ADVERTISEMENT

ಹೊಟೇಲ್‌ ಉದ್ಯಮಿ ಬರ್ಬರ ಕೊಲೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2016, 5:39 IST
Last Updated 23 ಡಿಸೆಂಬರ್ 2016, 5:39 IST

ನಿಪ್ಪಾಣಿ: ತಾವು ನಿರ್ಮಿಸುತ್ತಿದ್ದ ಹೊಟೇಲಿನಲ್ಲಿಯೇ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಘಟನೆ ನಗರದ ಪ್ರತಿಭಾನಗರದಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ರಮೇಶ ಸದಾಶಿವ ಚೌಗುಲೆ (43) ಕೊಲೆಯಾದವರು. 

ವಾಚಮನ್‌ ಬೂದಿಹಾಳ ಗ್ರಾಮದ ಆಕಾಶ ಕುಲಕರ್ಣಿ ಸಹ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಕೊಲ್ಹಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಪ್ರತಿಭಾನಗರದಲ್ಲಿ ಸುಮಾರು 22 ಸಾವಿರ ಚದರ ಅಡಿ ಕ್ಷೇತ್ರದಲ್ಲಿ ಭವ್ಯ ಹೊಟೇಲ್‌ ನಿರ್ಮಿಸುತ್ತಿದ್ದ ರಮೇಶ 2017ರ ಜ.26ರಂದು ಅದನ್ನು ಉದ್ಘಾ ಟನೆ ಮಾಡುವ ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ.

ಬುಧವಾರ ರಾತ್ರಿ ಮನೆಗೆ ಬರದೆ ಇದ್ದ ಪರಿಣಾಮ ಪತ್ನಿ ನೇಹಾ ಗುರುವಾರ ಬೆಳಿಗ್ಗೆ ರಮೇಶನ ಶೋಧ ನಡೆಸಿದಾಗ ನಿರ್ಮಾಣದ ಹಂತದಲ್ಲಿ ರುವ ಹೊಟೇಲಿನ ಒಂದು ಕೊಠಡಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ರಮೇಶನ ಶವ ಬಿದ್ದಿದ್ದು ಕಂಡುಬಂದಿದೆ. ಅವರಿಗೆ ಪುತ್ರ, ಪುತ್ರಿ ಇದ್ದಾರೆ.

ಕೊಲೆಗೆ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿ ದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‌.ಪಿ. ರವಿಂದ್ರ ಗಡಾದ, ಚಿಕ್ಕೋಡಿ ಡಿ.ವೈ. ಎಸ್‌.ಪಿ. ಬಿ.ಎಸ್‌.ಅಂಗಡಿ, ಪಿ.ಎಸ್‌.ಐ. ಸುನೀಲ ಪಾಟೀಲ, ಬೆಳಗಾವಿಯ ಶ್ವಾನ ದಳ, ಬೆರಳಚ್ಚು ತಜ್ಞರು ಭೆಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

ಬೆಳಗುಂದಿಯಲ್ಲಿ ಮಹಿಳೆ ಕೊಲೆ
ಬೆಳಗಾವಿ: ಮಹಿಳೆಯೊಬ್ಬರನ್ನು ಮಫ್ಲರ್‌ನಿಂದ ಬಿಗಿದು ಕೊಲೆ ಮಾಡಿ ರುವ ಘಟನೆ ತಾಲ್ಲೂಕಿನ ಬೆಳಗುಂದಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೃತ ಮಹಿಳೆಯನ್ನು ಗೀತಾ   ಮಲ್ಲಪ್ಪ ಕಾಂಬ್ಳೆ (30) ಎಂದು ಗುರುತಿಸಲಾಗಿದೆ. ‘ಆಕೆಗೆ ಪತಿ ಮಲ್ಲಪ್ಪ ಕಾಂಬ್ಳೆ ಕಿರುಕುಳ ನೀಡುತ್ತಿದ್ದ. ಆತನೆ ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿ ಪೋಷಕರು ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಚಿನ್ನಾಭರಣ ಕಳವು
ಬೆಳಗಾವಿ: ಮನೆಯ ಕಿಟಕಿಯ ಗ್ರಿಲ್‌ ತೆಗೆದು ಒಳನುಗ್ಗಿದ ಕಳ್ಳರು ಸುಮಾರು ₹ 7 ಲಕ್ಷ ಮೌಲ್ಯದ ₹ 350 ಗ್ರಾಂ ಚಿನ್ನಾಭರಣ ಹಾಗೂ ₹ 4 ಲಕ್ಷ ನಗದು ಕಳವು ಮಾಡಿರುವ ಘಟನೆ ಇಲ್ಲಿನ ಟಿಳಕವಾಡಿಯ ಸ್ವಾಮಿ ವಿವೇಕಾನಂದ ಕಾಲೊನಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಬಾಲಕೃಷ್ಣ ಗೋಪಾಲ ಗೋಡ್ಸೆ ಎನ್ನುವವರಿಗೆ ಸೇರಿದ ಮನೆಯಲ್ಲಿ ಕಳವು ನಡೆದಿದೆ.

‘ಮನೆಯವರೆಲ್ಲರೂ ಕಾಕತಿ ಗ್ರಾಮ ದಲ್ಲಿ ಲಕ್ಷ್ಮಿದೇವಿ ಜಾತ್ರೆಗೆ ಹೋಗಿ ರಾತ್ರಿ 10.45ರ ವೇಳೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಯಾರೋ ಕಳ್ಳರು ದೇವರ ಕೋಣೆಯ ದಕ್ಷಿಣ ಬದಿಯ ಗೋಡೆಯಲ್ಲಿನ ಕಿಟಕಿಯ ಗ್ರಿಲ್ ಮೀಟಿ ತೆಗೆದು ಒಳನುಗ್ಗಿ ಬೆಡ್ ರೂಂನ ಅಲ್ಮೆರಾ ದಲ್ಲಿದ್ದ 350 ಗ್ರಾಂ. ತೂಕದ ಬಂಗಾರದ ಆಭರಣಗಳು                    (ನೆಕ್ಲೆಸ್, ಮಂಗಳಸೂತ್ರ, ಉಂಗುರ, ಕಿವಿಯೋಲೆ) ಹಾಗೂ ₹ 4 ಲಕ್ಷ ಕಳವು ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.