ADVERTISEMENT

ದೊಡ್ಡಬಳ್ಳಾಪುರ: ಸರಣಿ ಕಳವು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 8:56 IST
Last Updated 6 ಫೆಬ್ರುವರಿ 2017, 8:56 IST

ದೊಡ್ಡಬಳ್ಳಾಪುರ: ನಗರದ ಹೊರವಲಯದ ಪಾಲನಜೋಗಿಹಳ್ಳಿ ಬಳಿ ಶನಿವಾರ ಒಂದೇ ದಿನ ರಾತ್ರಿ ಅಂಗಡಿಗಳಲ್ಲಿ ಸರಣಿ ಕಳ್ಳತನಗಳು ನಡೆದಿದ್ದು, ಸಾರ್ವಜನಿಕರು ಆತಂಕಗೊಳ್ಳುವಂತಾಗಿದೆ.

ನಗರದ ಪಾಲನಜೋಗಳ್ಳಿಯ ಮೂರು ಅಂಗಡಿಯಲ್ಲಿ ಕಳ್ಳತನವಾಗಿದ್ದು, ಪಾಟೀಲ್ ಎಂಬುವವರಿಗೆ ಸೇರಿದ ‘ಜಸ್ಟ್ ಇನ್ ಫ್ಯಾಷನ್’ ಬಟ್ಟೆ ಅಂಗಡಿಯಲ್ಲಿ ಸುಮಾರು ಒಂದು ಲಕ್ಷ ಮೌಲ್ಯದ ಬಟ್ಟೆ ಕಳ್ಳತನವಾಗಿದೆ.

ಸ್ಕಂದ ಶ್ರೀ ಮೆಡಿಕಲ್ ಸ್ಟೋರ್ ಅಂಗಡಿಯಲ್ಲಿ ₹ 2 ಸಾವಿರ  ಕಳ್ಳತನವಾಗಿದೆ. ವೀರಭದ್ರಸ್ವಾಮಿ ಪ್ರಾವಿಜನ್ ಸ್ಟೋರ್ ನಲ್ಲಿ ಸಿಗರೇಟ್ ಪ್ಯಾಕ್ ಗಳು, ಚಿಲ್ಲರೆ ಸೇರಿ ಸುಮಾರು ಎರಡು ಸಾವಿರ ಹಣ ಕಳ್ಳತನವಾಗಿದೆ. ಮೇಲಿನ ಮೂರು ಅಂಗಡಿಗಳು ಅಕ್ಕ ಪಕ್ಕದಲ್ಲಿದ್ದು  ದುಷ್ಕರ್ಮಿಗಳು ಅಂಗಡಿಯ ಬಾಗಿಲುಗಳನ್ನು ಮುರಿದು ಒಳ ನುಗ್ಗಿ ಕಳ್ಳತನ ಮಾಡಿದ್ದಾರೆ.

ಹುರುಳಿಕಾಯಿಗೆ ಬೆಂಕಿ: ತಾಲೂಕಿನ ಅರಳುಮಲ್ಲಿಗೆ ಗ್ರಾಮದ ಹೊರವಲಯದಲ್ಲಿ ಕಣ ಮಾಡಲು ಒಣ ಹಾಕಿದ್ದ ಹುರುಳಿ ಕಾಯಿ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಲಕ್ಷಾಂತರ ರೂಪಾಯಿಯ  ಫಸಲು ನಷ್ಟವಾಗಿರುವ ಘಟನೆ ನಡೆದಿದೆ.

ರೈತ ನರಸಪ್ಪ ಎರಡು ಎಕರೆ ಜಮೀನಿನಲ್ಲಿ ಸುಮಾರು ಒಂದೂ ಕಾಲು ಲಕ್ಷ ಖರ್ಚು ಮಾಡಿ ಹುರುಳಿ ಕಾಯಿ ಬೆಳೆದಿದ್ದಾರೆ.  ಶನಿವಾರ ರಾತ್ರಿ ದುಷ್ಕರ್ಮಿಗಳು ಬೆಳೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.