ADVERTISEMENT

‘ಜನರಲ್ಲಿ ಧರ್ಮಜಾಗೃತಿ ಮೂಡಿಸಿ’

​ಪ್ರಜಾವಾಣಿ ವಾರ್ತೆ
Published 26 ಮೇ 2017, 10:23 IST
Last Updated 26 ಮೇ 2017, 10:23 IST
ಆನೇಕಲ್‌ನ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯ ಟ್ರಸ್‌್ಟ ವತಿಯಿಂದ ಗುರುವಾರ ಆಯೋಜಿಸಿದ್ದ ಜನ ಜಾಗೃತಿ ಧರ್ಮ ಸಮಾವೇಶವನ್ನು ರಾಜಾಪುರ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ಆನೇಕಲ್‌ನ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯ ಟ್ರಸ್‌್ಟ ವತಿಯಿಂದ ಗುರುವಾರ ಆಯೋಜಿಸಿದ್ದ ಜನ ಜಾಗೃತಿ ಧರ್ಮ ಸಮಾವೇಶವನ್ನು ರಾಜಾಪುರ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ಆನೇಕಲ್‌: ‘ಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಇಂದಿನ ಸಮಾಜ ಮೌಲ್ಯಗಳಿಂದ ದೂರ ಸರಿಯುತ್ತಿದೆ. ಹಾಗಾಗಿ ಉತ್ತಮ ಸಮಾಜ ರ್ಮಾಣ ಮಾಡಲು ಸೂಕ್ತ ಸನ್ನಿವೇಶ ಕಲ್ಪಿಸಿಕೊಡುವ ಅವಶ್ಯಕತೆ ಇದೆ’ ಎಂದು ರಾಜಾಪುರ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯ ಟ್ರಸ್‌್ಟ ವತಿಯಿಂದ ಆಯೋಜಿಸಿದ್ದ 114ನೇ ಮಾಸಿಕ ಅಮಾವಾಸ್ಯೆ ಕಾರ್ಯಕ್ರಮದಲ್ಲಿ ಇಷ್ಟ ಲಿಂಗ ಶಿವಪೂಜಾ ಹಾಗೂ ಜನ ಜಾಗೃತಿ ಧರ್ಮ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದರು.

ಮಕ್ಕಳು ಮನೆಯಲ್ಲಿ ಹಾಗೂ ಪರಿಸರದಲ್ಲಿ ದೊರೆತ ವಾತಾವರಣದಂತೆ ಅವರು ಜೀವನ ರೂಪಿಸಿಕೊಳ್ಳುತ್ತಾರೆ. ಹಾಗಾಗಿ ಸತ್ಸಂಗ, ಧಾರ್ಮಿಕ ಸಭೆಗಳು, ಪೂಜೆ, ಪ್ರಾರ್ಥನೆಯಂತಹ ಕಾರ್ಯಕ್ರಮಗಳಲ್ಲಿ ಪೋಷಕರು ಮಕ್ಕಳೊಂದಿಗೆ ಭಾಗಿಗಳಾಗಬೇಕು. ಇದರಿಂದ ಅವರಲ್ಲಿ ಸಂಸ್ಕಾರ ಬೆಳೆಯುತ್ತದೆ ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್. ರಾಮಮೂರ್ತಿ ಮಾತನಾಡಿ, ಅಮಾವಾಸ್ಯೆ ಕತ್ತಲಿನ ಪ್ರತೀಕ. ಅಮಾವಾಸ್ಯೆ ಸಂದರ್ಭದಲ್ಲಿ ಜನರಲ್ಲಿನ ಕತ್ತಲನ್ನು ದೂರ ಮಾಡಿ ಬೆಳಕಿನ ದೀವಿಗೆಯನ್ನು ಹಚ್ಚುವ ಕಾರ್ಯ ಜನಜಾಗೃತಿ ಧರ್ಮ ಸಮಾವೇಶವಾಗಿದೆ. ಈ ಕಾರ್ಯವನ್ನು 114 ತಿಂಗಳಿನಿಂದಲೂ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ಟ್ರಸ್‌್ಟ ನಡೆಸಿಕೊಂಡು ಬಂದಿರುವುದು ದಾಖಲೆಯಾಗಿದೆ ಎಂದರು.

ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ಟ್ರಸ್‌್ಟ ಅಧ್ಯಕ್ಷ ಜಯರಾಜ್ ಮಾತನಾಡಿ, ₹ 4.5 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜನರ ಸಹಕಾರದಿಂದ ದೇವಾಲಯದಲ್ಲಿ ನಿತ್ಯ ದಾಸೋಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ದೇವಾಲಯ ಟ್ರಸ್‌್ಟನ ಉಪಾಧ್ಯಕ್ಷ ವೆಂಕಟಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಕೆ.ಗವಿರಂಗಯ್ಯ, ಟ್ರಸ್‌್ಟನ ನಿರ್ದೇಶಕರಾದ ಕೆ.ಆರ್.ರುದ್ರಾರಾಧ್ಯ, ಆರ್.ಪರಮಶಿವಯ್ಯ, ಆರ್.ನಿರಂಜನ್, ಎಚ್.ಎಸ್.ನಂಜಣ್ಣ, ನಿವೃತ್ತ ಮುಖ್ಯೋಪಾಧ್ಯಾಯ ಕೆ.ಮಾದಯ್ಯ, ದೊಡ್ಡಕುಂಟೆ ಗ್ರಾಮದ ಇ.ಪಾಪಯ್ಯರೆಡ್ಡಿ ಮತ್ತಿತರರು  ಹಾಜರಿದ್ದರು. ಸಾಮೂಹಿಕ ಅಷ್ಟೋತ್ತರ ಸೇವೆ ಹಾಗೂ ರಾಜಾಪುರ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿಗಳಿಂದ ಇಷ್ಟಲಿಂಗ ಶಿವಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

* *

ಬಾಲ್ಯದಿಂದಲೇ ಮೌಲ್ಯ ಹಾಗೂ ಧಾರ್ಮಿಕ ಭಾವನೆ ಬೆಳೆಸಬೇಕು. ಭಾರತೀಯ ಪರಂಪರೆ ಅತ್ಯಂತ ಪವಿತ್ರವಾದುದ್ದು ಹಾಗೂ ಪುರಾತನವಾದುದ್ದು
ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ,
ರಾಜಾಪುರ ಸಂಸ್ಥಾನ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.