ADVERTISEMENT

ಪಡಿತರ ಅವ್ಯವಸ್ಥೆ: ಗ್ರಾಹಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 8:53 IST
Last Updated 8 ಫೆಬ್ರುವರಿ 2017, 8:53 IST

ದೊಡ್ಡಬಳ್ಳಾಪುರ:  ಎರಡು ತಿಂಗಳಿನಿಂದ ಸಮರ್ಪಕವಾಗಿ ಪಡಿತರ ವಿತರಿಸುತ್ತಿಲ್ಲ ಎಂದು ಆರೋಪಿಸಿ ತೂಬಗೆರೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ತೂಬಗೆರೆ ನ್ಯಾಯಬೆಲೆ ಅಂಗಡಿಯ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪಡಿತರ ಗ್ರಾಹಕರು, ಎರಡು ತಿಂಗಳಿಂದ ರೇಷನ್ ಕೊಡದೆ ಸತಾಯಿಸುತ್ತಿದ್ದು ತೂಬಗೆರೆ ಗ್ರಾಮದಲ್ಲಿ ಸುಮಾರು  3850 ಪಡಿತರ ಕಾರ್ಡ್ ಗಳಿವೆ. ಆದರೆ ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿದರು.

ದಿನಾಂಕ 10 ರವರೆಗೆ ಪಡಿತರ ನೀಡುವಂತೆ ಸೂಚಿಸಿದ್ದರೂ ತಮಗಿಷ್ಟ ಬಂದ ವೇಳೆ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ವರ್ಷದಲ್ಲಿ ಎರಡು ತಿಂಗಳು ಪಡಿತರ ಕೊಡುವುದಿಲ್ಲ, ಇದನ್ನು ಪ್ರಶ್ನೆ ಮಾಡಿದರೆ ಪೊಲೀಸ್ ಕರೆಯಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪಡಿತರದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.