ADVERTISEMENT

‘ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಸಂಜೀವಿನಿ’

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 9:48 IST
Last Updated 2 ಆಗಸ್ಟ್ 2015, 9:48 IST

ಹಾರೂಗೇರಿ: ‘ಸ್ಪರ್ಧಾತ್ಮಕ ಯುಗದಲ್ಲಿ ಪರಿಪೂರ್ಣ ಶಿಕ್ಷಣವೆಂಬುವುದು ಉಜ್ವಲ ಭವಿಷ್ಯದ ಜೀವನಕ್ಕೆ ಸಂಜೀವಿನಿ ಇದ್ದಂತೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಒಳ್ಳೆಯ ಮೌಲ್ಯಗಳನ್ನು ಜೀವನದಲ್ಲಿ ಅಳ ವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಹೊರಹೊಮ್ಮಬಹುದು’ ಎಂದು ಯುವ ಧುರಿಣ ಡಿ.ಕೆ.ಪ್ರಕಾಶ ಹೇಳಿದರು.

ಇಲ್ಲಿಯ ಜಿ.ವಿ.ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿ ಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳಲ್ಲಿ ದೇಶದ ಸಂಸ್ಕೃತಿಯ ಜೊತೆಗೆ ಒಳ್ಳೆಯ ಸಂಸ್ಕಾರ ಮೂಡಿಸಬೇಕು ಎಂದು ಹೇಳಿದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಜ್ಞಾನಾರ್ಜನೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಮಾನ ಸಿಕ ಮತ್ತು ಶಾರೀರಿಕವಾಗಿ ಸದೃಢ ರಾಗಬೇಕು ಎಂದು ಸರ್ಕಾರಿ ಪ್ರಾಥಮಿಕ ಶಾಲೆಯ  ಮುಖ್ಯ ಶಿಕ್ಷಕ ಬಿ.ಕೆ.ಅಣ್ಣಾನವರ ಕರೆ ನೀಡಿದರು.

ಜಿ.ವಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾಟೀಲ, ಎಂ.ಡಿ. ಶಹರಿ, ಮುಖ್ಯೋಪಾಧ್ಯಾಯ ಎಂ.ಕೆ.ತೇಲಿ, ಎಸ್.ಎಸ್. ಶಿವಾಪುರ, ಎಸ್.ಎಲ್. ಭಜಂತ್ರಿ, ಎಸ್.ಕೆ.ಕೆಳಗಡೆ, ಶಿಕ್ಷಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಎಸ್.ವಿ.ಮಾಂಗ್ ಸ್ವಾಗತಿಸಿದರು. ಕೆ.ಎಸ್.ಮೇತ್ರಿ ಕಾರ್ಯಕ್ರಮ ನಿರೂಪಿಸಿ ದರು. ಕೆ.ವೈ.ಬಾನೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.