ADVERTISEMENT

ಮೂಢನಂಬಿಕೆಯಿಂದ ಚಿಕಿತ್ಸೆಗೆ ಹಿಂದೇಟು

ಪ್ರತಿವರ್ಷ 90 ಲಕ್ಷ ಜನರಿಗೆ ಕ್ಷಯರೋಗ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:47 IST
Last Updated 22 ಮಾರ್ಚ್ 2017, 9:47 IST
ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ದೊಡ್ಡಬಳ್ಳಾಪುರ ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾರ  ಜಾಗೃತಿ ಜಾಥಾ ನಡೆಸಲಾಯಿತು
ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ದೊಡ್ಡಬಳ್ಳಾಪುರ ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಜಾಗೃತಿ ಜಾಥಾ ನಡೆಸಲಾಯಿತು   

ದೊಡ್ಡಬಳ್ಳಾಪುರ: ಇದೇ 24ರಂದು ಆಚರಿಸಲಿರುವ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ  ಕ್ಯಾಥೋಲಿಕ್ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಜಾಗೃತಿ ಜಾಥಾ ನಡೆಸಲಾಯಿತು.

ಜಿಲ್ಲಾ ಕ್ಷಯರೋಗ ಕೇಂದ್ರ ಸಂಯೋಜಕ ಅಮರೇಶ್ ಈ ಸಂದರ್ಭದಲ್ಲಿ ಮಾತನಾಡಿ, ಪ್ರತಿ ವರ್ಷ ಮಾರ್ಚ್ 24ರಂದು ವಿಶ್ವ ಕ್ಷಯರೋಗ ದಿನವನ್ನು ಆಚರಿಸಲಾಗುತ್ತಿದೆ. ಈ ಬಗ್ಗೆ ಭಾರತದಲ್ಲಿ ಇನ್ನೂ ಜನರಲ್ಲಿ ಜಾಗೃತಿ ಇಲ್ಲ. ಮೂಢನಂಬಿಕೆಯಿಂದಾಗಿ ಬಹುತೇಕ ಜನರು ರೋಗದ ಗುಣಲಕ್ಷಣಗಳು ಕಂಡರೂ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ ಎಂದರು.

ಪ್ರತಿ ವರ್ಷ 90 ಲಕ್ಷ ಜನರಿಗೆ ಈ ರೋಗ ತಗಲುತ್ತದೆ. ಇವರಲ್ಲಿ ಶೇ 25 ರಷ್ಟು ಭಾರತೀಯರು ಎನ್ನುವುದು ಆತಂಕದ ವಿಷಯ. ಆದ್ದರಿಂದ ಈ ಕುರಿತು ನಾವು ಎಚ್ಚರಿಕೆ ಮತ್ತು ಜಾಗೃತಿಯನ್ನು ಮಾಡಬೇಕಿದೆ ಎಂದರು.

ಕ್ಷಯರೋಗದ ಚಿಕಿತ್ಸೆ ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಡಾಟ್ಸ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.  ನಿಮ್ಮ ಸುತ್ತಮುತ್ತಲಿನ ಕ್ಷಯ ರೋಗದ ಲಕ್ಷಣಗಳುಳ್ಳವವರನ್ನು ಹತ್ತಿರದ ಸೂಕ್ಷ್ಮ ದರ್ಶಕ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಬೇಕಿದೆ ಎಂದರು.

ಜಾಥಾದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಕೀಲಾ, ಡಾ.ಗಿರೀಶ್, ವಿಕಾಸ ಸಂಸ್ಥೆಯ ಗೌರಿಶಂಕರ, ಮುಸ್ತಾಫಾ, ಚಂದ್ರಶೇಖರಗೌಡ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.