ADVERTISEMENT

ದೊಡ್ಡಬಳ್ಳಾಪುರ: ಎಂ.ಟೆಕ್ ಪದವೀಧರೆ ರಾಜಕೀಯಕ್ಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 10:50 IST
Last Updated 10 ಫೆಬ್ರುವರಿ 2016, 10:50 IST

ದೊಡ್ಡಬಳ್ಳಾಪುರ: ರಾಜಕೀಯಕ್ಕೆ ವಿದ್ಯಾವಂತರು ಬರಬೇಕು.ಆಗ ಮಾತ್ರ ಒಂದಿಷ್ಟು ಸುಧಾರಣೆ ಸಾಧ್ಯ ಎನ್ನುವ ಮಾತುಗಳು ಈಗ ಬದಲಾಗುತ್ತಿದೆ. ತಾಲ್ಲೂಕಿನ ದೊಡ್ಡಬೆಳವಂಗಲ ಜಿಲ್ಲಾ ಪಂಚಾಯಿತಿಯ ಅನುಸೂಚಿತ ಜಾತಿ ಮಹಿಳಾ ಮೀಸಲು ಕ್ಷೇತ್ರಕ್ಕೆ ಎಂ.ಟೆಕ್‌ ಪದವಿಧರೆ ಅಶ್ವಿನಿ ಓಬದೇನಹಳ್ಳಿ ಮುನಿಯಪ್ಪ ಈ ಬಾರಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣ ಕಣದಲ್ಲೇ ಅತಿ ಚಿಕ್ಕ ವಯಸ್ಸಿನ(26 ವರ್ಷ) ಅಭ್ಯರ್ಥಿಯಾಗಿರುವ ಅಶ್ವಿನಿ ಇದೇ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.ಇವರ ತಾಯಿ ಲೀಲಾವತಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತಂದೆ ಕೆ.ಮುನಿಯಪ್ಪ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದಾರೆ.

‘ಕುಟುಂಬದವರ ಆಸೆಯಿಂದ ರಾಜಕೀಯಕ್ಕೆ ಬರಲಿಲ್ಲ, ಇಷ್ಟ ಪಟ್ಟು ರಾಜಕೀಯಕ್ಕೆ ಬಂದಿದ್ದೇನೆ. ಅಪ್ಪ, ಅಮ್ಮ ಅವರ ಜೊತೆಯಲ್ಲಿ ರಾಜಕೀಯ ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದೆ. ಸಮಾಜ ಸೇವೆ ಮಾಡಬೇಕು ಎನ್ನುವ ಆಸೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ವಿದ್ಯಾವಂತರು ಅವಕಾಶಗಳನ್ನು ಗಟ್ಟಿಸಿಕೊಂಡು ಸಕ್ರಿಯ ರಾಜಕೀಯಕ್ಕೆ ಬರಬೇಕು ಆಗ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಹಾಗೂ ಪ್ರಜಾಪ್ರಭುತ್ವದ ಆಶಯಗಳು ಈಡೇರಲು ಸಾಧ್ಯ’ಎನ್ನುತ್ತಾರೆ ಅಶ್ವಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.