ADVERTISEMENT

ಗ್ರಾ ಪಂ: ನೂರು ಸೇವಾ ಯೋಜನೆ

ಜನ ಸಂಪರ್ಕ ಸಭೆಯಲ್ಲಿ 6 ಸಾವಿರ ಪೋಡಿ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 10:00 IST
Last Updated 26 ಜುಲೈ 2016, 10:00 IST
ದೇವನಹಳ್ಳಿ  ತಾಲ್ಲೂಕು ಕಸಬಾ ಹೊಬಳಿ ಬೊಮ್ಮವಾರ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ಉದ್ಘಾಟಿಸಿದರು .ಜಿಪಂ ಉಪಾಧ್ಯಕ್ಷೆ ಅನಂತಕುಮಾರಿ , ಜಿಪಂ ಸದಸ್ಯ ಕೆಸಿ ಮಂಜುನಾಥ್, ರಾಧಮ್ಮ ಮುನಿರಾಜು ಇದ್ದರು .
ದೇವನಹಳ್ಳಿ ತಾಲ್ಲೂಕು ಕಸಬಾ ಹೊಬಳಿ ಬೊಮ್ಮವಾರ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ಉದ್ಘಾಟಿಸಿದರು .ಜಿಪಂ ಉಪಾಧ್ಯಕ್ಷೆ ಅನಂತಕುಮಾರಿ , ಜಿಪಂ ಸದಸ್ಯ ಕೆಸಿ ಮಂಜುನಾಥ್, ರಾಧಮ್ಮ ಮುನಿರಾಜು ಇದ್ದರು .   

ದೇವನಹಳ್ಳಿ: ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ನಾಲ್ಕು ಹೋಬಳಿವಾರು ಜನ ಸಂಪರ್ಕ ಸಭೆಯಲ್ಲಿ ಒಟ್ಟು ಆರು ಸಾವಿರ ಪೋಡಿ ಪ್ರಕರಣದಲ್ಲಿ ತಿದ್ದುಪಡಿಯಾಗಿವೆ ಎಂದು ಪ್ರಭಾರ ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.

ತಾಲ್ಲೂಕಿನ ಕಸಬಾ ಹೊಬಳಿ ಜನ ಸಂಪರ್ಕ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಪಹಣಿ ತಿದ್ದು ಪಡಿ ತಹಶೀಲ್ದಾರ್ ಮಾಡುವಂತೆ ಸರ್ಕಾರದಿಂದ ಅದೇಶ ಬಂದಿದೆ, ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಹಣಿ ವಿತರಣೆ ಸೇರಿದಂತೆ ವಿವಿಧ ದಾಖಲಾತಿ ಪಡೆಯಲು ನೂರು ಸೇವಾ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಇಂಡಿಕರಣ ಮಾಡಲಾಗುತ್ತಿದ್ದು ಗಣಕ ಯಂತ್ರ ನಿರ್ವಾಹಕರ ಕೊರತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ.

ಅಹಾರ ಪಡಿತರ ಇಲಾಖೆಯಲ್ಲಿ ಅರ್ಹರು ಬಯೋಮೆಟ್ರಿಕ್‌ನಲ್ಲಿ ಹೊಂದಾಣಿಕೆ ಮಾಡದೆ ಇರುವವರು ಮಾತ್ರ ಪಡಿತರ ವಿತರಣೆಯಿಂದ ಹೊರ ಉಳಿಯಲಿದ್ದಾರೆ.
2012ಕ್ಕಿಂತ ಮೊದಲು ಸರ್ಕಾರದ ಯಾವುದೇ ಜಾಗದಲ್ಲಿ ಅಕ್ರಮ ಮನೆ ಕಟ್ಟಿದರೆ 94ಸಿ ಪ್ರಕಾರ ಸಕ್ರಮಕ್ಕೆ ಅವಕಾಶವಿದೆ ಎಂದರು.

