ADVERTISEMENT

ಗೋವಾ ಕನ್ನಡಿಗರಿಗೆ ರಕ್ಷಣೆ ಕೊಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 6:12 IST
Last Updated 19 ಏಪ್ರಿಲ್ 2017, 6:12 IST

ಬೆಳಗಾವಿ: ಗೋವಾ ಬೈನಾ ಬೀಚ್‌ದಲ್ಲಿ ವಾಸವಿರುವ ಕನ್ನಡಿಗರಿಗೆ ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ವಿಶ್ವನಿರ್ಮಾಣ ಸಂಘಟನೆ ಆಗ್ರಹಿಸಿತು.ನಗರದಲ್ಲಿ ಸೋಮವಾರ ಮೆರವಣಿಗೆ ನಡೆಸಿದ ಸಂಘಟನೆಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

‘ಬೈನಾ ಬೀಚ್‌ದಲ್ಲಿರುವ ಕನ್ನಡಿಗರ ತೆರವಿಗೆ ಅಲ್ಲಿನ ಸರ್ಕಾರ ಮುಂದಾಗಿದೆ, ಈಗಾಗಲೇ ಇಂಥ ಕ್ರಮಗಳಿಂದ ಸಾವಿರಾರು ಕುಟುಂಬಗಳು ಆಸರೆ ಕಳೆದುಕೊಂಡು ನಿರಾಶ್ರಿತಗೊಂಡಿವೆ. ಈಗ ಮತ್ತೆ ಮನೆ ತೆರವುಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಇದನ್ನು ತಡೆಯಬೇಕು ಹಾಗೂ ಅಲ್ಲಿನ ಕನ್ನಡಿಗ ರಿಗೆ ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸಿ ಕೊಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳ ಬೇಕು’ ಎಂದು ಒತ್ತಾಯಿಸಿದರು.

ಬೈನಾ ಬೀಚ್‌ದಲ್ಲಿಯ ಮನೆಗಳನ್ನು  ತೆರವುಗೊಳಿಸಲು ನೀಡಿದ ನೋಟಿಸ್‌ ವಾಪಸು ಪಡೆಯಬೇಕು ಎಂದರು.ಸಂಘಟನೆಯ ರಾಜ್ಯ ಘಟಕದ ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷ ದಸ್ತಗೀರ ಎಚ್‌., ಜಿಲ್ಲಾ ಘಟಕದ ಅಧ್ಯಕ್ಷ ಮಹ  ಬೂಬ ಶೇಖ್‌, ಕಾರ್ಯಾಧ್ಯಕ್ಷ ರಾಹುಲ ರಂಗಣ್ಣವರ, ರಾಜು ದೊಡ್ಡಮನಿ, ಹಾರೂನ್‌ ಸೈಯದ್‌, ಆಶೀಫ್‌ ಮುಲ್ಲಾ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಿಹಾನಾ ಸಂಗೊಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ಅಸೂದೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.