ADVERTISEMENT

ಅಂಗವಿಕಲರಲ್ಲಿ ಆತ್ಮವಿಶ್ವಾಸ ತುಂಬಬೇಕು: ಗೋಪಿನಾಥ್

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 20:32 IST
Last Updated 29 ಜುಲೈ 2014, 20:32 IST
ಬೋಯಿಂಗ್ ವಿಮಾನ ಸಂಸ್ಥೆಯು ಲಿಂಗಾರಾಜಪುರದ ಎಪಿಡಿ ಸೇವಾ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಗಾಲಿ ಕುರ್ಚಿ­ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅರವಿಂದ್, ಎಪಿಡಿ ಸಂಸ್ಥೆಯ ದರ್ಶನ್,  ಬೋಯಿಂಗ್ ಸಂಸ್ಥೆಯ ಶಪಾಲಿ, ಅಜಿತ್, ರಾಜೀವ್ ಮತ್ತಿತರರು ಉಪಸ್ಥಿತರಿದ್ದರು

ಹೆಣ್ಣೂರುಬಾಣಸವಾಡಿ: ‘ಅಂಗವಿ­ಕಲರಿಗೆ ಪ್ರೋತ್ಸಾಹ ನೀಡುವ ಮೂಲಕ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಬೇಕು’ ಎಂದು ಎಪಿಡಿ (ಅಸೋಸಿಯೇಷನ್ ಆಫ್ ಪಿಪಲ್ ವಿತ್ ಡಿಸೆಬಿಲಿಟಿ) ಕಾರ್ಯಕ್ರಮ ನಿರ್ದೇಶಕ ಗೋಪಿನಾಥ್ ತಿಳಿಸಿದರು. 

ಬೋಯಿಂಗ್ ವಿಮಾನ ಸಂಸ್ಥೆಯು ಲಿಂಗಾರಾಜಪುರದ ಎಪಿಡಿ ಸೇವಾ ಸಂಸ್ಥೆಯ ಆವರಣದಲ್ಲಿ  ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು ವಿತರಿಸಿ ಮಾತನಾಡಿದರು.

‘ಸ್ವಯಂ ಸೇವಾ ಸಂಸ್ಥೆಗಳು  ಅಂಗ­ವಿ­ಕಲ ಮಕ್ಕಳ ಅಭಿವೃದ್ಧಿಗೆ ಮುಂದಾ­ಗ­ಬೇಕು ಆ ಮೂಲಕ ಅಂಗವಿಕಲ ಮಕ್ಕ­ಳಿಗೆ ಆತ್ಮಸ್ಥೈರ್ಯ ತುಂಬ ಬೇಕು’ ಎಂದು ಹೇಳಿದರು.

‘ಎಪಿಡಿ ಸಂಸ್ಥೆಯು 55 ವರ್ಷಗಳಿಂದ ಅಂಗವಿಕಲರ  ಬೆಳವಣಿಗೆಗೆ ಪೂರಕವಾಗಿ ನಿಂತಿದೆ. ಸಂಸ್ಥೆಯಲ್ಲಿ ಅಂಗವಿಕಲ ಮಕ್ಕಳಿಗೆ ಶಿಕ್ಷಣ, ಮಾನಸಿಕ ವಿಕಾಸ, ಕಲೆ, ಉದ್ಯೋಗ ತರಬೇತಿ ಸೇರಿದಂತೆ   30 ಕ್ಕೂ ಮಕ್ಕಳ ವಿಕಾಸ ಕಾರ್ಯ­ಕ್ರಮ­ಗಳನ್ನು ಮಾಡಲಾಗುವುದು’ ಎಂದು ವಿವರಿಸಿದರು.

ಬೋಯಿಂಗ್ ಸಂಸ್ಥೆಯ ಸದಸ್ಯ ಅಜಿತ್ ಮಾತನಾಡಿ,  ‘ಸಮಾಜದಲ್ಲಿ  ಅಂಗವೈಕಲ್ಯತೆಯನ್ನು  ತೊಡೆದು ಹಾಕಲು ಸ್ವಯಂ ಸೇವಾ ಸಂಸ್ಥೆಗಳು  ಮುಂದಾಗಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.