದ್ರ ಕಚೇರಿಯನ್ನು ದೊಡ್ಡಬಳ್ಳಾ ­ಪುರಕ್ಕೆ ಸ್ಥಳಾಂತರಿಸಿದೆ ಆದರೆ, ಹೊಸ ­ಕೋಟೆ ತಾಲ್ಲೂಕಿನ ಜನತೆಗೆ ನಗರ ವ್ಯಾಪ್ತಿಗಿಂತ ಎರಡುಪಟ್ಟು ಉಪ­ವಿಭಾಗ ಕೇಂದ್ರ ದೂರದಲ್ಲಿದೆ. ಇದ­ರಿಂದ ರೈತರಿಗೆ, ದಲಿತರಿಗೆ ಅನಾನು­ಕೂಲವಾಗಿದೆ ಸರ್ಕಾರ ಕೂಡಲೇ ದೇವ­ನಹಳ್ಳಿಗೆ ಉಪವಿಭಾಗ ಕೇಂದ್ರ ಕಚೇರಿ ಆರಂಭಿಸಿ ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.

ಪಿ.ವಿ.ಸಿ ಜಿಲ್ಲಾ ಅಧ್ಯಕ್ಷ ದಾಸರಬೀದಿ ಮುರಳಿ ಮಾತನಾಡಿ, ಅಕ್ಟೋಬರ್ 27 ರಂದು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದೆಂದರು. ಪಿ.ವಿ.ಸಿ ತಾಲ್ಲೂಕು ಅಧ್ಯಕ್ಷ ಬುಳ್ಳಹಳ್ಳಿ ಗೋವಿಂದರಾಜು, ಮಹಿಳಾ ಘಟಕ ಉಪಾಧ್ಯಕ್ಷೆ ನಾಗವೇಣಿ ಮತ್ತು ಶೈಲಜಾ, ಪದ್ಮಶ್ರೀ, ಆಟೋ ಘಟಕ ಅಧ್ಯಕ್ಷ ಮುನಿಯಲ್ಲಪ್ಪ, ಬೆಂಗಳೂರು ನಗರ ಅಧ್ಯಕ್ಷ ಯಡುವನಹಳ್ಳಿ ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.