ADVERTISEMENT

ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮೇ 2017, 8:43 IST
Last Updated 23 ಮೇ 2017, 8:43 IST

ಕೊಣ್ಣೂರ (ಗೋಕಾಕ): ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮ ವ್ಯಾಪ್ತಿಯ ಗೋಕಾಕ–ರೋಡ್‌ ರೈಲ್ವೆ ನಿಲ್ದಾಣದ ಹತ್ತಿರದ ಎಸ್.ಸಿ. ಹಾಗೂ ಎಸ್.ಟಿ. ಸಮುದಾಯಗಳ ಕೃಷಿಕರ ಜಮೀನು ಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕೊಳವೆ ಬಾವಿ ತೆರೆಯಲು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಳಗಾವಿ ಸಂಸದರ ನಿಧಿಯಲ್ಲಿ ಕೈಗೊಳ್ಳಲಾದ ಕಾಮಗಾರಿಯನ್ನು ಬೆಳಗಾವಿ ಸಂಸದ ಸುರೇಶ ಅಂಗಡಿ ವೀಕ್ಷಿಸಿದರು.

ಗೋಕಾಕ ನಗರಕ್ಕೆ ಅತ್ಯಂತ ಸಮೀಪದ ರೈಲು ನಿಲ್ದಾಣವಾಗಿರುವ ಗೋಕಾಕ ರೋಡ್‌ ರೈಲು ನಿಲ್ದಾಣದ ಮೂಲಕ ತೆರಳುವ ಎಲ್ಲ ಎಕ್ಸಪ್ರೆಸ್‌ ರೈಲುಗಳಿಗೆ ಕನಿಷ್ಠ ಒಂದು ನಿಮಿಷದ ನಿಲುಗಡೆ ಒದಗಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಸಂಸದರು, ಈ ಭಾಗದ ಜನತೆಯ ಆಶೋತ್ತರಗಳನ್ನು ರೈಲ್ವೆ ಇಲಾಖೆಯ ಗಮನಕ್ಕೆ ತರುವ ಪ್ರಾಮಾಣಿಕ ಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ADVERTISEMENT

ಬಿಜೆಪಿ ಮುಖಂಡರಾದ ಅಶೋಕ ಪೂಜಾರಿ, ಪಕ್ಷದ ಗೋಕಾಕ ಗ್ರಾಮೀಣ ಘಟಕ ಅಧ್ಯಕ್ಷ ವಿರುಪಾಕ್ಷ ಯಲಿಗಾರ, ರಮೇಶ ಹಿರೇಮಠ, ಅಸದ್ ಖಾನ್ ಜಗದಾಳ, ಕಾಡಣ್ಣಾ ಗಣಾಚಾರಿ, ರಾಮು ಹಾದಿಮನಿ, ಆದಪ್ಪ ಮಗದುಮ್ಮ, ಸುರೇಶ ಮಟಗಾರ, ಸಿಕಂದರ್, ರಾಜು ಹೊಳಿ, ಕುಮಾರ ಬೆಳವಿ, ಲಕ್ಕಪ್ಪ ತಹಶೀಲ್ದಾರ್, ಸುರೇಶ ಗುರವ, ವಿಠ್ಠಲ ಕಣಕಿಕೊಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.