ADVERTISEMENT

‘ಮೈಸೂರು ದಸರಾ ಸಾಂಸ್ಕೃತಿಕ ಪರಂಪರೆಯ ಪ್ರತೀಕ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 10:04 IST
Last Updated 23 ಸೆಪ್ಟೆಂಬರ್ 2017, 10:04 IST
ಮಾಗಡಿ ಕೊಟ್ಟಣಗೇರಿ ಬೀದಿಯಲ್ಲಿ ಹಿರಿಯ ಕಲಾವಿದೆ ಜಯಮ್ಮ ಕುಂಬಯ್ಯ ದಸರಾ ಬೊಂಬೆಗಳ ಪ್ರದರ್ಶನ ಉದ್ಘಾಟಿಸಿದರು
ಮಾಗಡಿ ಕೊಟ್ಟಣಗೇರಿ ಬೀದಿಯಲ್ಲಿ ಹಿರಿಯ ಕಲಾವಿದೆ ಜಯಮ್ಮ ಕುಂಬಯ್ಯ ದಸರಾ ಬೊಂಬೆಗಳ ಪ್ರದರ್ಶನ ಉದ್ಘಾಟಿಸಿದರು   

ಮಾಗಡಿ: ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ ಎಂದು ಹಿರಿಯ ಕಲಾವಿದೆ ಜಯಮ್ಮ ಕುಂಬಯ್ಯ ತಿಳಿಸಿದರು.
ದಸರಾ ಹಬ್ಬದ ಅಂಗವಾಗಿ ಬೊಂಬೆಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ದಸರಾ ಬೊಂಬೆಗಳ ಪ್ರದರ್ಶನದಿಂದ ಮಾನಸಿಕ ಮತ್ತು ಆಧ್ಯಾತ್ಮಿಕ ನೆಮ್ಮದಿ ಸಿಕ್ಕಿದೆ. ಪ್ರತಿನಿತ್ಯ ಪಟ್ಟಣದ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಬಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ರಾಜನ ದರ್ಬಾರ್‌ ಬೊಂಬೆಗಳು, ರಾಮಸೀತೆಯರ ಬೊಂಬೆಗಳ ಜೊತೆಗೆ ಕೆಂಪೇಗೌಡರ ಕಾಲದ ಮರದ ಬೊಂಬೆಗಳು ಮತ್ತು ಶಿರಡಿ ಸಾಯಿಬಾಬಾ ದೇಗುಲದ ಬೊಂಬೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೇವೆ ಎಂದು ಜಯಮ್ಮ ಕುಂಬಯ್ಯ ವಿವರಿಸಿದರು.

ADVERTISEMENT

ಹಿರಿಯರಾದ ಕುಂಬಯ್ಯ, ಹಿರಿಯ ದಾದಿ ಮಂಜುಳ, ಎಂ.ಕೆ.ಪ್ರಶಾಂತ್‌, ಬಿ.ವಿ,ಗೀತಾ, ಎಂ.ಕೆ. ಪ್ರವೀಣ್‌, ಹಿಮಾನಿ, ಗೀತಾ ಇದ್ದರು. ರಾಜ ರಾಣಿ ಬೊಂಬೆ, ಸೈನಿಕರ, ರೈತರು ಬೊಂಬೆಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.