ADVERTISEMENT

ಕಲಾವಿದರಿಗೆ ಸೌಲಭ್ಯ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2014, 10:23 IST
Last Updated 1 ಅಕ್ಟೋಬರ್ 2014, 10:23 IST

ದೊಡ್ಡಬಳ್ಳಾಪುರ:  ಕಲೆಯನ್ನು ನಂಬಿ ಬದುಕುವುದು ದುಸ್ತರವಾಗುತ್ತಿದೆ. ಸರ್ಕಾರ ಕಲಾವಿದರಿಗೆ ಅಸಮಾನತೆ ತೋರದೇ ಹೆಚ್ಚಿನ ಅನುದಾನ ನೀಡ ಬೇಕಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಹೇಳಿದರು.

ನಗರದ ಪುರಭವನದಲ್ಲಿ ದೊಡ್ಡ ಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘದ ವತಿಯಿಂದ ನಡೆದ ದಶ ಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ನಗರದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಕಲಾವಿದರ ಒತ್ತಾಯ ವಿದ್ದರೂ ಇದುವರೆಗೆ ಆದ್ಯತೆ ನೀಡಿಲ್ಲ. ನಗರದಲ್ಲಿ ಅಸಂಖ್ಯಾತ ಕಲಾವಿದ ರಿ ದ್ದಾರೆ. ಕಲೆಯನ್ನೇ ನಂಬಿ ಬದುಕುತ್ತಿ ದ್ದಾರೆ. ಆದರೆ ಅವರಿಗೆ ಸೂಕ್ತ ಸೌಲ ಭ್ಯಗಳು ದೊರೆಯುತ್ತಿಲ್ಲ ಎಂದರು.

ನಗರದ ಡಾ.ರಾಜ್‌ಕುಮಾರ್ ಕಲಾಮಂದಿರದ(ಪುರಭವನ) ನವೀಕರ ಣಕ್ಕೆ ₨ ೭ಲಕ್ಷ ಮೀಸಲಿಟ್ಟಿದ್ದು, ಕಾಮ ಗಾರಿ ಆರಂಭಗೊಳ್ಳಲಿದೆ. ಸಾಂಸ್ಕೃತಿಕ ಚಟುವಟಿಕೆಗಳಿಗೆ ನಗರಸಭೆಯಿಂದ ಉತ್ತೇಜನ ನೀಡಲಾಗುವುದು ಎಂದರು.

ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಡಿ.ಸಂಜೀವ್‌ನಾಯಕ್ ಮಾತ ನಾಡಿದರು.  ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಎಸ್.ರಾಮಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯ ಕ್ರಮದಲ್ಲಿ ದತ್ತಾತ್ರೇಯ ಆಶ್ರಮದ ಆನಂದ ಭಾರತಿ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್‌  ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಶ್ರೀಕಾಂತ, ಗೌ. ಅಧ್ಯಕ್ಷ ಕೆ.ಆರ್. ರವಿಕಿರಣ್, ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಕೆ.ಎಸ್. ರಾಮಾಂಜಿನಪ್ಪ, ತಾಲ್ಲೂಕು ಕಲಾ ವಿದರ ಸಂಘದ ಗೌ.ಅಧ್ಯಕ್ಷ ಎನ್.ಗುರು ಮಲ್ಲಪ್ಪ, ಉಪಾಧ್ಯಕ್ಷರಾದ ವೆಂಕಟ ರಾಜು, ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಚಂದ್ರ ಶೇಖರ್ ,ಖಜಾಂಚಿ ವೆಂಕಟೇಶ್, ಮುನಿ ಪಾಪಯ್ಯ, ಪ್ರಕಾಶ್‌ರಾವ್  ಹಾಗೂ ಇತರರು ಈ  ಸಂದರ್ಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.