ADVERTISEMENT

ತೋಳ ಕಚ್ಚಿ 16ಕ್ಕೂ ಹೆಚ್ಚು ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 4 ಮೇ 2016, 8:53 IST
Last Updated 4 ಮೇ 2016, 8:53 IST

ತೆಲಸಂಗ (ಬೆಳಗಾವಿ ಜಿಲ್ಲೆ):  ಸೋಮವಾರ ಮಧ್ಯರಾತ್ರಿ ಗ್ರಾಮಕ್ಕೆ ನುಗ್ಗಿದ ತೋಳ ಮನೆಯೊಂದರ ಮುಂದೆ ಮಲಗಿದ್ದ 15 ಮಂದಿಯನ್ನು ಕಚ್ಚಿ ಗಾಯಗೊಳಿಸಿದೆ.
ಗಾಯಗೊಂಡವರಲ್ಲಿ ಕೆಲವರನ್ನು ಅಥಣಿ ಖಾಸಗಿ ಆಸ್ಪತ್ರೆಗೆ ಹಾಗೂ ಗಂಭೀರವಾಗಿ ಗಾಯಗೊಂಡವರನ್ನು ಮೀರಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದ ಯಲ್ಲಮ್ಮದೇವಿ ದೇವಸ್ಥಾ ನದ ಸುತ್ತಲಿನ ವಸತಿ ಪ್ರದೇಶದಲ್ಲಿ ಮಲಗಿದ್ದ ಏಳು ವರ್ಷದ ಬಾಲಕಿ, ಕೆಲ ಮಹಿಳೆಯರು ಸೇರಿದಂತೆ  15 ಜನರನ್ನು ಕಚ್ಚಿ ಗಾಯಗೊಳಿಸಿದೆ. ಅದಕ್ಕೂ ಮುನ್ನ ಸಮೀಪದ ಅರಟಾಳ ಗ್ರಾಮದ ವ್ಯಕ್ತಿಯೊ ಬ್ಬರ ಮುಖಕ್ಕೂ ಕಚ್ಚಿ ಗಾಯಗೊಳಿಸಿದೆ.

ಗಾಯಗೊಂಡವರನ್ನು ಮಂಗಳ ವಾರ ಆಂಬುಲೆನ್ಸ್‌ನಲ್ಲಿ ಅಥಣಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ, ತೋಳವು ಅಂಬುಲೆನ್ಸ್‌ ಸಿಬ್ಬಂದಿಯನ್ನೂ ಬೆನ್ನತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.