ADVERTISEMENT

‘ಪುರುಷರ ಪ್ರೇರಣೆಯಿಂದ ಸಾಧನೆ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:56 IST
Last Updated 20 ಮಾರ್ಚ್ 2017, 6:56 IST

ಘಟಪ್ರಭಾ: ಶಿಕ್ಷಣದಲ್ಲಿ ವಿದ್ಯಾರ್ಥಿನಿ ಯರೆ ಮೇಲುಗೈ ಸಾಧಿಸುತ್ತಿರುವುದು ಉತ್ತಮ ಬೆಳವಣಿಗೆ ಆದರೆ, ಅವರ ಸಾಧನೆಗೆ ಒಬ್ಬ ತಂದೆ, ಒಬ್ಬ ಸಹೋ ದರ, ಪತಿ ಹೀಗೆ ಪುರುಷರು ಪರೋಕ್ಷ ವಾಗಿ ಪ್ರೇರಣೆ ನೀಡುತ್ತಿದ್ದಾರೆ ಎಂಬು ವುದನ್ನು ಅಲ್ಲಗಳೆಯುವಂತಿಲ್ಲ ಎಂದು ಬೆಳಗಾವಿ ಸರಸ್ವತಿ ಸಹಕಾರಿ ಶಾಲೆಯ ಶಿಕ್ಷಕಿ ಡಾ.ಭಾರತಿ ಟಿ. ಸವದತ್ತಿ ಹೇಳಿದರು.

ಸಮೀಪದ ಗೋಕಾಕಫಾಲ್ಸ್‌ನ ದಿ ವೋಲ್ಕಾರ್ಟ್‌ ಅಕಾಡೆಮಿ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಮುಖ್ಯಶಿಕ್ಷಕ ಎಂ.ಎಲ್.ಬಗನಾಳ ಅವರ ನಿವೃತ್ತಿ ನಿಮಿತ್ತ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತ ನಾಡಿದರು.

ಸನ್ಮಾನ ಸ್ವೀಕರಿಸಿದ ಮುಖ್ಯಶಿಕ್ಷಕ ಎಂ.ಎಲ್. ಬಗನಾಳ ಮಾತನಾಡಿದರು. ಶಿಕ್ಷಕ ಸಾಂಗಲಿ, ನಾಯಿಕ, ಶಾಲಾ ಆಡ ಳಿತ ಮಂಡಳಿ ಅಧ್ಯಕ್ಷ ಆರ್.ಆರ್. ಪಾಟೀಲ ಇದ್ದರು.

ಮಿಲ್ಲಿನ ಮಾನವ ಸಂಪನ್ಮೂಲ ವಿಭಾಗ ಪ್ರಧಾನ ವ್ಯವಸ್ಥಾಪಕ ಪ್ರದೀಪ ಅಂಧಾರೆ, ಕಾರ್ಮಿಕ ಅಧಿಕಾರಿ ಚಿದಂಬರ ಕುಲಕರ್ಣಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಂ.ಎಸ್.ತಳವಾರ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಮಪ್ಪ ಖನಗಾರ, ಧುರೀಣ ಮಹಾನಿಂಗ ಸಣ್ಣಕ್ಕಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.