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಜನಸಂಪರ್ಕ ಸಭೆ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ, ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಚುನಾಯಿತ ಸದಸ್ಯರು ಒಂದು ಕುಟುಂಬವಿದ್ದಂತೆ ಸಾಮರಸ್ಯದಿಂದ ಸಮಸ್ಯೆ ನಿವಾರಿಸಿದಾಗ ಪರಿಹಾರ ಕಂಡುಕೊಳ್ಳಲು ಸಾಧ್ಯ.

ಬರಿ ಪಂಚಾಯಿತಿ ಕಚೇರಿಗೆ ಅಧಿಕಾರಿಗಳು ಸೀಮಿತವಲ್ಲ. ಇಲಾಖೆವಾರು ಅಧಿಕಾರಿಗಳು ಜನಸಂಪರ್ಕ ಸಭೆಯಲ್ಲಿ ಇಲಾಖೆ ಮಾಹಿತಿ ನೀಡಿದರೆ ಸಾಲದು, ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅವರು ಹೇಳಿದರು.

ಜಿಪಂ ಸದಸ್ಯ ಕೆಸಿ ಮಂಜುನಾಥ್ ಮಾತನಾಡಿ ಕೃಷಿ ಮತ್ತು ತೊಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಯಾವುದೆ ಇಲಾಖೆಯ ಪ್ರೋತ್ಸಾಹದಾಯಕ ಯೊಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲದಿದ್ದರೆ ಹೇಗೆ ? ಎಂದರು.

ಜಿಪಂ ಉಪಾಧ್ಯಕ್ಷೆ ಅನಂತಕುಮಾರಿ ಮತ್ತು ತಾಪಂ ಅಧ್ಯಕ್ಷೆ ಭಾರತಿ ಲಕ್ಷಣ್ ಗೌಡ ಮಾತನಾಡಿ ತಾಲ್ಲೂಕಿನಲ್ಲಿ ಶೌಚಾಲಯ ನಿರ್ಮಾಣದ ಗುರಿ ಸಾಧಿಸಲು ಸಾಕಷ್ಟು ವಿಳಂಬವಾಗುತ್ತಿದೆ ಶೌಚಾಲಯವಿದ್ದರೆ ನೀರಿಲ್ಲ, ನೀರಿದ್ದರೆ ಶೌಚಾಲಯಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಜಿಪಂ ಸದಸ್ಯೆ ರಾಧಮ್ಮ ಮುನಿರಾಜು, ತಾಪಂ ಉಪಾಧ್ಯಕ್ಷೆ ನಂದಿನಿ ವೆಂಕಟೇಶ್, ಗ್ರಾಪಂ ಅಧ್ಯಕ್ಷ ರಾಮಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೈಲಜಾ ಜಗದೀಶ್, ಟಿಎಪಿಸಿಎಸ್ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಕೋಡಿ ಮಂಚೇನಹಳ್ಳಿ ನಾಗೇಶ್, ಎಂಪಿಸಿಎಸ್ ಅಧ್ಯಕ್ಷ ಶಿವರಾಮಯ್ಯ ಮತ್ತಿತರರು ಇದ್ದರು.

***
ಬರಿ ಜನಸಂಪರ್ಕ ಸಭೆ ನಡೆಸಿ ಪ್ರಯೊಜನವೇನು ? ಇಲಾಖಾವಾರು ಸಂಪೂರ್ಣ ಮಾಹಿತಿ ಗ್ರಾಮ ಪಂಚಾಯಿತಿ ಕಚೇರಿ ನಾಮಫಲಕದಲ್ಲಿ   ಅಳವಡಿಸಿ,ಇಲ್ಲದಿದ್ದರೆ ನಾವೇ ಅಳವಡಿಸುತ್ತೇವೆ.
-ಕೆ,ಸಿ. ಮಂಜುನಾಥ, ಜಿ.ಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.