ADVERTISEMENT

ಸಿದ್ದರಾಮಯ್ಯಗೆ ಕಮಿಷನ್‌ನಲ್ಲಿ ಪಾಲು– ಬಿಎಸ್‌ವೈ ಆರೋಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 6:34 IST
Last Updated 21 ನವೆಂಬರ್ 2017, 6:34 IST
ಹಿರೇಬಾಗೇವಾಡಿಯಲ್ಲಿ ಸೋಮವಾರ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮವನ್ನು ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್‌ಸಿಂಗ್ ತುಳಸಿ ಗಿಡಕ್ಕೆ ನೀರುಣಿಸಿವ ಮೂಲಕ ಚಾಲನೆ ನೀಡಿದರು. ಪಕ್ಷದ ಮುಖಂಡರಾದ ಬಿ.ಎಸ್‌. ಯಡಿಯೂರಪ್ಪ, ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ, ಈರಣ್ಣ ಕಡಾಡಿ, ಉಮೇಶ ಕತ್ತಿ, ಭಾಗವಹಿಸಿದ್ದರು
ಹಿರೇಬಾಗೇವಾಡಿಯಲ್ಲಿ ಸೋಮವಾರ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮವನ್ನು ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್‌ಸಿಂಗ್ ತುಳಸಿ ಗಿಡಕ್ಕೆ ನೀರುಣಿಸಿವ ಮೂಲಕ ಚಾಲನೆ ನೀಡಿದರು. ಪಕ್ಷದ ಮುಖಂಡರಾದ ಬಿ.ಎಸ್‌. ಯಡಿಯೂರಪ್ಪ, ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ, ಈರಣ್ಣ ಕಡಾಡಿ, ಉಮೇಶ ಕತ್ತಿ, ಭಾಗವಹಿಸಿದ್ದರು   

ಹಿರೇಬಾಗೇವಾಡಿ:‘ರಾಜ್ಯ ಸರ್ಕಾರದ ಸಚಿವರು ಕಮಿಷನ್‌ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಆ ಪಕ್ಷದ ಶಾಸಕಾಂಗ ಸಭೆಯಲ್ಲಿ ಸಚಿವ ಎಚ್‌.ಆಂಜನೇಯ ವಿರುದ್ಧ ಪಕ್ಷದವರೇ ಈ ಆರೋಪ ಮಾಡಿದ್ದಾರೆ. ಕಮಿಷನ್‌ ಪಾಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹೋಗುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

ಬೆಳಗಾವಿ ಗ್ರಾಮೀಣ ಬಿಜೆಪಿ ವಿಧಾನಸಭಾ ವತಿಯಿಂದ ಇಲ್ಲಿ ಏರ್ಪಡಿಸಲಾದ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್‌ಸಿಂಗ್‌ ಮಾತನಾಡಿ, ಭಾರತ ಶಕ್ತಿಶಾಲಿ ರಾಷ್ಟ್ರವಾಗಿದೆ. ನಮ್ಮತ್ತ ಯಾರಾದರೂ ಕೆಟ್ಟ ದೃಷ್ಟಿಯಿಂದ ನೋಡಿದರೆ ಏನಾಗುತ್ತದೆ ಎನ್ನುವುದನ್ನು ಸರ್ಜಿಕಲ್‌ ದಾಳಿಯ ಮೂಲಕ ಪ್ರಧಾನಿಯವರು ತೋರಿಸಿಕೊಟ್ಟಿದ್ದಾರೆ ಎಂದರು.

ಕೇಂದ್ರ ಸಚಿವ ಅನಂತಕುಮಾರ್‌ ಮಾತನಾಡಿ, ರಾಜ್ಯದ ಕಾಂಗ್ರೆಸ್‌ ಸರ್ಕಾರವು ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಆರೋಪಿಸಿದರು. ಗ್ರಾಮೀಣ ಶಾಸಕ ಸಂಜಯ ಪಾಟೀಲ ಮಾತನಾಡಿ, ರಾಜ್ಯವನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಬೇರು ಸಮೇತ ಕಿತ್ತೆಸೆಯುವುದೇ ಪರಿವರ್ತನಾ ಯಾತ್ರೆಯ ಉದ್ದೇಶ ಎಂದರು. ಸಂಸದೆ ಶೋಭಾ ಕರಂದ್ಲಾಚೆ ಮಾತನಾಡಿದರು.

ADVERTISEMENT

ಪಕ್ಷದ ಮುಖಂಡರಾದ ರಮೇಶ ಜಿಗಜಿಣಗಿ, ಉಮೇಶ ಕತ್ತಿ, ಪ್ರಹ್ಲಾದ್‌ ಜೋಶಿ, ಸುರೇಶ ಅಂಗಡಿ, ಮಹಾಂತೇಶ ಕವಟಗಿಮಠ, ವಿ.ಸೋಮಣ್ಣ, ಶಶಿಕಾಂತ ನಾಯಿಕ, ಪ್ರಭಾಕರ ಕೋರೆ, ವಿ.ಐ. ಪಾಟೀಲ, ಜಗದೀಶ ಹಿರೇಮನಿ, ಕಲಾವತಿ ಧರೆಣ್ಣವರ, ರೇಣುಕಾ ಪಾಟೀಲ ಇದ್ದರು.

ಸೀರೆ ಹಂಚಿದ ಆರೋಪ; ಕಾರ್ಯ ಕ್ರಮದ ಮೆರವಣಿಗೆಯಲ್ಲಿ ಪಾಲ್ಗೊಂಡ ಕುಂಭಹೊತ್ತ ಮಹಿಳೆ ಯರಿಗೆ ಸೀರೆಯನ್ನು ಬಿಜೆಪಿ ಮುಖಂಡರು ಕಾಣಿಕೆಯಾಗಿ
ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.