ADVERTISEMENT

‘ರೈತರ ಕೈ ಹಿಡಿಯುವ ಕಲ್ಲಂಗಡಿ’

ಮೂಡಲಗಿಯಲ್ಲಿ ನಡೆದ ಕ್ಷೇತ್ರೋತ್ಸವದಲ್ಲಿ ಡಾ. ಕಾಂತರಾಜು ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 10:00 IST
Last Updated 28 ಜನವರಿ 2017, 10:00 IST
‘ರೈತರ ಕೈ ಹಿಡಿಯುವ ಕಲ್ಲಂಗಡಿ’
‘ರೈತರ ಕೈ ಹಿಡಿಯುವ ಕಲ್ಲಂಗಡಿ’   

ಮೂಡಲಗಿ: ‘ಕಲ್ಲಂಗಡಿಯು ರೈತರಿಗೆ ಲಾಭದಾಯಕ ಬೆಳೆಯಾಗಿದ್ದು, ಕಲ್ಲಂಗಡಿ ಬೆಳೆಯಲು ರೈತರು ಮುಂದೆ ಬರಬೇಕು’ ಎಂದು ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯದ ವಿಸ್ತರಣಾ ಘಟಕದ ಮುಖ್ಯಸ್ಥ ಡಾ. ಕಾಂತರಾಜು ವಿ. ಹೇಳಿದರು.

ಇಲ್ಲಿಗೆ ಸಮೀಪದ ಹೊನಕುಪ್ಪಿ ಗ್ರಾಮದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ  ಕಲ್ಲಂಗಡಿ ಬೆಳೆದ ಹಣಮಂತಪ್ಪ ಭೀಮಪ್ಪ ಸಿದ್ದಾಪೂರ ಅವರ ತೋಟ ದಲ್ಲಿ ಏರ್ಪಡಿಸಿದ್ದ ಕಲ್ಲಂಗಡಿ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು ಕಡಿಮೆ ಖರ್ಚಿನಲ್ಲಿ ಕಲ್ಲಂಗಡಿ ಬೆಳೆಯು ಅಧಿಕ ಆದಾಯ ತಂದುಕೊಡುತ್ತದೆ ಎಂದರು.

ಕಲ್ಲಂಗಡಿ ಬೆಳೆಗೆ ಬರುವ ರೋಗಗಳು, ಅವುಗಳನ್ನು ಗುರುತಿಸು ವುದು ಮತ್ತು ಹತೋಟಿ ಕ್ರಮ ಹಾಗೂ ರೋಗಗಳು ಬಾರದಂತೆ ಮುಂಜಾಗ್ರತೆ ಕ್ರಮಗಳ ಬಗ್ಗೆ ರೈತರಿಗೆ ತಿಳಿಸಿಕೊಟ್ಟರು.

ಮಹಾವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ. ರಾಮನಗೌಡ ಹಡಲಗೇರಿ ಅವರು ಮಾತನಾಡಿ ಕಲ್ಲಂಗಡಿ ಬೆಳೆಗೆ ಬರುವ ವಿವಿಧ ಕೀಟಗಳು, ಅವುಗಳ ಗುರುತಿಸು ವಿಕೆ ಬಗ್ಗೆ ತಿಳಿಸಿ ಸಾವಯವ ಕೀಟನಾಶಕ ಗಳನ್ನು ಬಳಸುವ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮನವರಿಕೆ ಮಾಡಿ ಕೊಟ್ಟರು.

ಗೋಕಾಕ ತಾಲ್ಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಾನಮಟ್ಟಿ ಮಾತನಾಡಿ ತೋಟಗಾರಿಕೆಗೆ ಇಲಾಖೆಯಿಂದ ಹಲವಾರು ಯೋಜನೆಗಳು ಇದ್ದು ಅವು ಗಳನ್ನು ಸದುಪಯೋಗಪಡಿಸಿಕೊಳ್ಳ ಬೇಕು ಎಂದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ನವೀನ ಬಡಿಗೇರ ಭಾಗವಹಿಸಿದ್ದರು. ಬಸಪ್ಪ ಗಂಗರಡ್ಡಿ, ಈಶ್ವರ ಲಗಳಿ, ಮೆಂಕಪ್ಪ ಗಂಗರಡ್ಡಿ, ಚಂದ್ರ ಶೇಖರ ಹಟ್ಟಿ, ಪಾಂಡಪ್ಪ ಅ. ಹರಕೇರಿ, ಸುಭಾಷ ಗಂಗರಡ್ಡಿ, ಬಸಪ್ಪ ತೆಗ್ಗಿ ಹಾಗೂ 50ಕ್ಕೂ ಅಧಿಕ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.