ADVERTISEMENT

ಮಳೆಯಿಂದ ತುಂಬಿದ ಕೆರೆಗಳು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 9:59 IST
Last Updated 11 ಸೆಪ್ಟೆಂಬರ್ 2017, 9:59 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕರಾಯಪ್ಪನಹಳ್ಳಿ ಕೆರೆ ಮುಕ್ಕಾಲು ಭಾಗ ತುಂಬಿದೆ
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕರಾಯಪ್ಪನಹಳ್ಳಿ ಕೆರೆ ಮುಕ್ಕಾಲು ಭಾಗ ತುಂಬಿದೆ   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಒಂದು ವಾರಗಳಿಂದ ಬೀಳುತ್ತಿದ್ದ ಮಳೆ ಎರಡು ದಿನಗಳಿಂದ ಚುರುಕಾಗಿದ್ದು ಕೆರೆ ಕುಂಟೆಗಳಿಗೆ ನೀರು ತುಂಬಲು ಆರಂಭವಾಗಿವೆ.ಬೆಟ್ಟದ ತಪ್ಪಲಿನ ತೂಬಗೆರೆ ಹೋಬಳಿಯ ಚಿಕ್ಕರಾಯಪ್ಪನಹಳ್ಳಿ, ಸಾಸಲು ಹೋಬಳಿಯ ಗುಂಡಮಗೆರೆ ಕೆರೆ, ಮಧುರೆ ಹೋಬಳಿಯ ಕನಸವಾಡಿ ಕೆರೆ ಸೇರಿದಂತೆ ಸಣ್ಣ ಪುಟ್ಟ ಕೆರೆಗಳಿಗು ನೀರು ಹರಿದು ಬರಲು ಆರಂಭವಾಗಿವೆ.

ತಾಲ್ಲೂಕಿನ ಚಿಕ್ಕರಾಯಪ್ಪನಹಳ್ಳಿ ಸಮೀಪದ ಚನ್ನರಾಯಸ್ವಾಮಿ ಬೆಟ್ಟದಲ್ಲಿ ನೀರಿನ ಝರಿಗಳು ಹರಿಯಲು ಪ್ರಾರಂಭವಾಗಿದ್ದು ಜನರಲ್ಲಿ ಹರ್ಷ ಮೂಡಿದೆ. ಮಳೆ ಬಿದ್ದು ಕೆರೆಗಳಿಗೆ ನೀರು ಬರುತ್ತಿರುವ ರೈತರಲ್ಲಿ ಸಂತಸ ಮೂಡಿಸಿದೆ. ಆದರೆ, ಸತತ ಮಳೆಯಿಂದ ಇತ್ತೀಚೆಗಷ್ಟೇ ಬಿತ್ತನೆಯಾಗಿದ್ದ ರಾಗಿ ಪೈರು ಕೊಳೆಯುತ್ತಿದೆ.

ಮುಸುಕಿನ ಜೋಳದಲ್ಲಿ ಕಳೆ ಬೆಳೆದುಕೊಂಡು ಜೋಳ ಸೊರಗುವಂತಾಗಿದೆ. ಇದು ರೈತರಲ್ಲಿ ಆತಂಕವನ್ನು ಮೂಡಿಸಿದೆ ಎನ್ನುತ್ತಾರೆ ದೊಡ್ಡಬೆಳವಂಗಲ ಗ್ರಾಮದ ರೈತ ರಾಮಕೃಷ್ಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.