ADVERTISEMENT

ರಾಜಕಾಲುವೆ ಮೇಲೆ ಅಕ್ರಮ ರಸ್ತೆ: ಲೋಕಾಯುಕ್ತ ಎಂಜಿನಿಯರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 11:33 IST
Last Updated 19 ಜುಲೈ 2017, 11:33 IST
ರಾಜಕಾಲುವೆ ಮೇಲೆ ರಸ್ತೆ ನಿರ್ಮಿಸುವ ಸ್ಥಳಕ್ಕೆ ಲೋಕಾಯುಕ್ತ ಸಹಾಯಕ ಎಂಜಿನಿಯರ್ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ರಾಜಕಾಲುವೆ ಮೇಲೆ ರಸ್ತೆ ನಿರ್ಮಿಸುವ ಸ್ಥಳಕ್ಕೆ ಲೋಕಾಯುಕ್ತ ಸಹಾಯಕ ಎಂಜಿನಿಯರ್ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ದೊಡ್ಡಬಳ್ಳಾಪುರ: ‘ನಗರದ 6ನೇ ವಾರ್ಡ್ ರಂಗಪ್ಪ ಸರ್ಕಲ್ ಸಮೀಪ ತಿಗಳೆಬಾಗಾಯ್ತು ಸರ್ವೇ ನಂ.47, 81,82,83ರ ಸ್ವತ್ತಿನ ಮುಂಭಾಗದಲ್ಲಿ ಹಾದುಹೋಗಿರುವ ರಾಜಕಾಲುವೆ ಮೇಲೆ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ ಎನ್ನುವ ದೂರಿನ ಮೇರೆಗೆ ಲೋಕಾಯುಕ್ತ ಸಹಾಯಕ ಎಂಜಿನಿಯರ್ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೂರಿನಲ್ಲಿ ತಿಳಿಸಿರುವ ಸರ್ವೇ ನಂಬರ್‌ಗಳ ಸ್ವತ್ತಿನ ಮುಂಭಾಗದಲ್ಲಿ ಹಾದುಹೋಗಿರುವ ರಾಜಕಾಲುವೆ ಮೇಲೆ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ನಗರದ ರಾಜಶೇಖರ ಶೆಟ್ಟಿ ಅವರು ದೂರಿದ್ದರು.

ಪತ್ರಕರ್ತ ರಾಜಶೇಖರ ಶೆಟ್ಟಿ ಈ ಕುರಿತು ಮಾತನಾಡಿ, ‘ನಗರದ ಜೀವನಾಡಿಯಾದ ನಾಗರಕೆರೆಗೆ ಹೊಂದಿಕೊಂಡಿರುವ ರಾಜಕಾಲುವೆ ಮೇಲೆ ನಿಯಮಬಾಹಿರವಾಗಿ ರಸ್ತೆ ನಿರ್ಮಿಸಲಾಗಿದೆ.

ADVERTISEMENT

ಈ ಬಗ್ಗೆ ನಗರಸಭೆ ನೀಡಿರುವ ನಿರಾಪೇಕ್ಷಣೆ ಪತ್ರಕ್ಕೆ ಮಾಹಿತಿ ಹಕ್ಕಿನಡಿ ಕೇಳಿದರೂ ನಗರಸಭೆ ನೀಡಿಲ್ಲ ಎಂದರು. ತಹಶೀಲ್ದಾರ್ ಬಿ.ಎ. ಮೋಹನ್, ನಗರಸಭೆ ಪೌರಾಯುಕ್ತ ಡಾ.ಪಿ. ಬಿಳಿಕೆಂಚಪ್ಪ ಹಾಗೂ ನಗರಸಭೆ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.