ADVERTISEMENT

ಮಕ್ಕಳ ಚಲನಚಿತ್ರೋತ್ಸವ 27ರಿಂದ

ನಗರದ ಐನಾಕ್ಸ್, ಬಿಗ್‌ ಸಿನೆಮಾದ ಪರದೆಗಳಲ್ಲಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:09 IST
Last Updated 19 ಜನವರಿ 2017, 6:09 IST
ಮಕ್ಕಳ ಚಲನಚಿತ್ರೋತ್ಸವ 27ರಿಂದ
ಮಕ್ಕಳ ಚಲನಚಿತ್ರೋತ್ಸವ 27ರಿಂದ   

ಬೆಳಗಾವಿ: ಜಿಲ್ಲೆಯಲ್ಲಿ ಜ. 27ರಿಂದ ಫೆ. 2ರವರೆಗೆ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾಧಿ ಕಾರಿ ಎನ್. ಜಯರಾಮ್ ತಿಳಿಸಿದರು.

ಮಕ್ಕಳ ಚಲನಚಿತ್ರೋತ್ಸವಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ಚಲನಚಿತ್ರಗಳನ್ನು ಪ್ರತಿವರ್ಷ ಪ್ರದರ್ಶಿಸಲಾಗುತ್ತಿದೆ. ಅದರಂತೆ ಪ್ರಸಕ್ತ ಸಾಲಿನ ಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿನ ಮಕ್ಕಳಿಗೆ ಕನ್ನಡ ಚಲನಚಿತ್ರ ತೋರಿಸಲು ನಿರ್ಧರಿಸ ಲಾಗಿದೆ’ ಎಂದು ಹೇಳಿದರು.

‘ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಚಲನಚಿತ್ರಮಂದಿರದಲ್ಲಿ ಪ್ರತಿ ವಿದ್ಯಾರ್ಥಿಗೆ ₹ 15 ಹಾಗೂ ತಾಲ್ಲೂಕು ಕೇಂದ್ರದಲ್ಲಿರುವ ಚಿತ್ರಮಂದಿರಗಳಲ್ಲಿ ₹ 10 ಟಿಕೆಟ್ ದರ ನಿಗದಿಪಡಿಸಲಾಗಿದೆ. ಒಂದ ವಾರ ಕಾಲ ಪ್ರತಿದಿನ ಬೆಳಿಗ್ಗೆ 8.30ರಿಂದ 10.30ರವರೆಗೆ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಬೆಳಗಾವಿ ನಗರದಲ್ಲಿ ಐನಾಕ್ಸ್ ಹಾಗೂ ಬಿಗ್ ಸಿನೆಮಾ ಚಿತ್ರಮಂದಿರಗಳಲ್ಲಿರುವ ಐದು ಪರದೆಗಳಲ್ಲಿ ಮಕ್ಕಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಉಳಿದಂತೆ ಆಯಾ ತಾಲ್ಲೂಕು ಕೇಂದ್ರ ಹಾಗೂ ಪಟ್ಟಣಗಳ ಚಿತ್ರಮಂದಿರಗಳಲ್ಲಿ ಚಿತ್ರೋತ್ಸವ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಸಮೀಪದವರನ್ನು ಕರೆತನ್ನಿ: ‘ಸಾಧ್ಯ ವಾದಷ್ಟು ಚಿತ್ರಮಂದಿರದ ಸಮೀಪ ದಲ್ಲಿರುವ ಶಾಲಾ ಮಕ್ಕಳನ್ನು ಕರೆ ತರಬೇಕು. ನೂರಾರು ಮಕ್ಕಳು ಚಿತ್ರ ವೀಕ್ಷಣೆಗೆ ಆಗಮಿಸುವುದರಿಂದ ಚಿತ್ರ ಮಂದಿರಗಳನ್ನು ಸ್ವಚ್ಛಗೊಳಿಸಬೇಕು ಹಾಗೂ ಕುಡಿಯಲು ಶುದ್ಧ ನೀರನ್ನು ಉಚಿತವಾಗಿ ಪೂರೈಸಬೇಕು’ ಎಂದು ಚಲನಚಿತ್ರಮಂದಿರಗಳ ಮಾಲೀಕರಿಗೆ ಸೂಚನೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಸ್.ವೈ. ಹಳಿಂಗಳಿ, ಗಜಾನನ ಮನ್ನಿಕೇರಿ, ಚಲನಚಿತ್ರಮಂದಿ ರಗಳ ಮಾಲೀಕರ ಸಂಘದ ಅಧ್ಯಕ್ಷ ಅವಿನಾಶ್‌ ಪೋತದಾರ, ಕ್ಷೇತ್ರ ಶಿಕ್ಷ ಣಾಧಿಕಾರಿಗಳು, ಚಿತ್ರಮಂದಿರ ಮಾಲೀಕರು, ಚಿಕ್ಕಬಳ್ಳಾಪುರದ ಕರ್ನಾ ಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆ ಪ್ರತಿನಿಧಿಗಳು ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.